ಮಡಿಕೇರಿ, ಜು. ೧೬: ನಗರದ ಕೋಟೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯವನ್ನು ಉಪವಿಭಾಗಧಿಕಾರಿ ಈಶ್ವರ್ ಕುಮಾರ್ ಖಾಂಡು ಭೇಟಿ ನೀಡಿ ಪರಿಶೀಲಿಸಿದರು.

ಕೋಟೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವೀರಾಜಪೇಟೆಯ ವಕೀಲ ಎನ್. ರವೀಂದ್ರನಾಥ್ ಕಾಮತ್ ಮೂಲಕ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕ ಅವರು ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ, ಅರ್ಜಿದಾರರ ಆಕ್ಷೇಪವಿದ್ದಲ್ಲಿ ಅದನ್ನು ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.

ಈ ಹಿನ್ನೆಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೊದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಿರೂಪಾಕ್ಷಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದರು. ತುರ್ತು ಸಭೆ ನಿಮಿತ್ತ ಉಪವಿಭಾಗಾಧಿಕಾರಿಗೆ ಪರಿಶೀಲನೆ ನಡೆಸಲು ನಿರ್ದೇಶನ ನೀಡಿ ತೆರಳಿದರು.

ಇದಕ್ಕೂ ಮುನ್ನ ಅರ್ಜಿದಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ರೂ. ೯.೪೫ ಕೋಟಿ ವೆಚ್ಚದ ಕಾಮಗಾರಿಗೆ ಪ್ರಥಮ ಹಂತದಲ್ಲಿ ರೂ. ೫ ಕೋಟಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಮಳೆಗಾಲದಲ್ಲಿ ಕೋಟೆಯೊಳಗೆ ನೀರು ಸೋರಿಕೆಯಾಗುತ್ತಿದ್ದು, ಅದನ್ನು ಸರಿಪಡಿಸಲು ಕೋರ್ಟ್ ಸೂಚಿಸಿದೆ. ಅದರಂತೆ ಕೆಲಸವಾಗುತ್ತಿದ್ದು, ಇನ್ನೂ ಕಾಮಗಾರಿ ಬಾಕಿ ಇದೆ. ಕೋಟೆ ಸಂರಕ್ಷಣೆಗೆ ವ್ಯವಸ್ಥಿತವಾಗಿ ಕೆಲಸ ಮಾಡಲಾಗುವುದು ಎಂದರು.

ಅರ್ಜಿದಾರ ಜೆ.ಎಸ್. ವಿರೂಪಾಕ್ಷಯ್ಯ ಮಾತನಾಡಿ, ಬಿಡುಗಡೆಯಾದ ಅನುದಾನ ಪೈಕಿ ಶೇ. ೨೩ ಆಡಳಿತಾತ್ಮಕ ವೆಚ್ಚ

(ಮೊದಲ ಪುಟದಿಂದ) (ಂಜmiಟಿisಣಡಿಚಿಣioಟಿ ಛಿhಚಿಡಿge) ಎಂದು ಕಡಿತಗೊಳಿಸಲಾಗಿದೆ. ನ್ಯಾಯಾಲಯ ಹಲವು ಬಾರಿ ಕೋಟೆ ಸಂರಕ್ಷಣೆಗೆ ನಿರ್ದೇಶನ ನೀಡಿದೆ. ಆದರೆ, ಅಧಿಕಾರಿಗಳು ತೃಪ್ತಿದಾಯಕ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಮಾರಕ ಸಂರಕ್ಷಣೆಗೆ ಆದ್ಯತೆ ನೀಡಿ ನ್ಯಾಯಾಲಯಕ್ಕೆ ಸೂಕ್ತ ವರದಿ ಸಲ್ಲಿಸಬೇಕೆಂದು ಮನವಿ ಮಾಡಿದರು. ಮೂರು ವರ್ಷ ಕಳೆದರು ಮಳೆಯಿಂದ ಸೋರುವ ಮಾಳಿಗೆ ಸರಿಪಡಿಸಲು ಆಗಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷö್ಯ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೋಟೆ ಸಂರಕ್ಷಣೆ ಹಾಗೂ ದುರಸ್ತಿಗೆ ಡಿಪಿಆರ್ ತಯಾರಿಸಲಾಗಿದೆ. ನಿಮ್ಮ ಆಕ್ಷೇಪಣೆಗಳನ್ನು ಕೋರ್ಟ್ಗೆ ವರದಿ ಮೂಲಕ ಸಲ್ಲಿಸಲಾಗುವುದು ಎಂದರು. ಇದೇ ಸಂದರ್ಭ ಗದ್ದುಗೆ ವ್ಯಾಪ್ತಿ ಒತ್ತುವರಿ ಬಗ್ಗೆ ವಿರೂಪಾಕ್ಷಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಒತ್ತುವರಿಯಾಗಿರುವ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಲಾಗುತ್ತದೆ ಎಂದರು.

ಪರಿಶೀಲನೆ ಬಳಿಕ ಉಪವಿಭಾಗಧಿಕಾರಿ ಈಶ್ವರ್ ಕುಮಾರ್ ಖಾಂಡು ಮಾತನಾಡಿ, ನ್ಯಾಯಾಲಯದ ಆದೇಶ, ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾಮಗಾರಿಯನ್ನು ಪರಿಶೀಲಿಸಿ ವಸ್ತುಸ್ಥಿತಿ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡುತ್ತೇನೆ. ಅವರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದರು

ಈ ಸಂದರ್ಭ ಭಾರತೀಯ ಪುರಾತತ್ವ ಸಂರಕ್ಷಣಾ ಇಲಾಖೆಯ ಅಧಿಕಾರಿಗಳಾದ ಚಂದ್ರಕಾAತ್, ಶ್ರೀ ಗುರುಬಾಗಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಭಾಶಿವಮೂರ್ತಿ, ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ, ಪ್ರಮಖರಾದ ಉದಯ್ ಕುಮಾರ್, ಪ್ರಸನ್ನ, ದಿನೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.