ಮಡಿಕೇರಿ, ಜು. ೨೧: ತಾ.೨೦ ರಂದು ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯಾದ್ಯಂತ ೬,೬೬,೪೯೭ ವಿದ್ಯಾರ್ಥಿ ಗಳ ಪೈಕಿ ೨,೨೩೯ ಮಂದಿ ೬೦೦ ಕ್ಕೆ ೬೦೦ ಅಂಕಗಳನ್ನು ಪಡೆಯುವ ಮೂಲಕ ಶೇ.೧೦೦ ಫಲಿತಾಂಶ ಸಾಧಿಸಿದ್ದಾರೆ.

ತಾ.೨೦ ರಂದು ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ೬೦೦ ಕ್ಕೆ ೫೯೦ ಮತ್ತು ಹೆಚ್ಚಿನ ಅಂಕಗಳು ಪಡೆದ ವಿದ್ಯಾರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಪೂರ್ಣ ಹೆಸರು, ೬೦೦ ಕ್ಕೆ ಪಡೆದಿರುವ ಒಟ್ಟು ಅಂಕಗಳು, ವಿಷಯ, ಕಾಲೇಜಿನ ಹೆಸರು, ಹಾಗೂ ಪೋಷಕರ ಹೆಸರನ್ನೊಳಗೊಂಡ ವಿವರವನ್ನು ತಾ.೨೨(ಇಂದು)ರ ಸಂಜೆ ೫ ಗಂಟೆಯ ಒಳಗಾಗಿ ವಾಟ್ಸಾö್ಯಪ್ ಮೊ.ಸಂಖ್ಯೆ ೯೦೩೬೧೪೯೨೫೨ ಗೆ ಕಳುಹಿಸಿಕೊಡುವಂತೆ ಕೋರಿದೆ.(ಮೊದಲ ಪುಟದಿಂದ) ಕೊಡಗು ಜಿಲ್ಲೆಯಲ್ಲಿ ನಾಲ್ವರು ಶೇ. ೧೦೦ ಅಂಕಗಳನ್ನು ಪಡೆದಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವಿಷ್ಣುಮೂರ್ತಿ ಅವರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ಸಂತ ಮೈಕಲರ ಕಾಲೇಜಿನ ಅವ್ಯಕ್ತ ಕೆ ವಿಜ್ಞಾನ (Pಅಒಅ) ವಿಭಾಗದಲ್ಲಿ, ಸೋಮವಾರಪೇಟೆ ಸಂತ ಜೋಸೆಫರ ಕಾಲೇಜಿನ ನೇಹಾ ಗೌಡ ಹೆಚ್.ಕೆ. ವಾಣಿಜ್ಯ ವಿಭಾಗದಲ್ಲಿ, ಗೋಣಿಕೊಪ್ಪ ಕಾಪ್ಸ್ ಕಾಲೇಜಿನ ಪಿ.ಜಿ. ಲಿಶಾ ವಿಜ್ಞಾನ (Pಅಒಃ) ವಿಭಾಗದಲ್ಲಿ ಹಾಗೂ ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಎನ್.ಪಿ. ಪ್ರಹರ್ಷಿತಾ ವಾಣಿಜ್ಯ ವಿಭಾಗದಲ್ಲಿ ೬೦೦ ಕ್ಕೆ ೬೦೦ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಅವ್ಯಕ್ತ ಅವರು ಮಡಿಕೇರಿಯ ವಕೀಲ ಕೃಷ್ಣಭಟ್ ಹಾಗೂ ಗೀತಾ ಕೃಷ್ಣ ದಂಪತಿಯ ಪುತ್ರಿ. ನೇಹಾ ಗೌಡ ಅವರು ಹೊಸಬೀಡು ಗ್ರಾಮದ ಕೃಷಿಕ ಹೆಚ್.ಟಿ.ಕುಮಾರ್ ಹಾಗೂ ಸುಮಾ ದಂಪತಿಯ ಪುತ್ರಿ. ಲಿಶಾ ಅವರು ಮರಗೋಡು ಕಟ್ಟೆಮಾಡುವಿನ ದಿವಂಗತ ಪಿ.ಆರ್ ಗಣೇಶ್ ಹಾಗೂ ವಿದ್ಯ ಅವರ ಪುತ್ರಿ. ಪ್ರಹರ್ಷಿತಾ ಅವರು ಗೋಣಿಕೊಪ್ಪದ ಪ್ರಶಾಂತ್ ಕಿರಣ್ ಹಾಗೂ ಪವಿತ್ರ ದಂಪತಿಯ ಪುತ್ರಿ.

ಜಿಲ್ಲೆಯಲ್ಲಿ ೨,೬೦೮ ಬಾಲಕರು, ೨,೮೧೫ ಬಾಲಕಿಯರು ಸೇರಿದಂತೆ ೫,೪೨೩ ವಿದ್ಯಾರ್ಥಿಗಳು ಉತ್ತೀರ್ಣ ಗೊಂಡಿದ್ದಾರೆ. ಕಲಾ ವಿಭಾಗದ ೧,೩೪೯, ವಾಣಿಜ್ಯ ವಿಭಾಗದ ೨,೮೮೮ ಹಾಗೂ ವಿಜ್ಞಾನ ವಿಭಾಗದ ೧,೯೮೬ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ಕೊರೊನಾ ಹಿನ್ನೆಲೆ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಹತ್ತನೇ ತರಗತಿಯ ಫಲಿತಾಂಶ, ಮೊದಲನೆಯ ಪಿ.ಯುವಿನ ಫಲಿತಾಂಶ ಹಾಗೂ ದ್ವಿತೀಯ ಪಿ.ಯುವಿನ ಕೃಪಾಂಕ ಅನುಸರಿಸಿ ಪರೀಕ್ಷೆಯೇ ನಡೆಸದೆ ತಾ.೨೦ ರಂದು ರಾಜ್ಯ ಸರಕಾರ ಫಲಿತಾಂಶ ಪ್ರಕಟಿಸಿತ್ತು.