ಮಡಿಕೇರಿ, ಜು. ೧೩: ಗುಜರಿ ಸಾಮಗ್ರಿ ಹೆಕ್ಕುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ನಗರದ ಸಂತೋಷ್ (೪೫) ಎಂಬಾತ ಕಾಲೇಜು ರಸ್ತೆಯಲ್ಲಿ ಗುಜರಿ ಹೆಕ್ಕಿಕೊಂಡು ಚರಂಡಿಯೊಳಗೆ ನುಸುಳಿದ್ದಾನೆ. ಬಳಿಕ ಹೊರಬರಲಾಗದೆ ಪರದಾಟ ನಡೆಸಿದ ಹಿನ್ನೆಲೆ ಸ್ಥಳೀಯರು ಗಮನಿಸಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚರಂಡಿಯೊಳಗೆ ಸಿಲುಕಿಕೊಂಡಿದ್ದ ಸಂತೋಷ್‌ನನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.