ಮಡಿಕೇರಿ, ಜು. ೨೦: ಶಕ್ತಿ ಪತ್ರಿಕೆಯನ್ನು ಆಸಕ್ತಿಯಿಂದ ಓದುತ್ತಿರುವ ಈ ಹಿರಿಯ ಚೈತನ್ಯಕ್ಕೆ ಶಕ್ತಿ ಬಳಗದ ನಮನ...

ಇವರು ಅಮ್ಮತ್ತಿಯ ಮಾಚಿಮಂಡ ಮಿಟ್ಟು ಅಪ್ಪಯ್ಯ ಅವರು. ಜುಲೈ ೧೭ ರಂದು ಹಿರಿಯಜ್ಜಿ ತಮ್ಮ ೯೭ನೇಯ ವಸಂತಕ್ಕೆ ಕಾಲಿರಿಸಿದ್ದಾರೆ. ಬಹುತೇಕ ಕಳೆದ ೫೦ ವರ್ಷಗಳಿಗೂ ಅಧಿಕ ಕಾಲದಿಂದ ಪತ್ರಿಕೆಯನ್ನು ಓದುವ ಹವ್ಯಾಸ ಹೊಂದಿರುವ ಇವರಿಗೆ ದಿನಂಪ್ರತಿ ‘ಶಕ್ತಿ’ಯನ್ನು ಓದಲೇಬೇಕೆಂಬ ತುಡಿತ.

೯೭ನೇಯ ಹುಟ್ಟುಹಬ್ಬದ ಸಂದರ್ಭ ಬೆಂಗಳೂರಿನಲ್ಲಿರುವ ಪುತ್ರ ಈ ಹಿಂದೆ ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ನಿರ್ವಹಿಸಿ ಇದೀಗ ವರ್ಲ್ಡ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಮಾಚಿಮಂಡ ಎ. ದೇವಯ್ಯ ಅವರು ಆಗಮಿಸಿದ್ದರು.

ಈ ವೇಳೆ ತಾಯಿ ಪತ್ರಿಕೆ ಓದುತ್ತಿರುವ ಚಿತ್ರವನ್ನು ತೆಗೆದು ಇವರು ಫೇಸ್‌ಬುಕ್‌ನಲ್ಲಿ ‘‘ಇನ್ ಕೂರ್ಗ್ ಯುವರ್ ಡೇ ಹ್ಯಾಸ್‌ನಾಟ್ ರಿಯಲಿ ಬಿಗಿನ್ ಅನ್‌ಲೆಸ್‌ಯೂ ಸಿಟ್ ಎಟ್‌ದ ವಿಂಡೋ ಅಂಡ್ ರೀಡ್ ಶಕ್ತಿ ನ್ಯೂಸ್ ಪೇಪರ್’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವಯ್ಯ ಅವರ ಮತ್ತೋರ್ವ ಸಹೋದರ ದೆಹಲಿ ಕೊಡವ ಸಮಾಜದ ಅಧ್ಯಕ್ಷರಾಗಿರುವ ಮಾಚಿಮಂಡ ತಮ್ಮು ಕಾರ್ಯಪ್ಪ ಅವರು.

ಈ ಹಿರಿಯ ಚೇತನದ ಚೈತನ್ಯಕ್ಕೆ ‘ಶಕ್ತಿ’ಯ ನಮನಗಳು. ನೂರು ಕಾಲ ಬಾಳಿ ಎಲ್ಲರನ್ನೂ ಹರಸುವಂತಾಗಲಿ ಎಂಬ ಪ್ರಾರ್ಥನೆಯೊಂದಿಗೆ

- ಜಿ. ಚಿದ್ವಿಲಾಸ್

ಸಂಪಾದಕ