ಮಡಿಕೇರಿ, ಜು. ೧೪: ಕೊಡಗು ಜಿಲ್ಲೆಯಾದ್ಯಂತ ರಭಸದ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಪುನರ್ವಸು ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ನದಿ, ತೊರೆ, ಹಳ್ಳ, ಕೊಳ್ಳ ತುಂಬಿ ಹರಿಯುತ್ತಿದ್ದು, ತೊರೆ ದಾಟುತ್ತಿದ್ದ ವೃದ್ಧರೋರ್ವರು ನೀರಿನಲ್ಲಿ ಕೊಚ್ಚಿಹೋದ ಘಟನೆ ಸಂಭವಿಸಿದೆ. ೨೦೧೮ ರಿಂದಲೇ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರಾಕೃತಿಕ ವಿಕೋಪಗಳಿಂದಾಗಿ ಸಾಕಷ್ಟು ಜೀವ ಹಾನಿಯಾಗಿದ್ದು, ಇದೀಗ ೨೦೨೧ರಲ್ಲಿ ಮಳೆಗೆ ಮೊದಲ ಜೀವ ಬಲಿಯಾದಂತಾಗಿದೆ.
ಮಡಿಕೇರಿ ತಾಲೂಕು ವ್ಯಾಪ್ತಿಯ ಮದೆ ಗ್ರಾ.ಪಂ. ವ್ಯಾಪ್ತಿಯ ಅವಂದೂರು ಗ್ರಾಮದ ಬೊಮ್ಮೇಗೌಡನ ಚಿಣ್ಣಪ್ಪ (ಬಾಬಿ-೭೦) ನೀರಿನಲ್ಲಿ ಕೊಚ್ಚಿ ಹೋಗಿರುವ ದುರ್ದೈವಿ. ಇಂದು ಕುಟುಂಬದ ಐನ್‌ಮನೆಯಲ್ಲಿ ದೇವರಿಗೆ ಕೊಡುವ ಕಾರ್ಯಕ್ರಮ ಇದ್ದುದರಿಂದ ದೇವರ ಕಲ್ಲು ಸ್ವಚ್ಛಗೊಳಿಸಲೆಂದು ಚಿಣ್ಣಪ್ಪ ಹಾಗೂ ಕುಟುಂಬಸ್ಥರಾದ ಕುಂಞಪ್ಪ ಮಧ್ಯಾಹ್ನ ೩ ಗಂಟೆ ವೇಳೆಗೆ ಹೊರಟಿದ್ದರು. ಅವರದೇ ಗದ್ದೆ ಬದಿ ಹರಿಯುವ ತೊರೆಯಲ್ಲಿ ಇಂದು ನೀರಿನ ಹರಿವಿನ ಪ್ರಮಾಣ ಜಾಸ್ತಿ ಇದ್ದುದರಿಂದ ಕುಂಞಪ್ಪ ಅವರು ದಾಟುವದು ಬೇಡವೆಂದು ಹೇಳಿದರೂ ಏನೂ ಆಗುವದಿಲ್ಲವೆಂದು ಚಿಣ್ಣಪ್ಪ ದಾಟಲು ಮುಂದಾಗಿದ್ದಾರೆ. ಈ ಸಂದರ್ಭ ವಿಶೇಷ ಚೇತನರಾಗಿರುವ ಚಿಣ್ಣಪ್ಪ ಅವರ ಕೈಯಲ್ಲಿದ್ದ ದೊಣ್ಣೆ ಬಿದ್ದು ಹೋಗಿದ್ದು, ಕಾಲಿಗೆ ಗಂಬೂಟು ಧರಿಸಿದ್ದ ಅವರು, ಜಾರಿ ಬಿದ್ದಿದ್ದಾರೆ. ನೋಡ - ನೋಡುತ್ತಲೇ ಚಿಣ್ಣಪ್ಪ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದರೆಂದು ಕುಂಞಪ್ಪ ಬಂದು ತಿಳಿಸಿದ ಮೇರೆಗೆ ಸ್ಥಳೀಯರಾದ ಪಟ್ಟಡ ಸುಗುಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಾರ್ಯಾಚರಣೆ ವಿಳಂಬ
