ಲಸಿಕೆ ಪಡೆದಿದ್ದರೆ ಪರೀಕ್ಷೆ ಅಗತ್ಯವಿಲ್ಲ

ಮಡಿಕೇರಿ, ಜು. ೧೪: ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರಿಗೆ ವಿಶೇಷ ಕಣ್ಗಾವಲು ಕ್ರಮಗಳನ್ನು ಅನುಸರಿಸುವ ಸಂಬAಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಾ. ೧೩ ರಂದು ಆದೇಶಿಸಿದ್ದರು. ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ಸಂಬAಧ ಆರ್‌ಟಿಪಿಸಿಆರ್ ನೆಗೆಟಿವ್ ದೃಢೀಕರಣ ಪತ್ರ ಹೊಂದಿರಬೇಕೆAಬ ಆದೇಶವನ್ನು ಬದಲಿಸಲಾಗಿದ್ದು, ಕೋವಿಡ್ ನಿರೋಧಕ ಲಸಿಕೆಯ ಒಂದು ಅಥವಾ ಎರಡನೆಯ ಡೋಸ್ ಪಡೆದಿದ್ದಲ್ಲಿ ಅಂತಹವರು ಪ್ರಮಾಣ ಪತ್ರವನ್ನು ಚೆಕ್‌ಪೋಸ್ಟ್ಗಳಲ್ಲಿ ತೋರಿಸಿ ಜಿಲ್ಲೆಗೆ ಪ್ರವೇಶಿಸಬಹುದಾಗಿದೆ.