ನಾಪೋಕ್ಲು, ಜು. ೨೧: ಸ್ಥಳೀಯ ಮಹಿಳಾ ಸಮಾಜದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಸಭೆ ನಡೆಯಿತು. ೨೦೨೧-೨೨ ರ ಸಾಲಿನ ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮುಕ್ಕಾಟಿರ ಎಂ.ವಿನಯ್ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ರತ್ನಾ ಚರ್ಮಣ್ಣ ಹಾಗೂ ಖಜಾಂಚಿಯಾಗಿ ಕೆ.ಎಸ್.ಕುಟ್ಟಪ್ಪ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷ ಶ್ಯಾಂ ಬಿದ್ದಪ್ಪ ನೂತನ ಅಧ್ಯಕ್ಷ ಮುಕ್ಕಾಟಿರ ಎಂ.ವಿನಯ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ಡಾ.ಬೊಪ್ಪಂಡ ಜಾಲಿಬೋಪಯ್ಯ ಪಾಲ್ಗೊಂಡಿದ್ದರು.