ಮಡಿಕೇರಿ ಜು. ೧೨: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ. ೫ ಕ್ಕಿಂತ ಕಡಿಮೆಯಾದ ಹಿನ್ನೆಲೆ ತಾ. ೭ ರಂದು ರಾಜ್ಯ ಸರಕಾರ ಕೊಡಗು ಜಿಲ್ಲೆಯನ್ನು ಇತರ ಜಿಲ್ಲೆಗಳಂತೆಯೇ ಅನೇಕ ನಿರ್ಬಂಧಗಳಿAದ ಮುಕ್ತಗೊಳಿಸಿತು. ಅದರಲ್ಲಿ ಪ್ರವಾಸೋದ್ಯಮವೂ ಸೇರಿದೆ. ಆದರೂ ಜಿಲ್ಲೆಯ ಮಟ್ಟಿಗೆ ಜಿಲ್ಲಾಧಿಕಾರಿಯವರ ಆದೇಶ ಬರಲಿ ಎಂದು ಕಾಯುತ್ತಿದ್ದ ಉದ್ಯಮಿಗಳು ಹಾಗೂ ಜನತೆ ಮರು ದಿನ ಎಂದಿನAತೆ ನಿರ್ಬಂಧವನ್ನು ಪಾಲಿಸಿದರು. ತಾ. ೮ ರಂದು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಯವರು ಸರಕಾರಿ ಆದೇಶಕ್ಕೆ ಪೂರಕವಾಗಿ ನಿರ್ಬಂಧ ಸಡಿಲಿಕೆ ಪ್ರಕಟಿಸಿದರು. ಅದರ ಮರು ದಿನವಷ್ಟೇ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದುಕೊಂಡವು. ಇದೀಗ ಪ್ರವಾಸೋದ್ಯಮದ ವಿಷಯದಲ್ಲಿಯೂ ಅದೇ ನಿಲುವು ಜಿಲ್ಲೆಯಲ್ಲಿ ಕಂಡುಬAದಿದೆ. ಜಿಲ್ಲಾಧಿಕಾರಿಯವರ ನಿರ್ಬಂಧ ಸಡಿಲಿಕೆ ಸಂದರ್ಭ ಪ್ರವಾಸೋದ್ಯಮಕ್ಕೆ ಯಾವದೇ ನಿರ್ಬಂಧವನ್ನು ಜಾರಿಗೊಳಿಸದಿದ್ದರೂ ಜಿಲ್ಲೆಯ ಅನೇಕ ಸಂಬAಧಿತ ಸರಕಾರೀ ಇಲಾಖೆಗಳು ಹಾಗೂ ಸ್ಥಳೀಯ ಆಡಳಿತಗಳು ಅನೇಕ ಪ್ರವಾಸೀ ತಾಣಗಳನ್ನು ತೆರೆÀದಿಲ್ಲ, ನಿರ್ಬಂಧ ಮುಂದುವರಿಸಿರುವುದು ಕಂಡುಬAದಿದೆ. ಕೆಲವು ಇಲಾಖೆಗಳು ಹಾಗೂ ಕೆಲವು ಸ್ಥಳೀಯ ಆಡಳಿತಗಳು ಜಿಲ್ಲಾಧಿಕಾರಿಯವರ ಲಿಖಿತ ಆದೇಶ ಬಂದರೆ ಮಾತ್ರ ಪ್ರÀವಾಸೀ ಕೇಂದ್ರಗಳನ್ನು ತೆರೆಯುವ ನಿರ್ಧಾರ ಕೈಗೊಂಡಿದ್ದರೆ, ಇನ್ನು ಕೆಲವೆಡೆ ರಾಜ್ಯಮಟ್ಟದ ನಿರ್ದೇಶನಕ್ಕೆ ಬದ್ಧವಾಗಿವೆ. ಇನ್ನು ಹಲವೆಡೆ ಈಗಷ್ಟೇ ನೇರವಾಗಿ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಅವರಿಂದ ನಿರ್ದೇಶÀನ ಪಡೆದ ಬಳಿಕ ತೆರೆದುಕೊಳ್ಳಲು ಮುಂದಾಗಿರುವದು “ಶಕ್ತಿ” ಯ ಗಮನಕ್ಕೆ ಬಂದಿದೆ.

