ಮಡಿಕೇರಿ, ಜು. ೧೬: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಈತನಕ ಸುರಿದಿರುವ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಸರಾಸರಿ ೧೮ ಇಂಚಿನಷ್ಟು ಅಧಿಕವಾಗಿದೆ. ಕಳೆದ ವರ್ಷ ಜನವರಿಯಿಂದ ಈ ಅವಧಿ ಯಲ್ಲಿ ೩೦.೫೩ ಇಂಚು ಮಳೆಯಾಗಿದ್ದರೆ, ಈ ಬಾರಿ ೪೯.೪೪ ಇಂಚು ದಾಖಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆಯ ಪ್ರಮಾಣ ಹೆಚ್ಚಿದೆ. ಜನವರಿಯಿಂದ ಈತನಕ ೭೧.೪೦ ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಈ ಪ್ರಮಾಣ ೪೫.೦೫ ಇಂಚಿನಷ್ಟಾಗಿತ್ತು. ತಾಲೂಕಿನಲ್ಲಿ ಸರಾಸರಿ ೨೬.೩೫ ಇಂಚಿನಷ್ಟು ಹೆಚ್ಚು ಮಳೆಯಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ೨೮.೩೫ ಇಂಚು ಮಳೆಯಾಗಿದ್ದರೆ, ಈ ಬಾರಿ ೪೧.೩೩ ಇಂಚು ಮಳೆಯಾಗಿದ್ದು, ೧೨.೯೮ ಇಂಚು ಅಧಿಕ ಕಂಡುಬAದಿದೆ.
ಸೋಮವಾರಪೇಟೆ ತಾಲೂಕಿ ನಲ್ಲೂ ಈ ಬಾರಿ ಅಧಿಕ ಮಳೆಯಾಗಿದೆ. ಕಳೆದ ಸಾಲಿನಲ್ಲಿ ೧೮.೧೫ ಇಂಚು ಮಳೆ ಬಿದ್ದಿದ್ದರೆ ಈ ಬಾರಿ ೩೫.೮೮ ಇಂಚಾಗಿದ್ದು, ೧೭.೭೩ ಇಂಚು ಹೆಚ್ಚಾಗಿದೆ.
ನಿನ್ನೆಯ ಮಳೆ ವಿವರ
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨.೦೭ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿ ನಲ್ಲಿ ೨.೭೪, ವೀರಾಜಪೇಟೆ ಯಲ್ಲಿ ೧.೪೮ ಹಾಗೂ ಸೋಮವಾರಪೇಟೆ ಯಲ್ಲಿ ೧.೯೯ ಇಂಚು ಸರಾಸರಿ ಮಳೆ ಯಾಗಿದೆ.
ಹೋಬಳಿವಾರು ಮಾಹಿತಿ
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ಕಸಬಾದಲ್ಲಿ ೩.೧೫ ಇಂಚು, ನಾಪೋಕ್ಲು ೨.೬೦, ಸಂಪಾಜೆ ೧.೮೦, ಭಾಗಮಂಡಲ ೩.೪೨ ಇಂಚು ಮಳೆಯಾಗಿದೆ. ವೀರಾಜಪೇಟೆ ಕಸಬಾದಲ್ಲಿ ೧.೮೦, ಹುದಿಕೇರಿ ೧.೭೮, ಶ್ರೀಮಂಗಲ ೧.೪೧, ಪೊನ್ನಂಪೇಟೆ ೧.೯೪, ಅಮ್ಮತ್ತಿ ೦.೯೬, ಬಾಳೆಲೆಗೆ ಒಂದು ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ೧.೭೭, ಶನಿವಾರಸಂತೆ ೧.೧೮, ಶಾಂತಳ್ಳಿ ೩.೭೯, ಕೊಡ್ಲಿಪೇಟೆ ೧.೪೨, ಕುಶಾಲನಗರ ೧.೨೮ ಹಾಗೂ ಸುಂಟಿಕೊಪ್ಪ ಹೋಬಳಿಗೆ ೨.೫೨ ಇಂಚು ಮಳೆಯಾಗಿದೆ.
ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಭಾಗದಲ್ಲಿ ಮುಂಜಾನೆಯಿAದಲೇ ವರುಣ ಬಿಡುವು ನೀಡಿದ್ದು, ಮಳೆ ಇಳಿಮುಖ ಗೊಂಡಿದೆ. ಮೋಡ ಕವಿದ ವಾತಾವರಣದ ನಡುವೆ ಆಗಾಗ್ಗೆ ಬಿಸಿಲು ಕಾಣಿಸಿಕೊಂಡಿತು.
ಮಳೆಯ ಬಿಡುವು ಹಿನ್ನೆಲೆ ರೈತರು ತಮ್ಮ, ತಮ್ಮ ಭತ್ತದ ಗದ್ದೆಗಳಲ್ಲಿ ಕಾಣಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು.
ಕಳೆದ ಎರಡು ದಿನಗಳಿಂದ ಸುರಿದ ಮಳೆ, ಗಾಳಿಯಿಂದ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಿತ್ತು. ಅಲ್ಲಲ್ಲಿ ವಿದ್ಯುತ್ ಕಂಬಗಳು ಮಳೆ, ಗಾಳಿಯಿಂದ ಉರುಳಿದ್ದವು.
