ಪಾಲಿಬೆಟ್ಟ, ಜು. ೧೯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲಿಬೆಟ್ಟ ವಲಯದ ಸ್ವ ಸಹಾಯ ಸಂಘಗಳ ಪಾಲುದಾರ ಸದಸ್ಯರುಗಳಿಗೆ ಲಾಭಾಂಶ ವಿತರಿಸಲಾಯಿತು. ಪಾಲಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಮಹಿಳೆಯರು ಸಂಘಟನೆಗಳಲ್ಲಿ ಗುರುತಿಸಿಕೊಂಡು ಸಕ್ರಿಯರಾಗುವ ಮೂಲಕ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಮಹಿಳೆಯರನ್ನು ಒಗ್ಗೂಡಿಸಿ ಅಭಿವೃದ್ಧಿಯೊಂದಿಗೆ ಮುಂದೆ ತರುವ ಪ್ರಯತ್ನ ಮಾಡುತ್ತಿದೆ ಎಂದರು. ವಲಯದ ಮೇಲ್ವಿಚಾರಕ ಪ್ರದೀಪ್, ಸೇವಾ ಪ್ರತಿನಿಧಿಗಳಾದ ರೇವತಿ, ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಪೆರಾಜೆ : ಇಲ್ಲಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪಿ.ಡಿ. ಕವಿನಾ ಅಧ್ಯಕ್ಷತೆಯಲ್ಲಿ ಲಾಭಾಂಶ ವಿತರಣೆ ಕಾರ್ಯಕ್ರಮ ಶ್ರೀ ಶಾಸ್ತಾವು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವೀರಾಜಪೇಟೆ ತಾಲೂಕು ಒಕ್ಕೂಟದ ಯೋಜನಾಧಿಕಾರಿ ಪದ್ಮಿನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರಾಜೆ ಕಾರ್ಯಕ್ಷೇತ್ರದ ೨೮ ಸಂಘಗಳ ೩ ವರ್ಷದ ರೂ. ೬.೫ ಲಕ್ಷ ಲಾಭಾಂಶ ವನ್ನು ಸಾಂಕೇತಿಕವಾಗಿ ಮೂರು ಸಂಘಗಳಿಗೆ ವಿತರಿಸಲಾಯಿತು. ಮುಂದೆ ಹಂತ ಹಂತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮ ವನ್ನು ಮಡಿಕೇರಿ ವಲಯ ಮೇಲ್ವಿಚಾರಕ ಹರೀಶ್ ಸ್ವಾಗತಿಸಿ, ಸೇವಾ ಪ್ರತಿನಿಧಿಗಳಾದ ಭಾಸ್ಕರ ಕೋಡಿ ವಂದಿಸಿದರು.