ಕೂಡಿಗೆ, ಜು. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ೩೫೪ ಕುಟುಂಬದ ಫಲಾನುಭವಿಗಳಿಗೆ ವಸತಿ ನಿಗಮದ ವತಿಯಿಂದ ಸರಕಾರ ಮಂಜೂರಾತಿ ಮಾಡಿ ನಿರ್ಮಿತಿ ಕೇಂದ್ರದಿAದ ಮನೆಗಳನ್ನು ನಿರ್ಮಾಣ ಮಾಡಿ ದಿಡ್ಡಳಿಯಿಂದ ಕರೆತಂದ ಕುಟುಂಬದವರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಮನೆಗಳ ನಿರ್ಮಾಣವಾಗಿ ಎರಡು ವರ್ಷಗಳು ಕಳೆದರೂ ನೈಜ ಫಲಾನುಭವಿಗಳು ಬರದೆ ಅರ್ಹರಲ್ಲದವರು ಆ ಮನೆಗಳಲ್ಲಿ ವಾಸಿಸಲು ಬರುತ್ತಿದ್ದಾರೆ. ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮನೆಗಳನ್ನು ನಿರ್ಮಿಸಿ ನಂತರ ಆ ಮನೆಗಳ ಜವಾಬ್ದಾರಿಯನ್ನು ಸಂಬAಧಿಸಿದ ಇಲಾಖೆಯವರು ತೆಗೆದುಕೊಂಡಿದ್ದಾರೆ. ಆದರೆ ನೂರಾರು ಮನೆಗಳಲ್ಲಿ ಫಲಾನುಭವಿಗಳು ವಾಸಿಸುತ್ತಿಲ್ಲ ಎಂದು ಸಂಬAಧಿಸಿದ ತಾಲೂಕು ಮಟ್ಟದ ಅಧಿಕಾರಿಗಳ ತಂಡ, ಕೂಡಿಗೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸರ್ವೆ ಕಾರ್ಯ ನಡೆಸಿದೆ. ಈ ನಡುವೆ ನೈಜ ಫಲಾನುಭವಿಗಳನ್ನು ಬಿಟ್ಟು ಬೇರೆಯವರು ಬಂದು ವಾಸಿಸಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮುಖಂಡರಾದ ಅಪ್ಪು ಮೀಸೆ ಮುತ್ತಾ, ಮುತ್ತ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪುನರ್ವಸತಿ ಕೇಂದ್ರದ ಐದು ಮನೆಗಳಿಗೆ ಇಲಾಖೆ ವತಿಯಿಂದ ಹಾಕಲಾಗಿದ್ದ ಬೀಗವನ್ನು ನೈಜ ಫಲಾನುಭವಿಗಳಲ್ಲದವರು ಒಡೆದು ಹಾಕಿ ಆ ಮನೆಗಳಲ್ಲಿ ವಾಸಿಸಲು ಮುಂದಾಗಿರುವುದು ಕಂಡುಬAದಿದ್ದು, ಈ ವಿಷಯವನ್ನು ತಾಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿಗೆ ಕೇಂದ್ರದ ಪ್ರಮುಖರು ತಿಳಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಖಾಲಿ ಇರುವ ಮನೆಗಳ ಸರ್ವೆಯನ್ನು ನಡೆಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ನೈಜ ಫಲಾನುಭವಿಗಳು ಅಲ್ಲದವರು ಸರಕಾರದ ವತಿಯಿಂದ ಹಾಕಲಾಗಿದ್ದ ಬೀಗವನ್ನು ಒಡೆದು ಮನೆ ಒಳಗಡೆ ಪ್ರವೇಶ ಮಾಡಿರುವುದು ಸರಿಯಲ್ಲ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಬ್ಯಾಡಗೊಟ್ಟ ಕ್ಷೇತ್ರದ ಸದಸ್ಯ ಟಿ.ಪಿ. ಹಮೀದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೈಜ ಫಲಾನುಭವಿಗಳಲ್ಲದವರಿಗೆ ಖಾಲಿ ಇರುವ ಮನೆಗಳನ್ನು ನೀಡುವುದಾದರೆ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಬಡ ವಸತಿ ರಹಿತರ ಕುಟುಂಬಗಳಿವೆ ಅವರುಗಳಿಗೆ ನೀಡುವಂತೆ ಈಗಾಗಲೇ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಇದಕ್ಕೆ ಸಂಬAಧಿಸಿದAತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ ಅÀವರ ಪ್ರತಿಕ್ರಿಯೆ ಬಯಸಿದಾಗ ನೈಜ ಫಲಾನುಭವಿಗಳಲ್ಲದವರು ಮನೆಯ ಬೀಗವನ್ನು ಒಡೆದು ಒಳಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅರ್ಹರು ಮತ್ತು ರಾಜ್ಯ ವಸತಿ ನಿಗಮದಲ್ಲಿ ನೋಂದಣಿ ಆದ ನೈಜ ಫಲಾನುಭವಿಗಳಿಗೆ ಮನೆಯನ್ನು ನೀಡಲಾಗುವುದು. ಮುಂದಿನ ವಾರದಲ್ಲಿ ಮನೆಯ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
-ಕೆ.ಕೆ. ನಾಗರಾಜಶೆಟ್ಟಿ.