ಪೊಲೀಸರಿಗೆ ಮಧ್ಯಾಹ್ನ ೩.೩೦ರ ವೇಳೆಗೆ ವ್ಯಕ್ತಿ ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ನೀಡಲಾಗಿದ್ದರೂ, ಸಂಜೆ ೫ ಗಂಟೆ ವೇಳೆಗೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ನಂತರದಲ್ಲಿ ಹುಡುಕಾಡಿ ಪತ್ತೆಯಾಗದ ಕಾರಣ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿ ಅವರು ಬರುವಷ್ಟರಲ್ಲಿ ಕತ್ತಲಾಗಿದೆ. ಕತ್ತಲಾಗುವವರೆಗೆ ಹುಡುಕಾಡಿದ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿ ತಾ. ೧೫ ರಂದು ಮತ್ತೆ ಬಂದು ಮುಂದುವರೆಸುವದಾಗಿ ಹೇಳಿ ಹಿಂತೆರಳಿದ್ದಾರೆ. ಅಧಿಕಾರಿಗಳೊಂದಿಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಕೂಡ ಕೈ ಜೋಡಿಸಿದ್ದಾರೆ.
ಅಸಮಾಧಾನ
ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದರೂ ಅನಾಹುತ ಸಂಭವಿಸಿರುವ ಬಗ್ಗೆ ಮಾಹಿತಿ ನೀಡಿದರೂ ವಿಳಂಬ ಧೋರಣೆ ಅನುಸರಿಸುವ ಜಿಲ್ಲಾಡಳಿತದ ಕ್ರಮದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲರ್ಟ್ ಘೋಷಣೆಯಿದ್ದರೂ, ಸಕಾಲದಲ್ಲಿ ಮಾಹಿತಿ ನೀಡಿದರೂ ಸ್ಪಂದಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಲ್ಲಿ ಹಾನಿ
ಭಾರೀ ಗಾಳಿ - ಮಳೆಗೆ ಮಡಿಕೇರಿ ನಗರದ ಕೆಲವೆಡೆ ಭೂಕುಸಿತ, ವಿದ್ಯುತ್ ತಂತಿಗಳು ಮತ್ತು ಮರಗಳು ಬಿದ್ದು ಹಾನಿ ಸಂಭವಿಸಿರುತ್ತದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಂಗಳೂರು ರಸ್ತೆಯ ಬದಿಯೊಂದರಲ್ಲಿ ಭೂಕುಸಿತದಿಂದಾಗಿ ೬ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ನಗರದ ಆಕಾಶವಾಣಿ ಬಳಿಯೂ ಭೂಕುಸಿತವುಂಟಾಗಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿಯೂ ಮರಗಳು ಬಿದ್ದು ನಷ್ಟವುಂಟಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ತಾ. ೧೫ ರಿಂದ (ಇಂದಿನಿAದ) ತಾ. ೧೮ರ ವರೆಗೆ ಆರೆಂಜ್, ರೆಡ್ ಹಾಗೂ ಎಲ್ಲೋ ಅಲರ್ಟ್ಗಳನ್ನು ಘೋಷಿಸಲಾಗಿದೆ. ಹಾರಂಗಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನದಿ ಹಾಗೂ ಕಾಲುವೆಗಳಿಗೆ ಬಿಡಲಾಗಿದೆ. ಭಾಗಮಂಡಲದಲ್ಲಿಯೂ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಮಡಿಕೇರಿ ನಗರದ ಸನಿಹ ಮಂಗಳೂರು ರಸ್ತೆಯ ಅಡ್ಡ ರಸ್ತೆಯೊಂದರಲ್ಲಿ ನೆಲೆ ನಿಂತಿರುವ ಮನೆಗಳ ಬಳಿ ಭೂಕುಸಿತ ಸಂಭವಿಸಿದೆ. ತಹಶೀಲ್ದಾರ್ ಮಹೇಶ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದರು. ೬ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಕ್ಕೆ ಸೇರಿಸಬಯಸಿದರೂ ಆ ನಿವಾಸಿಗಳು ತಮ್ಮ ಬಂಧುಗಳ ಮನೆಗೆ ತೆರಳುತ್ತೇವೆ ಎಂದುದರಿAದ ಅವಕಾಶ ಕಲ್ಪಿಸಲಾಗಿದೆ ಎಂದು ನಗರಸಭಾ ಕಂದಾಯಾಧಿಕಾರಿ ತಾಹಿರ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಬರೆಯೊಂದು ಕುಸಿದಿದೆ. ನಿರಂತರವಾಗಿ ಮುಖ್ಯ ರಸ್ತೆಯಲ್ಲಿ ದುರಸ್ತಿ ಕಾರ್ಯಗಳು ಹಿಟಾಚಿ ಯಂತ್ರದ ಮೂಲಕ ನಡೆಯುತ್ತಿರುವುದರಿಂದ ಈ ಅಪಾಯ ಸಂಭವಿಸಿರಬಹುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಲಕಾವೇರಿಗೆ ನಿನ್ನೆ ಒಂದೇ ದಿನ ೫.೫೧ ಇಂಚು ಮಳೆಯಾಗಿದೆ. ಭಾಗಮಂಡಲಕ್ಕೆ ೪ ಇಂಚು ಮಳೆ ಸುರಿದಿದೆ. ಭಾಗಮಂಡಲದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ೧೬ ಇಂಚು ಅಧಿಕ ಮಳೆ ಬಿದ್ದಿದೆ. ಕಳೆದ ವರ್ಷ ಈ ಅವಧಿಯಲ್ಲಿ ೮೦.೭ ಇಂಚು ಮಳೆಯಾಗಿದ್ದರೆ, ಈ ವರ್ಷ ೯೪ ಇಂಚು ಮಳೆಯಾಗಿದೆ.
ಮಡಿಕೇರಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಮರಗಳು ಬಿದ್ದು ತಂತಿ ಕಂಬಗಳು ಮುರಿದು ಬಿದ್ದು ವಿದ್ಯುತ್ (ಮೊದಲ ಪುಟದಿಂದ) ಸರಬರಾಜಿಗೆ ಧಕ್ಕೆಯುಂಟಾಗುತ್ತಿದೆ. ಭಾರೀ ಗಾಳಿಯಿಂದಾಗಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಮರವೊಂದು ವಿದ್ಯುತ್ ವಾಹಕದ ಮೇಲೆ ಬಿದ್ದು ಹಾನಿಯುಂಟಾಗಿದೆ. ಸೋಮವಾರ ಪೇಟೆಯಲ್ಲಿ ಕೂಡ ವಿದ್ಯುತ್ ಕಂಬಗಳು ಉರುಳಿವೆ. ಸಿದ್ದಾಪುರ ವಿಭಾಗದ ಸಂಗಯ್ಯನಪುರ ಹಾಡಿಯೊಂದರ ಬಳಿ ಮಳೆ - ಗಾಳಿಗೆ ವಿದ್ಯುತ್ ಮಾರ್ಗಕ್ಕೆ ಹಾನಿಯುಂಟಾಗಿದೆ. ಜಿಲ್ಲೆ ಯಾದ್ಯಂತ ಸೆಸ್ಕ್ ಸಿಬ್ಬಂದಿಗಳು ಸಮರೋಪಾದಿ ದುರಸ್ತಿ ಕಾರ್ಯ ನಡೆಸುತ್ತಿರುವುದಾಗಿ ಜಿಲ್ಲಾ ಸೆಸ್ಕ್ನ ಕಾರ್ಯಕಾರಿ ಅಭಿಯಂತರರಾದ ಅಶೋಕ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಅಲರ್ಟ್ ಘೋಷಣೆ
ಜಿಲ್ಲಾಧಿಕಾರಿಯವರು ಜಿಲ್ಲೆ ಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಅಲರ್ಟ್ ಘೋಷಿಸಿ ದ್ದಾರೆ. ತಾ. ೧೫ ರಂದು (ಇಂದು) ಬೆಳಿಗ್ಗೆ ೮.೩೦ರಿಂದ ತಾ. ೧೬ರ ಬೆಳಿಗ್ಗೆ ೮.೩೦ರವರೆಗೆ ಆರೆಂಜ್ ಅಲರ್ಟ್, ತಾ. ೧೬ರ ಬೆಳಿಗ್ಗೆ ೮.೩೦ರಿಂದ ತಾ. ೧೭ರ ಬೆಳಿಗ್ಗೆ ೮.೩೦ರವರೆಗೆ ರೆಡ್ ಅಲರ್ಟ್, ತಾ. ೧೭ರ ಬೆಳಿಗ್ಗೆಯಿಂದ ೧೮ರ ಬೆಳಿಗ್ಗೆವರೆಗೆ ಮತ್ತೆ ಆರೆಂಜ್ ಅಲರ್ಟ್ ಹಾಗೂ ತಾ. ೧೮ರ ಬೆಳಿಗ್ಗೆ ಯಿಂದ ತಾ. ೧೯ರ ಬೆಳಿಗ್ಗೆವರೆಗೆ ಎಲ್ಲೋ ಅಲರ್ಟ್ಗಳನ್ನು ಘೋಷಿಸಲಾಗಿದೆ.
ಪ್ರಸ್ತುತ ಪುನರ್ವಸು ಮಳೆ ನಕ್ಷತ್ರ ನಡೆಯುತ್ತಿದ್ದು ನಿನ್ನೆ ರಾತ್ರಿಯಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಎಡೆಬಿಡದೆ ಕಾಲ ಮಳೆ ಅಲರ್ಟ್ ಘೋಷಿಸಿ ದ್ದಾರೆ. ತಾ. ೧೫ ರಂದು (ಇಂದು) ಬೆಳಿಗ್ಗೆ ೮.೩೦ರಿಂದ ತಾ. ೧೬ರ ಬೆಳಿಗ್ಗೆ ೮.೩೦ರವರೆಗೆ ಆರೆಂಜ್ ಅಲರ್ಟ್, ತಾ. ೧೬ರ ಬೆಳಿಗ್ಗೆ ೮.೩೦ರಿಂದ ತಾ. ೧೭ರ ಬೆಳಿಗ್ಗೆ ೮.೩೦ರವರೆಗೆ ರೆಡ್ ಅಲರ್ಟ್, ತಾ. ೧೭ರ ಬೆಳಿಗ್ಗೆಯಿಂದ ೧೮ರ ಬೆಳಿಗ್ಗೆವರೆಗೆ ಮತ್ತೆ ಆರೆಂಜ್ ಅಲರ್ಟ್ ಹಾಗೂ ತಾ. ೧೮ರ ಬೆಳಿಗ್ಗೆ ಯಿಂದ ತಾ. ೧೯ರ ಬೆಳಿಗ್ಗೆವರೆಗೆ ಎಲ್ಲೋ ಅಲರ್ಟ್ಗಳನ್ನು ಘೋಷಿಸಲಾಗಿದೆ.
