ಮಡಿಕೇರಿ, ಜು. ೨೦; ಮಡಿಕೇರಿ ನಗರಸಭಾ ಕಚೇರಿಯಲ್ಲಿ ಕಡತಗಳ ವಿಲೇವಾರಿಯಲ್ಲಿ ವಿಳಂಬ, ಆಸ್ತಿ ತೆರಿಗೆ ವಸೂಲಾತಿಯಾಗುತ್ತಿಲ್ಲ, ಕಸ, ನೀರು, ಬೀದಿದೀಪ ಸೇರಿದಂತೆ ಸಮಸ್ಯೆಗಳು ತಾಂಡವವಾಡುತ್ತಿವೆ, ಸಿಬ್ಬಂದಿ, ಅಧಿಕಾರಿಗಳ ಕೊರತೆ ಯಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಆರೋಪಿಸಿ ನಗರಸಭಾ ಸದಸ್ಯರುಗಳೇ ಪ್ರತಿಭಟನೆ ನಡೆಸಿದ ಪ್ರಸಂಗ ಇಂದು ನಡೆಯಿತು.
ನಗರಸಭೆ ಪೌರಾಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಸ್.ಡಿ.ಪಿ.ಐ. ಪಕ್ಷದಿಂದ ಆಯ್ಕೆ ಯಾಗಿರುವ ನಗರಸಭಾ ಸದಸ್ಯರುಗಳು; ಸಮಸ್ಯೆಗಳ ಬಗ್ಗೆ ಆಯುಕ್ತರ ಗಮನ ಸೆಳೆದರು. ಸ್ವಯಂ ಘೋಷಿತ ಆಸ್ತಿ ತೆರಿಗೆ ಸಂಬAಧ ಸಾರ್ವಜನಿಕರು ಸಲ್ಲಿಸಿರುವ ಈ ಸಾಲಿನ ೬೦೦ ಅರ್ಜಿಗಳು ಬಾಕಿ ಉಳಿದಿವೆ. ಹಿಂದಿನದ್ದು ಸೇರಿದರೆ ೨ ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿವೆ. ಇದರಿಂದಾಗಿ ನಗರಸಭೆಗೆ ಬರುವ ಆದಾಯ ಸೋರಿಕೆ ಯಾಗುತ್ತಿದೆ. ಅಂಗಡಿ, ಕಟ್ಟಡಗಳ ಪರವಾನಗಿ ನವೀಕರಣ ಆಗುತ್ತಿಲ್ಲ. ಕಚೇರಿಯಲ್ಲಿ ಸಿಬ್ಬಂದಿಗಳು ಸೇರಿದಂತೆ ಸರ್ವೆಯರ್, ಆರೋಗ್ಯ ನಿರೀಕ್ಷಕರ ಕೊರತೆಯಿದೆ. ಹಾಗಾಗಿ ಮಳೆ ಹಾಗೂ ಕೋವಿಡ್ ಸಂಕಷ್ಟದ ನಡುವೆಯೂ ಜನರು ಕಚೇರಿಗೆ ಅಲೆದಾಡುತ್ತಾ ಅರ್ಜಿ ಸಲ್ಲಿಸುತ್ತಿದ್ದರೂ ಯಾವುದೂ ವಿಲೇವಾರಿಯಾಗುತ್ತಿಲ್ಲ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗಲು ಬಿಡುವದಿಲ್ಲವೆಂದು ಹೇಳಿದರು.
ಹಣ ವಸೂಲಾತಿಗೆ ಆಗ್ರಹ
ನಗರಸಭೆಯಲ್ಲಿ ಕರ ವಸೂಲಿಗಾರರಾಗಿದ್ದ ಸಜಿತ್
ಹಾಗೂ ಸ್ವಾಮಿ
(ಮೊದಲ ಪುಟದಿಂದ) ಎಂಬವರುಗಳು ರೂ. ಒಂದು ಕೋಟಿಯಷ್ಟು ಹಣ ದುರುಪಯೋಗಪಡಿಸಿಕೊಂಡಿದ್ದು, ಈ ಸಂಬAಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನಾವುಗಳು ಲೋಕಾಯುಕ್ತ ಹಾಗೂ ಸರಕಾರಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಹಣವನ್ನು ಅವರುಗಳಿಂದಲೇ ಶೇ. ೮ರ ಬಡ್ಡಿ ದರ ವಿಧಿಸಿ ವಸೂಲಾತಿ ಮಾಡಬೇಕು, ಅಥವಾ ಅವರುಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರಕಾರದ ಪೌರಾಡಳಿತ ನಿರ್ದೇಶನಾಲಯ ಸೂಚನೆ ನೀಡಿದೆ. ಆದರೂ ಇದುವರೆಗೆ ವಸೂಲಾತಿ ಆಗಿಲ್ಲ, ವಸೂಲಾತಿ ಮಾಡಿದರೆ ನಗರಸಭೆಗೆ ಆದಾಯ ಬರಲಿದೆ. ಆದಾಯ ಬಂದರೆ ಮಾತ್ರ ಸರಕಾರದ ಅನುದಾನ ಬರುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಮಧ್ಯವರ್ತಿಗಳ ಹಾವಳಿ
ನಗರಸಭೆಯಲ್ಲಿ ಸಿಬ್ಬಂದಿಗಳಿಗಿAತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಬೇಕು. ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕುಡಿಯುವ ನೀರು ಹಾಗೂ ಕಸ ವಿಲೇವಾರಿ ಸಮಸ್ಯೆ ಕೂಡ ಇದೆ, ಅಲ್ಲದೆ, ದಿನ ನಿತ್ಯ ಮಳೆ, ಗಾಳಿ ನಡುವೆ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಸ್ವಲ್ಪವೇ ಸ್ವಲ್ಪ ಕಳಪೆ ಗುಣಮಟ್ಟದ ಆಹಾರಗಳನ್ನು ನೀಡಲಾಗುತ್ತಿದೆ. ಇವುಗಳೆಲ್ಲವನ್ನೂ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಮುತ್ತಿಗೆ ಎಚ್ಚರಿಕೆ : ಈ ಎಲ್ಲ ಸಮಸ್ಯೆಗಳನ್ನು ಮುಂದಿನ ೨೦ ದಿನಗಳೊಳಗಡೆ ಪರಿಹರಿಸಬೇಕು. ಕಚೇರಿಗೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಇಲ್ಲವಾದಲ್ಲಿ ಸಾರ್ವಜನಿಕರೊಡಗೂಡಿ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರುಗಳಾದ ಅಮೀನ್ ಮೊಹಿಸೀನ್, ಎಂ.ಎ. ಮನ್ಸೂರ್, ಬಶೀರ್, ನೀಮಾ ಅರ್ಶದ್, ಮೇರಿ ವೇಗಸ್, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.