ಮಡಿಕೇರಿ, ಜು.೨೧ : ಚೆಟ್ಟಳ್ಳಿಯ ಸಂತ ಸಬಾಸ್ಟಿನ್ ಚರ್ಚ್ಗೆ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಪ್ಪನೆರವಂಡ ಶಾಂತಿಅಚ್ಚಪ್ಪ ಅವರು ಧ್ವನಿವರ್ಧಕ ಮತ್ತು ಸಂಗೀತ ಪರಿಕರಗಳನ್ನು ನೀಡಿದರು. ಚರ್ಚ್ನ ಧರ್ಮಗುರು ಫಾ.ಜೆ಼ರಾಲ್ಡ್ ಸಿಕ್ವೇರÀ ಅವರಿಗೆ ರೂ.೨ ಲಕ್ಷ ಮೌಲ್ಯದ ಪರಿಕರಗಳನ್ನು ಹಸ್ತಾಂತರಿಸಿದರು.

ನAತರ ಮಾತನಾಡಿದ ಶಾಂತಿಅಚ್ಚಪ್ಪ, ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕೂಡ ತಾವು ಸಹಕಾರ ನೀಡಿದ್ದು, ಕೋವಿಡ್ ಸಂದರ್ಭದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿರುವುದಾಗಿ ತಿಳಿಸಿದರು. ಸಂತ ಸಬಾಸ್ಟಿನ್ ಚರ್ಚ್ನಲ್ಲಿ ಧ್ವನಿವರ್ಧಕ ಮತ್ತು ಸಂಗೀತ ಪರಿಕರಗಳ ಕೊರತೆ ಇರುವುದನ್ನು ಮನಗಂಡು ಇವುಗಳನ್ನು ತಾವು ನೀಡಿರುವುದಾಗಿ ಹೇಳಿದರು. ಈ ಸಂದರ್ಭ ಚರ್ಚ್ ಸಿಬ್ಬಂದಿಗಳು ಹಾಜರಿದ್ದರು.