ಈ ನಡುವೆ, ಜಿಲ್ಲೆಯಲ್ಲಿ ಮುಕ್ತತೆ ಘೋಷಣೆಯಾಗಿದ್ದರೂ ಪ್ರವಾಸಿಗರ ಆಗಮನದ ಸಂಖ್ಯೆ ತೀರಾ ವಿರಳವಾಗಿದೆ. ಕೊರೊನಾ ಸಾಂಕ್ರಾಮಿಕದ ಭಯವೂ ಕಾರಣವಿರಬಹುದು, ಇನ್ನೊಂದೆಡೆ ಕೊಡಗಿನ ಹವಾಮಾನವೂ, ಮಳೆ ಶೀತ ವಾತಾವರಣದ ಹಿನ್ನೆಲೆಯೂ ಇರಬಹುದು. ಪ್ರವಾಸಿಗರ ಆಗಮನದ ಸಂಖ್ಯೆಯೂ ವಿರಳವಾಗಿದ್ದು, ವಸತಿ ಗೃಹಗಳ ಮಾಲೀಕರ ಅನಿಸಿಕೆಯಂತೆ ಈಗಿನ ವಿದ್ಯಮಾನದ ಪ್ರಕಾರ ‘ ರೂಂ ಬುಕ್ಕಿಂಗ್” ಕೂಡ ಕಡಿಮೆಯಿದೆ. ಈಗಂತೂ ಬೆರಳೆಣಿಕೆಯ ಮಂದಿಯಿದ್ದಾರೆ. ಇನ್ನೊಂದೆಡೆÀ ಎಲ್ಲ ಅಂಗಡಿ ಮುಂಗಟ್ಟುಗಳೂ ಪ್ರತಿ ದಿನ ರಾತ್ರಿ ೯ ರವÀರೆಗೂ ತೆರೆಯಲ್ಪಡುತ್ತಿರುವದರಿಂದ ವಾಹನ ದಟ್ಟಣೆ, ಗ್ರಾಹಕರು ಒಂದೆಡೆ ಏಕಕಾಲದಲ್ಲಿ ಸೇರುವ ಒತ್ತಡ ಮಾಯವಾಗಿದ್ದು, ವ್ಯಾಪಾರ ವಹಿವಾಟು ಸುಲಲಿತವಾಗಿ ನಡೆಯುತ್ತಿರುವುದು ಗೋಚರವಾಗಿದೆ. ಆದರೆ, ಬಹುತೇಕ ಕೊಡಗಿನ ಜನತೆ, ಮಾಸ್ಕ್ ಹಾಕುವದನ್ನು ನಿರ್ಲಕ್ಷö್ಯ ಮಾಡದಿರುವುದು ಆಶಾದಾಯಕ ಬೆಳವಣಿಗೆ, ಬೆಳಿಗ್ಗೆ ವಾಕಿಂಗ್À ಸಂದರ್ಭವೂ ಮುಖದ ಮೇಲೆ ಮಾಸ್ಕ್ ಧಾರಣೆ ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ.

ಪ್ರವಾಸಿ ತಾಣಗಳು

ಮುಖ್ಯವಾಗಿ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣಗಳಾದ ಕುಶಾಲನಗರ ಸನಿಹದ ಕಾವೇರಿ ನಿಸರ್ಗಧಾಮ ಇನ್ನೂ ತಾ. ೧೫ ರವರೆಗೂ ಮುಚ್ಚಲ್ಪಡಲಿದೆ. ಅಲ್ಲದೆ, ದುಬಾರೆ ಆನೆ ಶಿಬಿರವೂ ಅದುವರೆಗೆ ತೆರೆಯಲ್ಪಡುವುದಿಲ್ಲ. ಈ ಕುರಿತಾಗಿ ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಅವರಿಂದ ದೊರೆತ ಮಾಹಿತಿ ಹೀಗಿದೆ:” ದುಬಾರೆಯಲ್ಲಿ ಆನೆಗಳ ಸಂಖ್ಯೆ ಅಧಿಕವಿದೆ. ಈಗಿನ ಸಂದರ್ಭ ತಕ್ಷಣದಿಂದ ಪ್ರವಾಸಿಗರಿಗೆ ಮುಕ್ತಗೊಳಿಸದಂತೆ, ಕೋವಿಡ್ ಹರಡುವಿಕೆಗೆ ಕಾರಣವಾಗದಂತೆ ರಾಜ್ಯದ ಅರಣ್ಯ ಅದಿಕಾರಿಗಳು ನಿರ್ಲಕ್ಷö್ಯ ಮಾಡದಿರುವುದು ಆಶಾದಾಯಕ ಬೆಳವಣಿಗೆ, ಬೆಳಿಗ್ಗೆ ವಾಕಿಂಗ್À ಸಂದರ್ಭವೂ ಮುಖದ ಮೇಲೆ ಮಾಸ್ಕ್ ಧಾರಣೆ ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ.

ಪ್ರವಾಸಿ ತಾಣಗಳು

ಮುಖ್ಯವಾಗಿ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣಗಳಾದ ಕುಶಾಲನಗರ ಸನಿಹದ ಕಾವೇರಿ ನಿಸರ್ಗಧಾಮ ಇನ್ನೂ ತಾ. ೧೫ ರವರೆಗೂ ಮುಚ್ಚಲ್ಪಡಲಿದೆ. ಅಲ್ಲದೆ, ದುಬಾರೆ ಆನೆ ಶಿಬಿರವೂ ಅದುವರೆಗೆ ತೆರೆಯಲ್ಪಡುವುದಿಲ್ಲ. ಈ ಕುರಿತಾಗಿ ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಅವರಿಂದ ದೊರೆತ ಮಾಹಿತಿ ಹೀಗಿದೆ:” ದುಬಾರೆಯಲ್ಲಿ ಆನೆಗಳ ಸಂಖ್ಯೆ ಅಧಿಕವಿದೆ. ಈಗಿನ ಸಂದರ್ಭ ತಕ್ಷಣದಿಂದ ಪ್ರವಾಸಿಗರಿಗೆ ಮುಕ್ತಗೊಳಿಸದಂತೆ, ಕೋವಿಡ್ ಹರಡುವಿಕೆಗೆ ಕಾರಣವಾಗದಂತೆ ರಾಜ್ಯದ ಅರಣ್ಯ ಅದಿಕಾರಿಗಳು (ಮೊದಲ ಪುಟದಿಂದ) ಕಳೆದ ತಾ. ೮ ರಂದು ಜಿಲ್ಲಾಧಿಕಾರಿಯವರ ಆದೇಶದ ಬಳಿಕ ಪ್ರವಾಸೋದ್ಯಮ ಮುಕ್ತತೆ ಪಡೆದಿದ್ದರೂ ಮುಂಜಾಗ್ರತ ಕ್ರಮವಾಗಿ ಆ ದಿನದಿಂದ ಒಂದು ವಾರ ಕಾಲ ಯಥಾವತ್ತಾಗಿ ನಿರ್ಬಂಧ ಮುಂದುವರಿಯುತ್ತದೆ; ಬಳಿಕ ಈ ಒಂದು ವಾರ ಕಾಲ ಕೋವಿಡ್ ಪಾಸಿಟಿವಿಟಿ ದರ ಸರಾಸರಿ ಶೇ, ೫ ಕ್ಕಿಂತ ಕಡಿಮೆಯಿದ್ದರೆ ಮಾತ್ರ ಈ ಎರಡೂ ತಾಣಗಳಲ್ಲಿ ಜನತೆಗೆ ಪ್ರವೇಶಾವಕಾಶ ಕಲ್ಪಿಸಲು ರಾಜ್ಯದ ಅಧಿಕಾರಿಗಳು ನಿರ್ದೇಶಿಸಿರುವದಾಗಿ ಅವರು ಸ್ಪಷ್ಟಪಡಿಸಿದರು. ಈ ನಡುವೆ ದುಬಾರೆ ಮತ್ತು ನಿಸರ್ಗಧಾಮಗಳನ್ನು ಶುದ್ಧೀಕರಿಸುವ ಕಾರ್ಯವನ್ನು ನಡೆಸಲಾಗಿದೆ. ಅಲ್ಲದೆ, ದುಬಾರೆ ಮತ್ತು ನಿಸರ್ಗ ಧಾಮದ ಎಲ್ಲ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸಿದ್ದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿಯಿತ್ತರು.

