ಗೋಣಿಕೊಪ್ಪಲು, ಜು.೨೧: ವೀರಾಜಪೇಟೆ ತಾಲೂಕಿನ ಶೇ.೯೦ರಷ್ಟು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಸಾಮಾನ್ಯ ಕಾರ್ಯಕರ್ತರ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹರ್ಷ ವ್ಯಕ್ತಪಡಿಸಿದರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ವೀರಾಜಪೇಟೆ ಮಂಡಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಬಿಜೆಪಿಯ ಗೆಲುವಿನ ವಿಜಯ ಪತಾಕೆ ಸದಾ ಹಾರುತ್ತಿರಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತಾ.ಪಂ. ಹಾಗೂ ಜಿ.ಪಂ. ಮುಂದಿನ ಚುನಾವಣೆಯ ಮೀಸಲಾತಿಯು ಗೊಂದಲಮಯ ವಾಗಿದ್ದು ಈ ಬಗ್ಗೆ ಅನೇಕ ಮಂದಿ ನ್ಯಾಯಾಲಯ ಹಾಗೂ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ಮೀಸಲಾತಿ ಬದಲಾವಣೆ ಆಗುವ ಸಾಧ್ಯತೆಯು ಇದೆ ಎಂದ ಅವರು ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಯಬೇಕು ಎಂದು ಹೇಳಿದರು.
ಕೇರಳ ಹಾಗೂ ಮಹಾರಾಷ್ಟçದಲ್ಲಿ ಕೊರೊನಾ ಮೂರನೆ ಅಲೆ ಕಂಡು ಬಂದಿದ್ದು ಕೊಡಗಿನ ಗಡಿ ಭಾಗ ಕೇರಳದಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸರ್ಕಾರದ ನಿಯಮಗಳನ್ನು ಪಾಲಿಸಿದ ನಂತರವಷ್ಟೇ ಗಡಿಯಲ್ಲಿ ಆಗಮಿಸಲು ಅವಕಾಶ ನೀಡಲಾಗಿದೆ ಎಂದರು.
ಪೌತಿ ಖಾತೆಯ ವಿಚಾರದಲ್ಲಿ ಗೊಂದಲ ನಿವಾರಣೆಗೆ ಕಂದಾಯ ಮಂತ್ರಿಗಳ ಗಮನ ಸೆಳೆಯಲಾಗಿದೆ. ಅನಾವಶ್ಯಕವಾಗಿ ತೊಂದರೆ ನೀಡದಂತೆ ಸಚಿವರು ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ. ಪಂಚಾಯಿಗಳಲ್ಲಿ ೧೫ನೇ ಹಣ ಕಾಸಿನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ಕೊರೊನಾ ಸಂದರ್ಭ ವಿವಿಧ ಮೋರ್ಚಾದಿಂದ ಕಿಟ್ ವಿತರಣೆ, ಆಹಾರ ವಿತರಣೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸೇರಿದಂತೆ ಆನೇಕ ಕಾರ್ಯಕ್ರಮ ಗಳನ್ನು ನಡೆಸಲಾಗಿದೆ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಗ್ರಾ.ಪಂ. ತಾ.ಪಂ. ಹಾಗೂ ಜಿ.ಪಂ.ನಲ್ಲಿ ಅಧಿಕಾರ ಪಡೆದಿದ್ದೇವೆ. ಮುಂದೆಯೂ ಅಧಿಕಾರ ಪಡೆದು ಉತ್ತಮ ಕೆಲಸ ನಿರ್ವಹಿಸು ವಂತಾಗಬೇಕೆAದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ ಮಾತನಾಡಿ ಕೋವಿಡ್ ನಿರ್ವಹಣೆಯಲ್ಲಿ ಭಾರತ ದೇಶ ಸಾಧನೆ ಮಾಡಿದೆ. ಕೊಡಗಿನಲ್ಲಿ ಜಿಲ್ಲಾಡಳಿತ ಗಡಿ ಬಂದ್ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ ಸಂಘಟನಾತ್ಮಕ ಚಟುವಟಿಕೆಯಿಂದಾಗಿ ಪಕ್ಷವು ಉತ್ತಮ ಹಾದಿಯಲ್ಲಿ ಸಾಗಲು ಅನುಕೂಲವಾಗಿದೆ; ಪಕ್ಷದ ಚಟುವಟಿಕೆ ನಿರಂತರವಾಗಿರಬೇಕು. ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗ ಬಾರದು ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಅಧಿಕಾರಕ್ಕೆ ಬರಲು ಸಾಧ್ಯ ಎಂದರು.
ವೇದಿಕೆಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ಮಹಿಳಾಮೋರ್ಚ ಜಿಲ್ಲಾಧ್ಯಕ್ಷೆ ಚೋಡುಮಾಡ ಶರೀನ್ಸುಬ್ಬಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ವಾಟೇರಿರ ಬೋಪಣ್ಣ ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ಮಂಡೇಪAಡ ಸುವೀನ್ ಗಣಪತಿ, ಮೂಕೊಂಡ ವಿಜು ಸುಬ್ರಮಣಿ, ರಾಣಿ ನಾರಾಯಣ, ಸಿ.ಕೆ.ಬೋಪಣ್ಣ, ಚೋಡುಮಾಡ ಶ್ಯಾಮ್ ಪೂಣಚ್ಚ, ಗುಮ್ಮಟ್ಟೀರ ಕಿಲನ್ ಗಣಪತಿ, ಮಲ್ಲಮಾಡ ಪೂಣಚ್ಚ, ವಿಜಯ, ಕಭೀರ್ದಾಸ್, ಕುಲ್ಲಚಂಡ ಚಿಣ್ಣಪ್ಪ, ಕುಪ್ಪಂಡ ಗಿರಿಪೂವಣ್ಣ, ಕಟ್ಟೇರ ಈಶ್ವರ್, ಮಲ್ಚೀರ ಗಾಂಧಿ, ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಕೃಷಿ ಮೋರ್ಚಾ, ಮಹಿಳಾ ಮೋರ್ಚಾ, ಯುವ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತರರು ಹಾಜರಿದ್ದರು. ಸುಳ್ಳಿಮಾಡ ಪ್ರಾರ್ಥಿಸಿ, ವಾಟೇರಿರ ಬೋಪಣ್ಣ ಸ್ವಾಗತಿಸಿ, ಅಜ್ಜಿಕುಟ್ಟೀರ ಪ್ರವೀಣ್ ನಿರೂಪಿಸಿ, ವಂದಿಸಿದರು.