ಮಡಿಕೇರಿ, ಜು. ೧೪: ವಿವಿಧ ವರ್ಗಳ ಸಮುದಾಯಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಮುದಾಯ ಭವನಗಳ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ ರೂ. ೨ ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

ಸಂಘ-ಸAಸ್ಥೆಗಳಿಗೆ ೨೦೨೦-೨೧ನೇ ಸಾಲಿನ ಆಯವ್ಯಯದಲ್ಲಿ ಈ ಅನುದಾನವನ್ನು ಒದಗಿಸಿ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ಮಡಿಕೇರಿಯ ಕೊಡಗು ಗೌಡ ಸಮಾಜದ ಸಮುದಾಯ ಭವನಕ್ಕೆ ರೂ. ೫೦ ಲಕ್ಷ ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನಕ್ಕೆ ರೂ. ೫೦ ಲಕ್ಷ, ಕಾರುಗುಂದ ಗೌಡ ಸಮಾಜದ ಸಮುದಾಯ ಭವನಕ್ಕೆ ರೂ. ೫೦ ಲಕ್ಷ ಹಾಗೂ ಚೆಟ್ಟಳ್ಳಿ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. ೫೦ ಲಕ್ಷ ಸೇರಿದಂತೆ ಒಟ್ಟು ರೂ. ೨ ಕೋಟಿ ಅನುದಾನವನ್ನು ಕೊಡಗು ಜಿಲ್ಲೆಗೆ ಮಂಜೂರು ಮಾಡಲಾಗಿದೆ.

ಮಂಜೂರಾದ ಅನುದಾನವನ್ನು ೨ ವರ್ಷಗಳ ಬಳಗಾಗಿ ಕಾಮಗಾರಿಗೆ ವಿನಿಯೋಗಿಸುವಂತೆ ಹಾಗೂ ಇತರ ಷರತ್ತಿಗೊಳಪಟ್ಟಂತೆ ಮಂಜೂರು ಮಾಡಿ ಸರಕಾರ ಆದೇಶಿಸಿದೆ.