ಶಾಂತಳ್ಳಿ ಬಳಿಯ ಮಲ್ಲಳ್ಳಿ ಜಲಪಾತ ದ್ವಾರವೂ ಕೂಡ ಬೀಗ ಮುದ್ರೆಗೊಂಡಿದೆ. ಅಲ್ಲಿನ ಪಂಚಾಯ್ತಿ ಪಿಡಿಒ ಪ್ರಕಾರ ಜಿಲ್ಲಾಧಿಕಾರಿಯವರಿಂದ ಲಿಖಿತ ಆದೇಶ ಬಂದರೆ ಮಾತ್ರ ತೆರೆÀಯುವದಾಗಿ ತಿಳಿಸಿದ್ದಾರೆ.

ಶ್ರೀಮಂಗಲ ಸನಿಹದ ಇರ್ಪು ಜಲಪಾತ ಹಾಗೂ ಮಡಿಕೇರಿ ಸನಿಹದ ಮಾಂದಲಪಟ್ಟಿ ತಾಣಗಳು ಜಿಲ್ಲಾ ಅರಣ್ಯ ವನ್ಯಜೀವಿ ವಿಭಾಗದ ಆಡಳಿತಕ್ಕೆ ಒಳಪಟ್ಟಿವೆ. ಇದುವರೆಗೂ ಜಿಲ್ಲಾಧಿಕಾರಿಯವರ ಆದೇಶಕ್ಕೆ ಕಾಯುತ್ತಿದ್ದುದಾಗಿ ತಿಳಿಸಿದ ಜಿಲ್ಲಾ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಅವರು ಸೋಮವಾರ ಡಿಸಿಯವರೊಂದಿಗೆ ಚರ್ಚಿಸಿ ಬಳಿಕ ಸಮ್ಮತಿ ಪಡೆದಿದ್ದಾರೆ. ಮಂಗಳವಾರದಿAದ ಈ ಎರಡೂ ತಾಣಗಳನ್ನು ಪ್ರವೇಶಕ್ಕೆ ತೆರೆಯಲಿರುವದಾಗಿ ತಿಳಿಸಿದ್ದಾರೆ. ಈ ನಡುವೆ ಅಬ್ಬಿ ಜಲಪಾತವೂ ಬಂದ್ ಆಗಿತ್ತು. ಅಲ್ಲಿನ ಪಂಚಾಯ್ತಿ ಪ್ರಮುಖರು ಸೋಮವಾರ ಪ್ರವಾಸೋದ್ಯಮ ಇಲಾಖೆಯಿಂದ ಪ್ರವೇಶಕ್ಕೆ ಆಸ್ಪದ ನೀಡಲು ಪತ್ರ ತಲುಪಿದ್ದುದಾಗಿ ತಿಳಿಸಿದ್ದು ಸೋಮವಾರ ಮಧ್ಯಾಹ್ನದ ಬಳಿಕ ಅಬ್ಬಿಫಾಲ್ಸ್ ಅನ್ನು ವೀಕ್ಷಣೆಗೆ ಅನುವು ಮಾಡಿಕೊಟ್ಟಿದ್ದಾರೆ.