ಪ್ರಸ್ತುತ ಪುನರ್ವಸು ಮಳೆ ನಕ್ಷತ್ರ ನಡೆಯುತ್ತಿದ್ದು ನಿನ್ನೆ ರಾತ್ರಿಯಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಎಡೆಬಿಡದೆ ವೀರಾಜಪೇಟೆಯಲ್ಲಿ ೧.೮೧ ಹಾಗೂ ಸೋಮವಾರಪೇಟೆಯಲ್ಲಿ ೧.೯೮ ಇಂಚಿನಷ್ಟು ಸರಾಸರಿ ಮಳೆಯಾಗಿದೆ.
ಶಾಂತಳ್ಳಿ-ಭಾಗಮAಡಲ ಅಧಿಕ
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಭಾಗ ಮಂಡಲ, ಮಡಿಕೇರಿ ಹೋಬಳಿ ಯಲ್ಲಿ ಹೆಚ್ಚಿನ ಮಳೆಯಾಗಿದೆ. ಶಾಂತಳ್ಳಿಗೆ ೪.೬೨, ಭಾಗಮಂಡಲ ೪.೧೩, ಮಡಿಕೇರಿಯಲ್ಲಿ ೩.೩೪ ಇಂಚಿನಷ್ಟು ಮಳೆಯಾಗಿದೆ. ಉಳಿದಂತೆ ನಾಪೋಕ್ಲು ೩.೮೦, ಸಂಪಾಜೆ ೩.೦೪, ವೀರಾಜಪೇಟೆ ೨.೫೬, ಹುದಿಕೇರಿ ೨.೦೨, ಶ್ರೀಮಂಗಲ ೨.೭೪, ಪೊನ್ನಂಪೇಟೆ ೧.೬೦, ಅಮ್ಮತ್ತಿ ೧.೩೦, ಬಾಳೆಲೆ ೧.೧೪, ಸೋಮವಾರಪೇಟೆ ೧.೮೫, ಶನಿವಾರಸಂತೆ ೧, ಕೊಡ್ಲಿಪೇಟೆ ೧.೯೪, ಕುಶಾಲನಗರ ೦.೮೬ ಹಾಗೂ ಸುಂಟಿಕೊಪ್ಪ ಹೋಬಳಿಗೆ ೧.೬೮ ಇಂಚಿನಷ್ಟು ಮಳೆಯಾಗಿದೆ.
ಮಳೆ - ಗಾಳಿಯಿಂದ ಕೆಲವೆಡೆ ಹಾನಿ
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಯಿಂದ ಕೆಲವೆಡೆಗಳಲ್ಲಿ ಹಾನಿ ಸಂಭವಿಸಿ ರುವ ಕುರಿತು ವರದಿಯಾಗಿದೆ. ಕೂಡ್ಲೂರು ಗ್ರಾಮದ ನಿವಾಸಿ ಜಯಮ್ಮ ಅವರ ಮನೆಯ ಗೋಡೆ ಕುಸಿತವಾಗಿದ್ದು, ಶೇ. ೨೦ರಷ್ಟು ಹಾನಿಯಾಗಿರುವುದಾಗಿ ಪುಕಾರಾ ಗಿದೆ. ಇದಲ್ಲದೆ, ಶಾಂತಳ್ಳಿ ಹೋಬಳಿಯ ಹರಗ ಗ್ರಾಮದ ನಿವಾಸಿ ಬಿ.ಡಿ. ಗಿರೀಶ್ ಅವರ ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ. ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ನಿವಾಸಿ ಮೇದಪ್ಪ ಅವರ ಮನೆಯ ಮೇಲೂ ಮರಬಿದ್ದು ಹಾನಿಯಾಗಿ ರುವುದಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ.
ಮಡಿಕೇರಿ: ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳೂರು ರಸ್ತೆ ಬದಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ೬ ಮನೆಗಳಿಂದ ಜನರನ್ನು ಸ್ಥಳಾಂತರಗೊಳ್ಳುವAತೆ ಸೂಚನೆ ನೀಡಿದರು. ಪೊಲೀಸರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ನಾಪೋಕ್ಲು ವ್ಯಾಪ್ತಿಯಲ್ಲಿ ಹೆಚ್ಚಿದ ಆರ್ಭಟ
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ತಾ. ೧೩ರ ಸಂಜೆಯಿAದ ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗಿ ಕಂಡು ಬರುತ್ತಿದೆ.
