ಮಡಿಕೇರಿ,ಜು.೨೧: ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಸಮಾಜ ದಿಂದ ವಿರೋಧವಾಗಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಘಟಕ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಮಹಾಸಭಾದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಅವರು, ಸಮಾಜದಿಂದ ಆಯ್ಕೆಯಾಗಿರುವ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶದೊAದಿಗೆ ರಾಜಕೀಯ ಅಸ್ಥಿರತೆ ಎದುರಾಗಲಿದೆ. ಯಾವದೇ ಕಾರಣಕ್ಕೂ ಅವರನ್ನು ಪದಚ್ಯುತಿ ಗೊಳಿಸದೆ ಪೂರ್ಣಾವಧಿ ಆಡಳಿತ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ನಮ್ಮ ಸಮಾಜದ ನಾಯಕರಿಗೆ
(ಮೊದಲ ಪುಟದಿಂದ) ಪೂರ್ಣಾವಧಿ ಕಾಲ ಆಡಳಿತ ನೀಡಲು ಸಾಧ್ಯವಾಗಿಲ್ಲ. ಇದೀಗ ಯಡಿಯೂರಪ್ಪ ಅವರಿಗೆ ಮತ್ತದೇ ಪರೀಕ್ಷೆ ಎದುರಾಗಿದೆ, ಇದನ್ನು ಖಂಡಿಸುವದಾಗಿ ಹೇಳಿದ ಅವರು, ಇದರಿಂದಾಗಿ ಸಮಾಜದ ಪ್ರಮುಖರು ಪಕ್ಷ ಸಂಘಟನೆಯಿAದ ವಿಮುಖರಾಗುವ ಅಥವಾ ಪಕ್ಷದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಯಡಿಯೂರಪ್ಪನವರು ಯಾವದೇ ಜಾತಿಗೆ ಸೀಮಿತರಾದ ವ್ಯಕ್ತಿಯಲ್ಲ, ಎಲ್ಲ ಜನಾಂಗದವರನ್ನು ಸರಿ ಸಮಾನರಾಗಿ ಕಂಡಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲೇ ಸರಿಪಡಿಸಿಕೊಳ್ಳಬೇಕಿದೆ, ಬದಲಾಯಿಸುವ ಬಗ್ಗೆ ಇದುವರೆಗೆ ಯಾವದೇ ಕಾರಣ ತಿಳಿದುಬಂದಿಲ್ಲ, ಹಾಗಾಗಿ ಸಮಾಜ ಅವರ ಬೆನ್ನಿಗೆ ಸಹಾಯಕ್ಕಾಗಿ ನಿಂತಿದೆ ಎಂದು ಹೇಳಿದರು.
ಸಮಾಜದ ಕಾರ್ಯದರ್ಶಿ ಶಾಂಭಶಿವ ಮೂರ್ತಿ ಮಾತನಾಡಿ, ಯಡಿಯೂರಪ್ಪ ಅವರ ಬದಲಾವಣೆಗೆ ನಿಖರ ಕಾರಣ ಹೇಳುತ್ತಿಲ್ಲ, ಏಕಾಎಕಿ ಕೆಳಗಿಳಿಸುವದು ಸರಿಯಲ್ಲ, ರಾಜಕೀಯವಾಗಿ ನಿವೃತ್ತಿ ಹೊಂದುವ ಕಾಲದಲ್ಲಿ ಈ ರೀತಿಯಾಗಿ ಅವಮಾನ ಮಾಡಿ ಕಳುಹಿಸುವದು ಶೋಭೆಯಲ್ಲ, ಈ ಹಿನ್ನೆಲೆಯಲ್ಲಿ ಸಮುದಾಯದವರು ಅವರ ಬೆನ್ನೆಲುಬಾಗಿ ಇರುವದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಖಜಾಂಚಿ ಉದಯಕುಮಾರ್, ನಿರ್ದೇಶಕ ಶುಭಶೇಖರ್ ಇದ್ದರು.