ವೀರಾಜಪೇಟೆ, ಜು. ೨೧: ಬಸ್ಸು ನಿಲ್ದಾಣದಲ್ಲಿ ಕುಡಿಯುವ ನೀರು ಸೇರಿದಂತೆ ಇತರ ಉಪಯೋಗಕ್ಕೆ ಬಳಕೆಯಾಗುವ ನೀರು ಸಂಪರ್ಕ ಬಂದ್ ಆದ ಕಾರಣ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

ವೀರಾಜಪೇಟೆ ನಗರದ ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ದಿನಬಳಕೆಗೆ ಉಪಯೋಗಿಸುವ ನೀರಿನ ವ್ಯವಸ್ಥೆಗೆ ಬಳಕೆ ಮಾಡುತ್ತಿದ್ದ ಮೋಟಾರು ಕೆಟ್ಟು ನಿಂತು ಹತ್ತು ದಿನಗಳಾಗಿವೆ. ಬಸ್ ನಿಲ್ದಾಣದ ಅಧೀನದಲ್ಲಿರುವ ಆವರಣದಲ್ಲಿ ಅಂಗಡಿ ಮಳಿಗೆಗಳು, ಕ್ಯಾಂಟೀನ್ ಹೊಟೇಲ್ ಮತ್ತು ಸಾರ್ವಜನಿಕರ ಹಾಗೂ ಪ್ರಯಾಣಿಕರ ಉಪಯೋಗ ಕ್ಕಾಗಿ ಸುಲಭ್ ಶೌಚಾಲಯ, ಬಸ್ಸುಗಳ ಚಾಲಕರು, ನಿರ್ವಾಹಕರು, ಸಫಾಯಿ ಕರ್ಮಚಾರಿಗಳು ನಿಲ್ದಾಣ ನಿಯಂತ್ರಣ ಅಧಿಕಾರಿ, ಹೀಗೆ ಹಲವಾರು ಮಂದಿ ದಿನನಿತ್ಯ ನೀರು ಬಳಕೆ ಮಾಡುತ್ತಿದ್ದು, ಅನ್‌ಲಾಕ್ ಆರಂಭದ ದಿನದಿಂದ ದಿನನಿತ್ಯ ನೂರಾರು ಬಸ್‌ಗಳು ಸಂಚಾರ ಮಾಡುತ್ತಿವೆ. ದಿನದ ೨೪ ಗಂಟೆಗಳು ಬಳಕೆಯಾಗುವ ಶೌಚಾಲಯದಲ್ಲಿ ನೀರು ಇಲ್ಲದೆ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಪರದಾಡುವಂತಾಗಿದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಕ್ಕಾಗಿ ಸುಲಭ್ ಶೌಚಾಲಯ, ಬಸ್ಸುಗಳ ಚಾಲಕರು, ನಿರ್ವಾಹಕರು, ಸಫಾಯಿ ಕರ್ಮಚಾರಿಗಳು ನಿಲ್ದಾಣ ನಿಯಂತ್ರಣ ಅಧಿಕಾರಿ, ಹೀಗೆ ಹಲವಾರು ಮಂದಿ ದಿನನಿತ್ಯ ನೀರು ಬಳಕೆ ಮಾಡುತ್ತಿದ್ದು, ಅನ್‌ಲಾಕ್ ಆರಂಭದ ದಿನದಿಂದ ದಿನನಿತ್ಯ ನೂರಾರು ಬಸ್‌ಗಳು ಸಂಚಾರ ಮಾಡುತ್ತಿವೆ. ದಿನದ ೨೪ ಗಂಟೆಗಳು ಬಳಕೆಯಾಗುವ ಶೌಚಾಲಯದಲ್ಲಿ ನೀರು ಇಲ್ಲದೆ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಪರದಾಡುವಂತಾಗಿದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.