ತಾ. ೧೪ರ ಬೆಳಿಗ್ಗೆಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಯ ಕಾರಣದಿಂದಾಗಿ ನದಿ, ಹೊಳೆ, ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಕಂಡು ಬರುತ್ತಿದೆ. ಎಲ್ಲಿಯೂ ಪ್ರವಾಹ ಭೀತಿ ಉಂಟಾದ ಬಗ್ಗೆ ತಿಳಿದು ಬಂದಿಲ್ಲ. ಅಲ್ಲಲ್ಲಿ ಮರದ ಸಣ್ಣ, ಪುಟ್ಟ ರೆಂಬೆ, ಕೊಂಬೆ ಮುರಿದು ಬಿದ್ದ ಬಗ್ಗೆ ವರದಿಯಾಗಿದೆ. ಆದರೆ, ಹೆಚ್ಚಿನ ಹಾನಿ ಸಂಭವಿಸಿಲ್ಲ. ಮಳೆಯೊಂದಿಗೆ ಗಾಳಿ ಇರುವ ಕಾರಣ ಕಾಫಿ ತೋಟಗಳಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಲು ಅಸಾಧ್ಯವಾಗಿದೆ.ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಭಾಗದಲ್ಲಿ ರಾತ್ರಿಯಿಂದಲೇ ಬಿಡುವು ಇಲ್ಲದಂತೆ ಸುರಿದ ಮಳೆಯಿಂದಾಗಿ ರೈತರು, ಕೃಷಿಕರು ತಮ್ಮ, ತಮ್ಮ ಭತ್ತದ ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮಳೆಯ ನಡುವೆ ಗಾಳಿ ಬೀಸುತ್ತಿದ್ದು, ನಗರ ಪ್ರದೇಶಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆರಂಭಿಸಿದೆ. ಕುಳಿರ್ ಗಾಳಿಯಿಂದಾಗಿ ವಿಪರೀತ ಚಳಿ ಕಾಣಿಸಿಕೊಂಡಿದೆ. ಗೋಣಿಕೊಪ್ಪ ವ್ಯಾಪ್ತಿಯ ಕೀರೆ ಹೊಳೆಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್ ಖರೀದಿಸಲು ನಗರಕ್ಕೆ ಗ್ರಾಮೀಣ ಪ್ರದೇಶಗಳ ಜನರು ಹೆಚ್ಚಾಗಿ ಆಗಮಿಸಿರುವುದು ಕಂಡು ಬಂದಿತು.ಕಡAಗ: ಅರಪಟ್ಟು, ಕಡಂಗ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ರಬಸವಾದ ಮಳೆ-ಗಾಳಿಯಿಂದ ಸಮೀಪದ ಎಡಪಾಲ ಸೇತುವೆಯ ನೀರಿನ ಮಟ್ಟ ಏರಿಕೆಯಾಗಿದೆ. ಮಳೆ-ಗಾಳಿ ಹೆಚ್ಚಾಗಿರುವುದರಿಂದ ಬಹುತೇಕ ತೋಟದ ಕಾರ್ಮಿಕರಿಗೆ ರಜೆ ನೀಡಲಾಗಿದೆ. ಅರಪಟ್ಟು ಗ್ರಾಮದ ಅಶ್ರಫ್ ಅವರ ಮನೆಯ ಹಿಂಬದಿ ಭೂ ಕುಸಿತ ಉಂಟಾಗಿದೆ. ಈ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕಗ್ಗತ್ತಲಿನಲ್ಲಿ ಗ್ರಾಮವು ಮುಳುಗಿದೆ.