ಮಳೆ ಬಿಡುವು ನೀಡಿದ ಕಾರಣ ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬಗಳ ದುರಸ್ತಿ ಕಾರ್ಯವನ್ನು ಕೈಗೊಂಡರು. ಮಳೆಯ ಬಿಡುವು ಚೆಸ್ಕಾಂ ಸಿಬ್ಬಂದಿಗಳಿಗೆ ಅನುಕೂಲವಾಯಿತು.ಸೋಮವಾರಪೇಟೆ: ಕಳೆದ ಐದು ದಿನಗಳಿಂದ ಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆ ಇಂದು ಕೊಂಚ ಬಿಡುವು ನೀಡಿತು. ಇಂದು ಬೆಳಗ್ಗೆ ೮ ಗಂಟೆಯವರೆಗೂ ಆರ್ಭಟಿಸಿದ ಮಳೆ, ನಂತರ ತನ್ನ ಅಬ್ಬರವನ್ನು ತಗ್ಗಿಸಿತು.
ಕಳೆದೆರಡು ದಿನಗಳಿಂದ ಕಾಫಿ ತೋಟದಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದ್ದು, ಇಂದು ಹಲವಷ್ಟು ತೋಟಗಳಲ್ಲಿ ಕಾರ್ಮಿಕರು ಎಂದಿನAತೆ ಕೆಲಸ ಮಾಡಿದರು. ಮಳೆ ಬಿಡುವು ನೀಡಿದ್ದರಿಂದ ಕೃಷಿ ಕಾರ್ಯಗಳು ಚುರುಕು ಪಡೆದವು.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಇಂದೂ ಸಹ ಸಾಧಾರಣ ಮಳೆ ಸುರಿಯಿತು. ಇನ್ನೆರಡು ದಿನ ಭಾರೀ ಮಳೆಯಾಗಿದ್ದರೆ ಕುಡಿಗಾಣ ಗ್ರಾಮ ಸಂಪರ್ಕ ರಸ್ತೆಗೆ ನಿರ್ಮಿಸಿರುವ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿದುಕೊಳ್ಳುವ ಆತಂಕ ನಿರ್ಮಾಣವಾಗಿತ್ತು.
ಇಂದಿನಿAದ ಮಳೆ ಬಿಡುವು ನೀಡಿದ್ದರಿಂದ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ತೋಟ ಹಾಗೂ ಗದ್ದೆಗಳಲ್ಲಿ ಎಂದಿನAತೆ ಕೆಲಸಗಳು ಪ್ರಾರಭಗೊಂಡಿದ್ದು, ಗದ್ದೆಗಳಲ್ಲಿ ತೇವಾಂಶವಿರುವುದರಿAದ ಉಳುಮೆ ಕಾರ್ಯಕ್ಕೆ ಸಹಕಾರಿಯಾಗಿದೆ ಎಂದು ಹರಗ ಗ್ರಾಮದ ಶರಣ್, ತೋಳೂರುಶೆಟ್ಟಳ್ಳಿಯ ಸುಧಾಕರ್ ಅವರುಗಳು ಅಭಿಪ್ರಾಯಿಸಿದ್ದಾರೆ.
ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ೪೪.೪ ಮಿ.ಮೀ., ಶಾಂತಳ್ಳಿ ಹೋಬಳಿಯಲ್ಲಿ ೯೪.೮ ಮಿ.ಮೀ., ಕೊಡ್ಲಿಪೇಟೆ ೩೫.೬ ಮಿ.ಮೀ., ಶನಿವಾರಸಂತೆ ೨೯.೬ ಮಿ.ಮೀ., ಸುಂಟಿಕೊಪ್ಪ ೬೩.೨ ಮಿ.ಮೀ., ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ೩೨ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ನಾಪೋಕ್ಲು: ಭಾರಿ ಗಾಳಿ-ಮಳೆಯಿಂದಾಗಿ ನಾಪೋಕ್ಲು - ಮೂರ್ನಾಡು ರಸ್ತೆಯ ಹೊದ್ದೂರು ಬಳಿ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸಾರ್ವಜನಿಕರ ಸಹಕಾರದಿಂದ ಮರವನ್ನು ತೆರವು ಮಾಡಲಾಯಿತು.ಚೆಟ್ಟಳಿ : ಚೆಟ್ಟಳ್ಳಿ- ಮಡಿಕೇರಿ ನಡುವೆ ಅಬ್ಯಾಲದಲ್ಲಿ ಬೃಹತ್ ಗಾತ್ರದ ಮರವೊಂದು ಗುರುವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿಗೊಂಡಿತ್ತು. ಕುಶಾಲನಗರ ವಲಯದ ಮೀನುಕೊಲ್ಲಿ ಅರಣ್ಯ ಇಲಾಖೆ ಫಾರೆಸ್ಟರ್ ಸುಬ್ರಾಯ ನೇತೃತ್ವದಲ್ಲಿ ಇಲಾಖಾ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.ಶನಿವಾರಸಂತೆ: ಶನಿವಾರಸಂತೆ ೧ನೇ ವಿಭಾಗದ ನಾಡಕಚೇರಿಯ ಪಕ್ಕದಲ್ಲಿರುವ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರ ಹುಟ್ಟು ಮನೆಯಲ್ಲಿರುವ ಗ್ರಂಥಾಲಯದ ಹಿಂಬದಿಯ ತಡೆಗೋಡೆ ಗುರುವಾರದ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದಿದೆ.
ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಸರೋಜ ಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಲೆಕ್ಕ ಸಹಾಯಕ ವಸಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.