ಮಡಿಕೇರಿ, ಜು. ೨೧: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ಮುಖ್ಯ ಮಸೀದಿಗಳಾದ ಜಾಮಿಯ, ಬದ್ರಿಯಾ, ಭಟ್ಕಳ್, ಎಮ್. ಎಮ್ ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ ಹಬ್ಬದ ವಿಶೇಷ ನಮಾಜ್ ನಡೆಯಿತು.
ಪ್ರವಾದಿ ಇಬ್ರಾಹಿಮ್ ಅವರು ದೈವಾಜ್ಞೆಯಂತೆ ತಮ್ಮ ಕರುಳ ಕುಡಿಯನ್ನು ಬಲಿ ಅರ್ಪಿಸಲು ಮುಂದಾಗಿ ಭಗವಂತನ ಪರೀಕ್ಷೆಯಲ್ಲಿ ವಿಜಯ ಸಾಧಿಸಿದ ಸ್ಮರಣಾರ್ಥ ಆಚರಿಸುವ ಈ ಹಬ್ಬದಲ್ಲಿ ಮುಸ್ಲಿಂ ಬಾಂಧವರು ದಾನ ಮಾಡಿದರು. ಕೊರೊನಾ ನಿಬಂಧನೆಯ ಪಾಲನೆಗೆ ಅನುಗುಣವಾಗಿ ಮಸೀದಿಯಲ್ಲಿ ನೆರೆದಿದ್ದ ಭಕ್ತರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡರು.
ಕಡAಗ : ಕಡಂಗ ಟೌನ್ ಬದ್ರಿಯ ಮಸೀದಿಯಲ್ಲಿ ಖತೀಬರಾದ ರಿಯಾಸ್ ಫಾಳಿಲಿ ನಮಾಜ್‌ಗೆ
ನೇತೃತ್ವ ವಹಿಸಿದ್ದರು. ಮುಹ್ಯಾದ್ದಿನ್ ಜುಮಾ ಮಸೀದಿಯ ಹಮೀದ್ ದಾರಿಮಿ ದುಅಗೆ ನೇತೃತ್ವ ವಹಿಸಿದ್ದರು. ಹೊಸ ಉಡುಪು ಧರಿಸಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಸೋಮವಾರಪೇಟೆ: ಬಕ್ರೀದ್ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯ ಮುಸ್ಲಿಂ ಸಮುದಾಯ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪ್ರಾರ್ಥನಾ ಮಂದಿರಕ್ಕೆ ತೆರಳಿ ನಾಡಿನ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸಂಭ್ರಮದಿAದ ಆಚರಿಸಿದರು. ಬಜೆಗುಂಡಿ ಗ್ರಾಮದಲ್ಲಿರುವ ಖಿಳಾರಿಯಾ ಮಸೀದಿಯಲ್ಲಿ ಜಮಾತ್ ಖತೀಬರಾದ ಹಂಝ ಮಿಸ್ಬಾಯಿ ಅವರು ಹಬ್ಬದ ಸಂದೇಶ ನೀಡಿ, ವಿಶ್ವದ ಶಾಂತಿ, ಸಹಬಾಳ್ವೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಖಿಳಾರಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಕೆ.ಎ. ಯಾಕೂಬ್ ನಾಡಿನ ಸಮೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು. ಇದರೊಂದಿಗೆ ಪಟ್ಟಣದ ಜಲಾಲಿಯಾ ಮಸೀದಿ, ಕಲ್ಕಂದೂರು, ತಣ್ಣೀರುಹಳ್ಳ, ಕಾಗಡಿಕಟ್ಟೆ, ಹೊಸತೋಟದ ಪ್ರಾರ್ಥನಾ ಮಂದಿರಗಳಲ್ಲೂ ಸಾಮೂಹಿಕ ಪ್ರಾರ್ಥನೆ ನೆರವೇರಿದವು.ಶನಿವಾರಸಂತೆ: ಪಟ್ಟಣದಲ್ಲಿ ಬುಧವಾರ ಮುಸ್ಲಿಂ ಸಮುದಾಯದವರು ಕೋವಿಡ್ ಮಾರ್ಗಸೂಚಿ ಅನುಸರಿಸಿ, ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಜಾಮೀಯಾ ಮಸೀದಿಯಲ್ಲಿ ೫೦ ಜನ ಮೀರದಂತೆ ಮಾಸ್ಕ್ ಧರಿಸಿ ಥರ್ಮಲ್ ಸ್ಕಿçನಿಂಗ್ ಮಾಡಿಸಿಕೊಂಡ ಸಮುದಾಯದವರು ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಹಜ್ಹರತ್ ತೌಫಿಕ್ ಜಾರಿ ಧಾರ್ಮಿಕ ಪ್ರವಚನ ನೀಡಿ, ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಮಸೀದಿ ಅಧ್ಯಕ್ಷ ಅನ್ವರ್ ಹುಸೇನ್, ಕಾರ್ಯದರ್ಶಿ ಅಬ್ದುಲ್ ರಜಾಕ್, ನಿರ್ದೇಶಕರಾದ ಕೆ.ಎಂ. ಅಮೀರ್ ಸಾಬ್, ಅಕ್ಮಲ್ ಪಾಶ, ಆದಿಲ್ ಪಾಶ, ಸರ್ದಾರ್ ಅಹಮ್ಮದ್, ಎಂ.ಡಿ. ಜಾಫರ್, ತಾರೀಖ್, ಹುಸೇನ್, ಜಾವೇದ್, ಮುಜಾದಿದ್ ಪಾಶ, ಅಬ್ದುಲ್ ಶುಕೂರ್, ಶಾಹೀದ್ ಖಾನ್ ಉಪಸ್ಥಿತರಿದ್ದರು.
ಕುಶಾಲನಗರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಬುಧವಾರ ಸರಳವಾಗಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತ ಮುತ್ತ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಮುಂಜಾನೆ ಮಸೀದಿಗಳಿಗೆ ತೆರಳಿ ಬಕ್ರೀದ್ ಹಬ್ಬದ ನಮಾಜನ್ನು ನೆರವೇರಿಸಿದರು.
ಕೋವಿಡ್ ಹಿನ್ನಲೆ ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ನಮಾಜ್ ನಡೆಯಿತು. ಕೋವಿಡ್ ನಿಂದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದು, ಕೋವಿಡ್ ಸೋಂಕು ದೂರವಾಗುವಂತೆ ವಿಶೇಷ ಪ್ರಾರ್ಥನೆ ನಡೆಯಿತು.
ಕುಶಾಲನಗರದ ಜಾಮಿಯಾ, ಹಿಲಾಲ್, ದಾರುಲ್ ಉಲೂಂ ಮದ್ರಸ, ಶಾಧಿ ಮಹಲ್, ತಕ್ವಾ ಮಸೀದಿ, ಸೇರಿದಂತೆ ದಂಡಿನಪೇಟೆ, ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣದಲ್ಲಿ ಬಕ್ರೀದ್ ಹಬ್ಬದ ವಿಶೇಷವಾದ ನಮಾಜ್ ಮತ್ತು ಧರ್ಮ ಗುರುಗಳಿಂದ ಧಾರ್ಮಿಕ ಪ್ರವಚನ ನಡೆದವು.
ನಾಪೋಕ್ಲು
ನಾಪೋಕ್ಲು : ನಾಪೋಕ್ಲು ಮೊಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಆಚರಿಸಲಾಯಿತು. ಮಸೀದಿಯ ಖತೀಬರಾದ ಆಶ್ರಫ್ ಅಸಹನಿಯವರು ಪ್ರಾರ್ಥನೆ ಸಲ್ಲಿಸಿದರು. ನಾಪೋಕ್ಲು ನಾಡು ವಿಭಾಗದ ಎಲ್ಲಾ ಮಸೀದಿಯಲ್ಲೂ ಬಕ್ರೀದ್ ಆಚರಣೆ ನಡೆಯಿತು.
ವೀರಾಜಪೇಟೆ: ಬಕ್ರೀದ್ ಹಬ್ಬವನ್ನು ವೀರಾಜಪೇಟೆ ವ್ಯಾಪ್ತಿಯಲ್ಲಿ ಮುಸ್ಲಿಂ ಬಾಂಧವರು ಆಚರಿಸಿದರು. ವಿಶೇಷ ಈದ್ ನಮಾಝ್ ಹಾಗೂ ಪ್ರವಚನಗಳು ಮಸೀದಿಯಲ್ಲಿ ನಡೆದವು.
ನಗರದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಅಬ್ದರ‍್ರವೂಫ್ ಹುದವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಮಸೀದಿಯಲ್ಲಿ ಅಬ್ದುಲ್ಲಾ ಮುಸ್ಲಿಯಾರ್, ಗಡಿಯಾರಕಂಬದ ಬಳಿಯ ಭಟ್ಕಲ್ ಮಸೀದಿಯಲ್ಲಿ .ಮಕ್‌ಸೂದ್, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಗುಲ್‌ಷದ್, ಮದೀನಾ ಮಸೀದಿಯಲ್ಲಿ ಮುಝಮ್ಮಿಲ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಂನಲ್ಲಿ ಹಸೀಬ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯಲ್ಲಿ ಅನಸ್ ಮೌಲವಿ, ಗೋಣಿಕೊಪ್ಪ ರಸ್ತೆಯ ಬ್ರೆöÊಟ್ ಕ್ಯಾಂಪಸ್ ಇಮಾಮ್ ಮುಸ್ಲಿಮ್ ಮಸೀದಿಯಲ್ಲಿ ಸಿ.ಅಲಿ, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಹನೀಫ್ ಫೈಝಿ ವಿಶೇಷ ನಮಾಝ್ ಹಾಗೂ ಪ್ರವಚನದ ನೇತೃತ್ವ ವಹಿಸಿದ್ದರು.