ವೀರಾಜಪೇಟೆ, ಜು. ೧೩: ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳು, ಇಲ್ಲವೇ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳ ಜೀವನವೇ ಬಲುಕಷ್ಟ. ವೀರಾಜಪೇಟೆ ಕೆದಮುಳ್ಳೂರಿನ ಕಥರೀನ ಚಿತ್ತಧೀನಿ ನಿರ್ಗತಿಕರ ಮಕ್ಕಳ ಕುಠೀರವೂ ಸದ್ದಿಲ್ಲದೇ ೮೦ರ ದಶಕದಿಂದ ಈ ಕುಗ್ರ‍್ರಾಮದಲ್ಲಿ ಕೊಡಗಿನ ಅನಾಥ ಹೆಣ್ಣು ಮಕ್ಕಳನ್ನು ಪೋಷಣೆ ಮಾಡುತ್ತಾ, ಅವರಿಗೆ ಉಚಿತ ಶಿಕ್ಷಣ ನೀಡುತ್ತಾ, ಜೀವನಕ್ಕೆ ಅವಶ್ಯಕವಾದ ಕೌಶಲ್ಯಗಳನ್ನು ಕಲಿಸುತ್ತಾ ಬಂದಿದೆ.

೧೯೮೦ರ ಮೇ ೧೩ ರಂದು ಆರಂಭವಾದ ಈ ಹೆಣ್ಣು ಮಕ್ಕಳ ಆಸರೆ ಗೃಹಕ್ಕೆ ಮೈಸೂರಿನ ಅರ್ಸುಲೈನ್ ಸಿಸ್ಟರ್ ಆಫ್ ಸೋಮಸ್ಕ ಎನ್ನುವ ಎನ್.ಜಿ.ಓ. ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿರುವ ಅನಾಥ ಹೆಣ್ಣು ಮಕ್ಕಳನ್ನು ಇಲ್ಲಿಗೆ ಸೇರಿಸಿದರೆ ಅವರಿಗೆ ಇದೇ ಕೆದಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಶಿಕ್ಷಣ, ಊಟ, ವಸತಿ ನೀಡಿ ಓದಿಸಲಾಗುತ್ತದೆ. ಆರನೇ ತರಗತಿಯ ಬಳಿಕ ಅವರನ್ನು ಮೈಸೂರಿನ ಇವರದ್ದೇ ಸಂಸ್ಥೆಗೆ ಕಳುಹಿಸಿಕೊಟ್ಟು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಬಳಿಕ ಅವರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಡುವಲ್ಲಿಯೂ ಈ ಆಸರೆ ಮಂದಿರ ನೆರವು ನೀಡುತ್ತಿದೆ.

ಎಂಬತ್ತರ ದಶಕದಿಂದ ಹತ್ತಿರತ್ತಿರ ಐದು ನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಈ ಆಸರೆ ಮಂದಿರದಿAದ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಮಕ್ಕಳ ಕುಠೀರ ಅಕ್ಷರಶಃ ತೊಂದರೆಯಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣವಿಷ್ಟೆ. ಕೊರೊನಾ ಬಂದ ಬಳಿಕ ಶಾಲೆಗಳು ಮುಚ್ಚಿದವು. ಮಕ್ಕಳ ದಾಖಲಾತಿಯೂ ಕಡಿಮೆ ಆಗಿವೆ.

ಅಲ್ಲದೆ ಆಗ ಶಾಲೆಗೆ ಬಿಸಿಯೂಟ ಸಿಗುತ್ತಿತ್ತು. ಈಗ ಅದೂ ನಿಂತು ಹೋಗಿದೆ. ಬಿಸಿಯೂಟದ ಬದಲಿಗೆ ಮಕ್ಕಳಿಗೆ ರೇಶನ್ ಕೊಟ್ಟರೂ ಅದು ಕೂಡಾ ಸಾಲುತ್ತಿಲ್ಲ. ಆದ್ದರಿಂದ ಹದಿನಾರು ಹೆಣ್ಣು ಮಕ್ಕಳ ಪೋಷಣೆ ಮಾಡುತ್ತಿರುವ ಆಸರೆ ಗೃಹಕ್ಕೆ ಈಗ ಅವರಿಗೆ ಶಿಕ್ಷಣದ ಸೌಲಭ್ಯ, ಊಟೋಪಚಾರ ಸರಿಯಾಗಿ ಆಸರೆ ಮಂದಿರ ನೆರವು ನೀಡುತ್ತಿದೆ.

