ಸಿದ್ದಾಪುರ, ಜು. ೧೭: ಜೆ.ಐ.ಹೆಚ್ ಜಿಲ್ಲಾ ಸಮಿತಿ ಹಾಗೂ ಟಚ್ ಚಾರಿಟೇಬಲ್ ಟ್ರಸ್ಟ್, ಪೀಪಲ್ಸ್ ಫೌಂಡೇಶನ್ ಕೇರಳ ಇವರ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯ ಪ್ರಥಮ ಹಂತದ ೨೫ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಯಿತು. ನೆಲ್ಲಿಹುದಿಕೇರಿಯ ನಲ್ವತ್ತೇಕರೆಯಲ್ಲಿ ಸಿದ್ದಾಪುರದ ನೆರೆ ಸಂತ್ರಸ್ತ ಕುಟುಂಬಗಳಿಗೆ ಮೊದಲ ಹಂತದ ಮನೆಗಳ ನಿರ್ಮಾಣಕ್ಕೆ ಉಲ್ಲಾಳದ ಇಸ್ಲಾಮಿ ವಿದ್ವಾಂಸರಾದ ಯಹ್ಯಾ ತಂಙಳ್ ಮದನಿ, ಉಲ್ಲಾಳ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಇಸ್ಲಾಮ್ ಹಿಂದ್ ಸಂಘಟನೆಯ ಸಂಚಾಲಕ ಅಬ್ದುಸ್ಸಲಾಮ್ ಯು. ವಹಿಸಿ ಮಾತನಾಡಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್, ಜಿ.ಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಗ್ರಾ.ಪಂ. ಸದಸ್ಯರುಗಳಾದ ಶಂಶೀರ್, ಸುಹದಾ, ಕೆ.ಪಿ ಅಶೋಕ್, ಕೆ.ಕೆ ಹಕೀಂ, ಆಸಿಫಾ, ಸೆಫಿಯಾ, ನಲ್ವತ್ತೇಕರೆ ಜುಮ್ಮಾ ಮಸೀದಿ ಅಧ್ಯಕ್ಷ ಬೀರಾನ್ ಕುಟ್ಟಿ, ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಉದ್ಯಮಿ ಮಹ್‌ಪೂಝ್ ಇನ್ನಿತರರು ಹಾಜರಿದ್ದರು.