ಶನಿವಾರಸಂತೆ, ಜು. ೧೩: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಹುಣಸೂರು ಕಾವೇರಿ ಸಂಭ್ರಮದ ೨೦೨೧ -೨೨ನೇ ಸಾಲಿಗೆ ಲಯನ್ ಜಿ. ನಾರಾಯಣಸ್ವಾಮಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಎಂ.ಆರ್. ನಿರಂಜನ್, ಖಜಾಂಚಿಯಾಗಿ ಬಿ.ಕೆ. ಚಿಣ್ಣಪ್ಪ ಅವರುಗಳು ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಎನ್.ಕೆ. ಅಪ್ಪಸ್ವಾಮಿ, ಜಿ.ಬಿ. ಪರಮೇಶ್ ಮತ್ತು ಕೆ.ಎನ್. ಕಾರ್ಯಪ್ಪ ಆಯ್ಕೆಯಾದರು. ಕ್ಲಬ್‌ನ ಆಡಳಿತಗಾರರಾಗಿ ಎನ್.ಬಿ. ನಾಗಪ್ಪ, ಲೀಡರ್‌ಶಿಪ್ ಚೇರ್ ಪರ್ಸನ್ ಆಗಿ ಬಿ.ಸಿ. ಧರ್ಮಪ್ಪ ಹಾಗೂ ಜಿ.ಎಲ್.ಟಿ, ಜಿ.ಎಂ.ಟಿ. ಜಿ.ಎಸ್.ಟಿ ಮತ್ತು ಎಲ್.ಸಿ.ಎಸ್. ಸಂಯೋಜಕರಾಗಿ ಸಿ.ಪಿ. ಹರೀಶ್, ಎಂ.ಆರ್. ಮಲ್ಲೇಶ್, ಜಿ.ಪಿ. ಪುಟ್ಟಪ್ಪ, ಟಿ.ಆರ್. ಕೇಶವಮೂರ್ತಿ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಎಂ.ಎನ್. ಶಂಕರ್ ಆಯ್ಕೆಯಾದರು. ನಿರ್ದೇಶಕರುಗಳಾಗಿ ಎಸ್.ಎಸ್. ಚಂದ್ರಶೆಖರ್, ಎಸ್.ಜಿ. ನರೇಶಚಂದ್ರ, ಟಿ.ಎಸ್. ಪುಟ್ಟರಾಜ್, ಕೆ.ಎಂ. ಜಗನ್‌ಪಾಲ್ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ನೂತನ ಸದಸ್ಯರುಗಳಾಗಿ ಶ್ರೀನಿವಾಸ್, ಎಸ್.ಜೆ. ಅಶೋಕ್ ಮತ್ತು ಹರೀಶ್ ಅವರುಗಳು ಪ್ರಮಾಣ ವಾಚನ ಸ್ವೀಕರಿಸುವ ಮೂಲಕ ಅಧಿಕೃತ ಸದಸ್ಯರುಗಳಾಗಿ ಸೇರ್ಪಡೆಗೊಂಡರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರಿನ ಪಿಡಿಜಿ ಡಿಸ್ಟಿಕ್ ೩೧೭ ಎ ಯಾ ಕೆ. ದೇವೇಗೌಡ, ಪಿ.ಎಂ.ಜೆ.ಎಫ್ ಇವರು ಪ್ರಮಾಣ ವಚನ ಬೋಧಿಸಿದರು.
ಪ್ರಾಂತೀಯ ಅಧ್ಯಕ್ಷ ಎನ್. ಜಯಪ್ರಕಾಶ್, ಎಂ. ಸುಬ್ರಮಣ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.