ಮಡಿಕೇರಿ, ಜು. ೧೬: ಕಾಂಗ್ರೆಸ್ ಪಕ್ಷದಲ್ಲಿ ಮುನಿಸಿಕೊಂಡಿರುವ ಪಕ್ಷದ ಪ್ರಮುಖ ಹಾಗೂ ರಾಜ್ಯ ಐ.ಎನ್.ಟಿ. ಯು.ಸಿ. ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಬೆಂಬಲಿಗರೊAದಿಗೆ ಪಕ್ಷ ತೊರೆಯಲು ಮುಂದಾಗಿರುವ ವಿಚಾರ ಇದೀಗ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯಕ್ಕೆ ಸಂಬAಧಿಸಿದAತೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಪಕ್ಷದ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಮುತ್ತಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೂಡ ಮಾತನಾಡಿ ಮಾತುಕತೆ ನಡೆಸಲು ಕರೆದಿದ್ದಾರೆ. ಈ ಮುಖಂಡರು ಇಂಟೆಕ್ ಅಥವಾ ಕಾರ್ಮಿಕ ಘಟಕದಲ್ಲಿ ರಾಜ್ಯದಲ್ಲಿ ಸ್ಥಾನ ಕಲ್ಪಿಸುವದಾಗಿ ಹೇಳಿದರೆನ್ನಲಾಗಿದೆ. ಆದರೆ ತಾವು ಈಗಾಗಲೇ ಇದರಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದು, ಇನ್ನು ತಮಗೆ ಇದರ ರಾಜ್ಯ ಅಧ್ಯಕ್ಷ ಸ್ಥಾನವಷ್ಟೆ ನೀಡಬೇಕು. ಆದರೆ ತಮಗೆ ಇದರಲ್ಲಿ ಆಸಕ್ತಿ ಇಲ್ಲ ಎಂದು ಮುತ್ತಪ್ಪ ತಿಳಿಸಿದ್ದಾರೆ.
ಮುಂದಿನ ವಾರ ಬೆಂಗಳೂರಿನಲ್ಲಿ ಚರ್ಚೆಗೆ ನಾಯಕರು ಕರೆದಿದ್ದಾರೆ. ಈ ಸಂದರ್ಭ ಶಾಸಕ ಸ್ಥಾನದ ಟಿಕೆಟ್ ನೀಡುವಂತೆ ತಮ್ಮ ಬೇಡಿಕೆ ಮುಂದಿಡಲಾಗುವದು. ಈ ಭರವಸೆ ನೀಡಿದರೆ ಪಕ್ಷದಲ್ಲಿ ಕೆಲಸ ನಿರ್ವಹಿಸುವ ಚಿಂತನೆ ಮಾಡಲಿರುವ ದಾಗಿ ಮುತ್ತಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿನ ಮುಖಂಡರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಬದಲಿಗೆ ಮೌನವಾಗಿ ದ್ದಾರೆ. ತಮಗೆ ಕಾರ್ಯಕರ್ತರಿಂದ ಹೆಚ್ಚು ಒತ್ತಡ ಇದೆ. ತಾವು ಹಾಗೂ ಬೆಂಬಲಿಗರನ್ನು ಸಭೆಗಳಿಗೆ ಆಹ್ವಾನಿಸುವುದಿಲ್ಲ. ಆದರೂ ತಾವು ಈ ತನಕ ಎಲ್ಲೂ ಬಂಡಾಯದ ದನಿ ಎತ್ತಿರಲಿಲ್ಲ. ಪಕ್ಷಕ್ಕೆ ಸಹಕಾರವನ್ನೇ ನೀಡುತ್ತಾ ಬಂದಿದ್ದಾಗಿ ಹೇಳಿದ್ದಾರೆ. ರಾಜ್ಯ ಅಧ್ಯಕ್ಷರ ಜತೆಗಿನ ಚರ್ಚೆಯ ಬಳಿಕ ಅಂತಿಮ ನಿರ್ಧಾರಕ್ಕೆ ಬರುವದಾಗಿ ಹೇಳಿದ್ದಾರೆ.