ಚೆಯ್ಯಂಡಾಣಿ, ಜು. ೧೩: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ ಹಾಗೂ ಸಸಿಗಳನ್ನು ನೆಟ್ಟು ಪರಿಸರ ಪೋಷಿಸುವ ಕಾರ್ಯಕ್ರಮವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಎಡಪಾಲದ ಎಸ್.ಕೆ.ಎಸ್.ಎಸ್.ಎಫ್. ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಈ ಸಂದರ್ಭ ಘಟಕದ ಪ್ರಧಾನ ಕಾರ್ಯದರ್ಶಿ ಹನೀಫ್ ಫೈಝಿ, ಉಪಾಧ್ಯಕ್ಷ ಹಾರಿಸ್ ಬಾಖವಿ, ವಿಖಾಯ ಕಾರ್ಯದರ್ಶಿ ಹನೀಫ್ ಎರಟೆಂಡ, ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಂ.ಎA. ಅಬ್ದುಲ್ಲ, ಉಪಾಧ್ಯಕ್ಷ ಬಷೀರ್ ಹಾಗೂ ವಿಖಾಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಅಶ್ರಫ್, ಚೆಯ್ಯಂಡಾಣೆ