ಮಡಿಕೇರಿಯ ರಾಜಾಸೀಟ್, ವ್ಯೂ ಪಾಯಿಂಟ್ ನೆಹರೂ ಮಂಟಪ ಹಾಗೂ ಗದ್ದಿಗೆ ಪ್ರದೇಶಗಳು ಮುಚ್ಚಲ್ಪಟ್ಟಿದ್ದವು. ಸೋಮವಾರ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಅವರು ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಇದೀಗ ಈ ತಾಣಗಳು ತೆರೆಯಲ್ಪಟ್ಟಿವೆ. ರಾಜಾಸೀಟು ಉದ್ಯಾನವನವನ್ನು ಕಳೆದೆÀರೆಡು ದಿನಗಳ ಕಾಲ ಶುಚೀಕರಿಸುವ ಕಾರ್ಯ ಕೈಗೊಂಡಿದ್ದುದಾಗಿಯೂ ಪ್ರಮೋದ್ ತಿಳಿಸಿದರು. ಆದರೆÀ, ನೂತನ ಕೂರ್ಗ್ ವಿಲೇಜ್‌ನಲ್ಲಿ ಇನ್ನೂ ಅಂಗಡಿ ಮಳಿಗೆಗಳನ್ನು ನಿರ್ವಹಿಸುವವರು ವ್ಯವಸ್ಥೆ ಮಾಡಿಕೊಳ್ಳಬೇಕಿದ್ದು ಬಹುತೇಕ ಮಳೆಗಾಲ ಕಳೆದ ಬಳಿಕ ಜನತೆಗೆ ಅಲ್ಲಿ ಪ್ರವೇಶ ಕಲ್ಪಿಸುವದಾಗಿ ಪ್ರಮೋದ್ ಮಾಹಿತಿಯಿತ್ತರು.

ಈ ಮಧ್ಯೆ ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಈಗಾಗಲೇ ತೆರೆಯಲ್ಪಟ್ಟಿರುವುದಾಗಿ ಕನ್ನಡ ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ “ಶಕ್ತಿ”ಗೆ ತಿಳಿಸಿದ್ದಾರೆ. ಆದರೆ, ಮಳೆ ಕಾರಣ ವೀಕ್ಷಣೆಗೆ ಬರುತ್ತಿರುವವರ ಸಂಖ್ಯೆ ತೀರ ಕಡಿಮೆಯಿದೆ ಎಂದಿದ್ದಾರೆ. ನಾಗರಹೊಳೆೆ ಸಫಾರಿ ಕಳೆದ ಮೂರು ದಿನಗಳಿಂದ ಪ್ರಾರಂಭಗೊAಡಿದೆ. ಆದರೆ, ಅಲ್ಲಿ ಅಧಿಕ ಮಳೆಯಿರುವದರಿಂದ ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಆಗಮಿಸುತ್ತಿದ್ದಾರೆ ಎಂದು ಅಲ್ಲಿನ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹಾರಂಗಿಯಲ್ಲಿ ಉದ್ಯಾನ ವೀಕ್ಷಣೆಗೆ ಸದ್ಯಕ್ಕೆ ಅವಕಾಶವಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಉದ್ಯಾನವನವನ್ನು ಶುಚೀಕರಣಗೊಳಿಸುವ ಕಾರ್ಯವನ್ನು ಭರದಿಂದ ನಡೆಸುತ್ತಿರುವುದಾಗಿ ಹಾರಂಗಿ ಜಲಾಶಯ ವಿಭಾಗದ ಸಹಾಯಕ ಇಂಜಿನಿಯರ್ ಸಿದ್ಧರಾಜ್ ಶೆಟ್ಟಿ “ಶಕ್ತಿ” ಗೆ ತಿಳಿಸಿದ್ದಾರೆ. ಇದೀಗ ಉತ್ತಮ ಮಳೆಯಿಂದಾಗಿ ನೀರಿನ ಒಳ ಹರಿಯುವಿಕೆ ಹೆÀಚ್ಚುತ್ತಿದ್ದು ಜಲಾಶಯದಲ್ಲಿ ೫ ಟಿಎಂಸಿ ನೀರು ಶೇಖರಣೆಗೊಂಡಿದೆ. ಮುಂದೆ ಪರಿಸ್ಥಿತಿಯನ್ನು ಅವಲೋಕಿಸಿ ಉದ್ಯಾನವನಕ್ಕೆ ಸಾರ್ವಜನಿಕ ಪ್ರವೇಶದ ಕುರಿತು ರಾಜ್ಯ ಮಟ್ಟದ ಹಿರಿಯ ನೀರಾವರಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.