ಕುಶಾಲನಗರ. ಜು.೧೭: ಕಾವೇರಿ ನಿಸರ್ಗಧಾಮ ಸೋಮವಾರದಿಂದ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ತಿಳಿಸಿದ್ದಾರೆ. ಆದರೆ ದುಬಾರೆ ಸಾಕಾನೆ ಶಿಬಿರಕ್ಕೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಮುಂದುವರೆದಿದ್ದು, ದುಬಾರೆ ಕಾವೇರಿ ನದಿಯಲ್ಲಿ ಎರಡು ದಿನಗಳಿಂದ ರಾಫ್ಟಿಂಗ್ ಸಾಹಸ ಕ್ರೀಡೆ ಆರಂಭಗೊAಡಿದೆ. ನದಿಯಲ್ಲಿ ನೀರಿನ ಹರಿವು ಅಧಿಕ ಇರುವ ಹಿನ್ನೆಲೆಯಲ್ಲಿ ಮತ್ತು ಸಾಕಾನೆಗಳ ಆರೋಗ್ಯ ತಪಾಸಣಾ ಕಾರ್ಯ ನಡೆಯುತ್ತಿರುವ ಕಾರಣ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ತಿಳಿಸಿದ್ದಾರೆ. ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ದುಬಾರೆಗೆ ಪ್ರವಾಸಿಗರ ಆಗಮನದ ಸಂಖ್ಯೆ ಬಹುತೇಕ ಕಡಿಮೆ ಇರುವುದಾಗಿ ರಾಫ್ಟಿಂಗ್ ಅಸೋಸಿಯೇಶನ್ ಪ್ರಮುಖರಾದ ಕೆ ಎಸ್ ರತೀಶ್, ಸಿ ಎಲ್ ವಿಶ್ವ, ಎಂಸಿ ದಾಮೋದರ್ , ವಸಂತ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
-ಚಿಂಚು