ಮಡಿಕೇರಿ, ಜು. ೧೯: ಕೊರೊನಾ ಪರಿಸ್ಥಿತಿಯ ನಡುವೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆಗೆ ಕೊಡಗು ಜಿಲ್ಲೆಯ ೪೧ ಕೇಂದ್ರದಲ್ಲಿ ೬೮೬೬ ವಿದ್ಯಾರ್ಥಿಗಳ ಪೈಕಿ ೬೮೧೨ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆದರು. ೫೪ ವಿದ್ಯಾರ್ಥಿಗಳು ಗೈರಾದರು.
ಹೊಸ ಕಾರ್ಯವಿಧಾನದಲ್ಲಿ ನಡೆದ ಪರೀಕ್ಷೆ ವ್ಯವಸ್ಥಿತವಾಗಿ ನಡೆಯಿತು. ಮೂರು ವಿಷಯಗಳ ಒಂದು ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿತ್ತು. ಬೆಳಿಗ್ಗೆ ೮.೩೦ರಿಂದಲೇ ಮಕ್ಕಳನ್ನು ಪೋಷಕರು ಪರೀಕ್ಷಾ ಕೇಂದ್ರದತ್ತ ಕರೆತಂದರು. ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯುತ್ತೇವೆ ಎನ್ನುವ ಆತ್ಮಸ್ಥೆöÊರ್ಯದಿಂದ ಪರೀಕ್ಷಾ ಕೊಠಡಿಗೆ ತೆರಳುತ್ತಿದ್ದರು. ಆದರೆ, ಪೋಷಕರ ಎದೆ ಬಡಿತ ಹೆಚ್ಚಿತ್ತು. ಮುಖದಲ್ಲಿ ಆತಂಕ ಕೂಡ ಕಾಣುತಿತ್ತು. ಇದಕ್ಕೆ ಕೊರೊನಾ ಪರಿಸ್ಥಿತಿಯೂ ಕಾರಣವಾಗಿತ್ತು.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕಾö್ಯನರ್ ಮೂಲಕ ವಿದ್ಯಾರ್ಥಿಗಳ ಉಷ್ಣಾಂಶ ವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗೂ ಪರೀಕ್ಷಿಸಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಇದಕ್ಕಾಗಿ ಕೇಂದ್ರದಲ್ಲಿ ತಲಾ ಮೂರರಿಂದ ನಾಲ್ಕು ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಏನಾದರು ವಿದ್ಯಾರ್ಥಿಗಳಲ್ಲಿ ಕೊರೊನಾ ಲಕ್ಷಣಗಳು ಕಂಡುಬAದಲ್ಲಿ ಅವರಿಗೆ ಪರ್ಯಾಯ
(ಮೊದಲ ಪುಟದಿಂದ) ಕೊಠಡಿಯ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜೊತೆಗೆ ಪೊಲೀಸ್ ಭದ್ರತೆ ವಹಿಸಲಾಗಿತ್ತು. ಪರೀಕ್ಷೆಯ ಮೊದಲ ದಿನ ವಿದ್ಯಾರ್ಥಿಗಳು ಪ್ರಮುಖ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಬರೆದರು. ತಾ. ೨೨ ರಂದು ಭಾಷ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಬಣ್ಣ ಬಣ್ಣದ ಉತ್ತರ ಪತ್ರಿಕೆ
ಗಣಿತ ವಿಷಯಕ್ಕೆ ಪಿಂಕ್, ವಿಜ್ಞಾನ ವಿಷಯಕ್ಕೆ ಕಿತ್ತಳೆ, ಸಮಾಜ ವಿಷಯಕ್ಕೆ ಹಸಿರು ಬಣ್ಣದ ಉತ್ತರ ಪತ್ರಿಕೆ (ಒಎಂಆರ್ ಶೀಟ್) ನೋಡಿ ವಿದ್ಯಾರ್ಥಿಗಳು ಪುಳಕಿತರಾದರು. ಹೊಸ ಕಾರ್ಯವಿಧಾನದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಧೈರ್ಯದಿಂದಲೇ ಎದುರಿಸಿದ್ದಾರೆ.
ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ರ ತನಕದ ಮೂರು ಗಂಟೆಯ ಅವಧಿಯಲ್ಲಿ ಪರೀಕ್ಷೆ ನಡೆಯಿತು. ಸರಿಯಾಗಿ ೧೦.೩೦ ಗಂಟೆಗೆ ಸಿಬ್ಬಂದಿಗಳು ಕೇಂದ್ರದಲ್ಲಿದ್ದ ಪ್ರಶ್ನೆ ಪತ್ರಿಕೆಯನ್ನು ಎಕ್ಸಾಂ ಹಾಲ್‌ಗೆ ಕಳುಹಿಸಿ ಹಂಚಿಕೆ ಮಾಡಿದರು. ಮೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳಂತೆ ಕೂರಲು ವ್ಯವಸ್ಥೆ ಮಾಡಲಾಗಿತ್ತು.
ಸಾರಿಗೆ ವ್ಯವಸ್ಥೆ
ಎಸ್.ಎಸ್.ಎಲ್.ಸಿ. ಪರೀಕ್ಷೆ ಹಿನ್ನೆಲೆ ಪರೀಕ್ಷೆ ಬರೆಯುವ ವಿದ್ಯಾರ್ಥಿ ಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರ ತೋರಿಸಿದರೆ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಹಾಗೂ ಹಿಂದಿರುಗುವಾಗಲೂ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿತ್ತು.
ವಿದ್ಯಾರ್ಥಿಗಳ ಪ್ರವೇಶ ಪತ್ರದ ಆಧಾರದ ಮೇಲೆ ಬಸ್ ಪ್ರಯಾಣಿಸುವ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿದ್ದಲ್ಲಿ, ವಿದ್ಯಾರ್ಥಿಗಳು ಬಸ್ಸನ್ನು ಹತ್ತಲು, ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಇರದೇ ಕೇಂದ್ರಗಳಿಗೆ ಆಟೋ, ಟ್ಯಾಕ್ಸಿಯಲ್ಲಿ ವಿದ್ಯಾರ್ಥಿಗಳು ಬಂದಿದ್ದು ಕಂಡುಬAತು. ಅಲ್ಲದೆ ಪೋಷಕರೆ ಮಕ್ಕಳನ್ನು ತಮ್ಮ ಸ್ವಂತ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ಪರೀಕ್ಷೆ ಮುಗಿಯುವ ಕಾದು ಮಕ್ಕಳನ್ನು ಕರೆದುಕೊಂಡು ಕೆಲವು ಪೋಷಕರು ತೆರಳಿದರು.ಹೊಸ ಕಾರ್ಯವಿಧಾನದಲ್ಲಿ ಪರೀಕ್ಷೆ ಬರೆದಿರುವುದು ವಿನೂತನ ಅನುಭವ ನೀಡಿದೆ. ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಿದ್ದರು. ಉತ್ತರ ಪತ್ರಿಕೆಯಲ್ಲಿ ಒಮ್ಮೆ ಮಾತ್ರ ಉತ್ತರವನ್ನು ಗುರುತಿಸಬೇಕು. ತಿದ್ದಿ ಬರೆಯುವಂತಿರಲಿಲ್ಲ. ಹೀಗಾಗಿ ಯೋಚಿಸಿ ಗುರುತು ಮಾಡುತ್ತಿದ್ದೆವು. ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆ ಇತ್ತು. ಯಾವುದೇ ಸಮಸ್ಯೆಯಾಗಲಿಲ್ಲ.
-ನಿತಿನ್, ವಿದ್ಯಾರ್ಥಿ, ಗೋಣಿಕೊಪ್ಪ