ಕೂಡಿಗೆ, ಜು. ೧೯: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅಧೀನಕ್ಕೆ ಒಳಪಡುವ ಕೃಷಿ ಇಲಾಖೆಯ ಜಮೀನಿನಲ್ಲಿ ೨೦ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಕೆಲಸ ಇಲಾಖೆಯ ವತಿಯಿಂದ ನಡೆಯುತ್ತಿದೆ
ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ೨೦ ಎಕರೆಗಳಷ್ಟು ಪ್ರದೇಶದಲ್ಲಿ ವರ್ಷಂಪ್ರತಿಯAತೆ ಈ ಬಾರಿಯು ಅಲ್ಲಿನ ಗದ್ದೆಗಳಿಗೆ ಭತ್ತ ನಾಟಿ ಮಾಡಲು ಭತ್ತ ಸಸಿಮಡಿಗಳನ್ನು ಸಿದ್ಧಮಾಡಿ ಅದರ ಜೊತೆಯಲ್ಲಿ ಹಾರಂಗಿ ನದಿಯಿಂದ ಪಂಪ್‌ಸೆಟ್ ಮೂಲಕ ನೀರನ್ನು ಹಾಯಿಸಿಕೊಂಡು ಗದ್ದೆಗಳನ್ನು ಉಳುಮೆ ಮಾಡಿ ನಾಟಿ ಕಾರ್ಯವನ್ನು ಕೈಗೊಳ್ಳಲಾಯಿತು.
ಕೂಡಿಗೆಯಲ್ಲಿರುವ ಕೃಷಿ ಜಮೀನಿನಲ್ಲಿ ಬೀಜೋತ್ಪಾದನೆ ಅನುಕೂಲವಾಗಲು ಸರಕಾರ ನಿಯಮಗಳ ಅನುಸಾರವಾಗಿ ಕೃಷಿ ಇಲಾಖೆಯಿಂದ ಈ ಸಾಲಿನಲ್ಲಿ ತುಂಗಾ ಐಇಟಿ ೧೩೯೦೧ ಎಂಬ ಹೈಬ್ರೀಡ್ ತಳಿಯ ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯ ನಿರ್ದೇಶಕ ಮಾದವರಾವ್ ತಿಳಿಸಿದ್ದಾರೆ