ಪೊನ್ನಂಪೇಟೆ, ಜು. ೧೩: ಪೊನ್ನಂಪೇಟೆ ಸಮೀಪದ ಕಿರುಗೂರು ಹಾಗೂ ಮತ್ತೂರು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿಗಟ್ಟಿದ್ದರು. ಆದರೆ ಮತ್ತೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು, ಕಿರುಗೂರು ಗ್ರಾಮದ ಪಿ.ಎಸ್. ಸುರೇಶ್ ಎಂಬವರ ಗದ್ದೆಗೆ ದಾಳಿ ಇಟ್ಟಿರುವ ಪೊನ್ನಂಪೇಟೆ, ಜು. ೧೩: ಪೊನ್ನಂಪೇಟೆ ಸಮೀಪದ ಕಿರುಗೂರು ಹಾಗೂ ಮತ್ತೂರು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿಗಟ್ಟಿದ್ದರು. ಆದರೆ ಮತ್ತೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು, ಕಿರುಗೂರು ಗ್ರಾಮದ ಪಿ.ಎಸ್. ಸುರೇಶ್ ಎಂಬವರ ಗದ್ದೆಗೆ ದಾಳಿ ಇಟ್ಟಿರುವ ಆನೆಗಳು ಸುಮಾರು ೨೫ಕ್ಕಿಂತಲೂ ಹೆಚ್ಚು ಕಾಫಿ ಗಿಡಗಳನ್ನು ತುಳಿದು ನೆಲಕ್ಕುರುಳಿಸಿವೆ.
ಪದೇ ಪದೇ ಈ ವ್ಯಾಪ್ತಿಯಲ್ಲಿ ಕಾಫಿ ತೋಟ ಹಾಗೂ ಗದ್ದೆಗಳಿಗೆ ದಾಳಿ ಇಡುವ ಕಾಡಾನೆಗಳಿಂದಾಗಿ ರೈತರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಕೂಡಲೇ ನಾಡಿಗೆ ಬಂದಿರುವ ಕಾಡಾನೆ ಹಿಂಡನ್ನು ಕಾಡಿಗಟ್ಟಬೇಕು ಹಾಗೂ ಆನೆ ದಾಳಿಯಿಂದ ಹಾನಿಗೊಳಗಾಗಿರುವ ತೋಟ ಹಾಗೂ ಗದ್ದೆಯ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಕಿರಗೂರು ಗ್ರಾ.ಪಂ. ಸದಸ್ಯ ಕಾಕೇರ ರವಿ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
-ಚನ್ನನಾಯಕ