ಎಂಬತ್ತರ ದಶಕದಿಂದ ಹತ್ತಿರತ್ತಿರ ಐದು ನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಈ ಆಸರೆ ಮಂದಿರದಿAದ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಮಕ್ಕಳ ಕುಠೀರ ಅಕ್ಷರಶಃ ತೊಂದರೆಯಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣವಿಷ್ಟೆ. ಕೊರೊನಾ ಬಂದ ಬಳಿಕ ಶಾಲೆಗಳು ಮುಚ್ಚಿದವು. ಮಕ್ಕಳ ದಾಖಲಾತಿಯೂ ಕಡಿಮೆ ಆಗಿವೆ.

ಅಲ್ಲದೆ ಆಗ ಶಾಲೆಗೆ ಬಿಸಿಯೂಟ ಸಿಗುತ್ತಿತ್ತು. ಈಗ ಅದೂ ನಿಂತು ಹೋಗಿದೆ. ಬಿಸಿಯೂಟದ ಬದಲಿಗೆ ಮಕ್ಕಳಿಗೆ ರೇಶನ್ ಕೊಟ್ಟರೂ ಅದು ಕೂಡಾ ಸಾಲುತ್ತಿಲ್ಲ. ಆದ್ದರಿಂದ ಹದಿನಾರು ಹೆಣ್ಣು ಮಕ್ಕಳ ಪೋಷಣೆ ಮಾಡುತ್ತಿರುವ ಆಸರೆ ಗೃಹಕ್ಕೆ ಈಗ ಅವರಿಗೆ ಶಿಕ್ಷಣದ ಸೌಲಭ್ಯ, ಊಟೋಪಚಾರ ಸರಿಯಾಗಿ ಬೆಳೆಯಬಹುದು ಎನ್ನುವುದು ಈ ಸಂಸ್ಥೆಯ ಮುಖ್ಯಸ್ಥರ ಅಭಿಮತ.

ಒಂದೇ ಕೊಠಡಿಯಲ್ಲಿ ಮಕ್ಕಳ ಮಲಗುವಿಕೆ, ಸೀಮಿತ ಸೌಲಭ್ಯಗಳ ಜೊತೆಗೆ ಅತ್ಯಂತ ಕಷ್ಟದಲ್ಲಿರುವ ಈ ಆಸರೆ ಗೃಹಕ್ಕೆ ಅಗತ್ಯವಾಗಿ ದಾನಿಗಳ ನೆರವು ತುರ್ತಾಗಿ ಬೇಕಾಗಿದೆ.

ಆ ಮಕ್ಕಳು ನಮ್ಮ ನಿಮ್ಮಂತೆ ಸುಂದರ ಭವಿಷ್ಯ ಕಟ್ಟಿಕೊಳ್ಳಲು ದಾನಿಗಳು ಮನಸು ಮಾಡಿದ್ದಲ್ಲಿ ಸಂಸ್ಥೆಯ ಮುಖ್ಯಸ್ಥರ ಈ ಕೆಳ ಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕ ಮಾಡಿ ಸಹಾಯ ಮಾಡ ಬಹುದು. ಸಿಸ್ಟರ್ ಅಂತೋಣಿ ಮೇರಿ-೮೧೦೫೯೬೮೮೪೭, ೭೮೯೯೯೭೨೪೮೮.

- ಉಷಾ ಪ್ರೀತಮ್