ಮಡಿಕೇರಿ, ಜು. ೧೪: ಮಡಿಕೇರಿ ತಾಲೂಕಿನ ಐವತ್ತೊಕ್ಲು ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಪ್ರಕರಣವನ್ನು ಭಾಗಮಂಡಲ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಐವತ್ತೊಕ್ಲು ಗ್ರಾಮದಲ್ಲಿ ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಭಾಗಮಂಡಲ ಠಾಣಾ ಪಿಎಸ್‌ಐ ಅವರ ನೇತೃತ್ವದ ತಂಡವು ಆರೋಪಿ ಕಾಫಿ ತೋಟದಲ್ಲಿ ಗಾಂಜಾ ಗಿಡ

ರೂ.೨೩,೦೦೦ ಮೌಲ್ಯದ ಗಿಡಗಳು ವಶ ಐವತೋಕ್ಲು ಗ್ರಾಮದ ನಿವಾಸಿ ಪಿ.ಎಸ್. ವಿಜಯ ಮೇದಪ್ಪ ಎಂಬವರನ್ನು ವಶಕ್ಕೆ ಪಡೆದು ಸುಮಾರು ೧,೬೮೦ ಗ್ರಾಂ. ತೂಕದ ಒಟ್ಟು ರೂ. ೨೩,೦೦೦ ಬೆಲೆ ಬಾಳುವ, ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಮಂಡಲ ಠಾಣಾ ಪಿಎಸ್‌ಐ ಹೆಚ್.ಕೆ. ಮಹದೇವ್, ಸಿಬ್ಬಂದಿಗಳಾದ ಶಿವರಾಮ್ ಎಂ.ಬಿ., ನಂಜುAಡ ಎನ್.ಕೆ., ಇಬ್ರಾಹಿಂ, ಮಹೇಶ್, ಸುರೇಶ್ ಕುಮಾರ್, ಪುನೀತ್ ಕುಮಾರ್ ಎನ್.ಆರ್., ಮಹದೇವಸ್ವಾಮಿ ಅವರು ಪಾಲ್ಗೊಂಡಿದ್ದರು.