ಕೂಡಿಗೆ, ಜು. ೨೧ : ಮೈಸೂರಿನ ಓಡಿಪಿ ಸಂಸ್ಥೆ ಮತ್ತು ಅಂದೇರಿಹಿಲ್ ಸಂಸ್ಥೆಯ ಸಹಯೋಗದೊಂದಿಗೆ ಕೂಡುಮಂಗಳೂರು ಭಾಗದ ನೋಂದಾಯಿತ ರೈತ ಸದಸ್ಯರುಗಳಿಗೆ ಉಚಿತವಾಗಿ ರಸ ಗೊಬ್ಬರವನ್ನು ವಿತರಣೆ ಮಾಡಲಾಯಿತು. ಮೈಸೂರು ಕೊಡಗು ಭಾಗದ ಸಂಯೋಜಕರಾದ ಜಾನ್ ಬಿ ರಾಡ್ರಿಗೆಸ್ ಮಾರ್ಗದರ್ಶನದಲ್ಲಿ ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ನೋಂದಾಯಿತ ೧೬ ಮಂದಿ ರೈತ ಸದಸ್ಯರುಗಳಿಗೆ ಭೂಮಿಕ ರೈತ ಸಂಘದ ಅಧ್ಯಕ್ಷ ಹೊನ್ನಪ್ಪ ಮತ್ತು ನಿರ್ದೇಶಕ ಕೆ ಡಿ ಲೋಕೇಶ್ ಗೊಬ್ಬರವನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೂಡಿಗೆ ಮತ್ತು ಹೆಬ್ಬಾಲೆ ಕ್ಲಸ್ಟರ್ನ ಕಾರ್ಯಕರ್ತ ಸುಂದರ್ ದಾಸ್ ಮತ್ತು ರೈತರು ಹಾಜರಿದ್ದರು.