ಮಡಿಕೇರಿ, ಜು. ೧೯ : ತಮಿಳುನಾಡಿನಿಂದ ಭಾಗಮಂಡಲಕ್ಕೆ ಜೇನು ಸಾಗಿಸುತ್ತಿದ್ದ ಲಾರಿಯೊಂದು ಬೋಯಿಕೇರಿ ಸಮೀಪದ ಸ್ಯಾಂಡಲ್‌ಕಾಡು ತೋಟದ ಬಳಿ ಮಗುಚಿ ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇಂದು ಬೆಳಿಗ್ಗೆ ಸುಮಾರು ೮ ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿದ್ದು ಲಾರಿಯಲ್ಲಿದ್ದ ಜೇನಿನ ಡ್ರಮ್‌ಗಳು ರಸ್ತೆಗೆ ಉರುಳಿವೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಹೈವೇ ಪ್ಯಾಟ್ರೋಲ್ ವಾಹನ ಹಾಗೂ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.