ಮಡಿಕೇರಿ, ಜು. ೧೩: ಇಸ್ಲಾಮಿಕ್ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಚನೆಗೊಂಡು ಕಾರ್ಯಾಚರಿಸುತ್ತಾ ಬರುತ್ತಿರುವ ಕೊಡಗು ದಫ್ ಸಮಿತಿ ವಾಟ್ಸಾಪ್ ಗ್ರೂಪ್‌ನ ಹೊಸ ಲಾಂಛನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಿತಿ ಅಧ್ಯಕ್ಷ ಆಲಿರ ರಷೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ‘ಶಕ್ತಿ’ಯ ಉಪಸಂಪಾದಕ ಎಂ.ಇ. ಮಹಮದ್ ಉದ್ಘಾಟಿಸಿದರು. ದಫ್ ಸಮಿತಿ ಗೌರವ ಅಧ್ಯಕ್ಷ ಎನ್.ಸಿ.ಟಿ. ಸಂಸ್ಥೆಯ ಮಾಲೀಕ ಅಕ್ಕಳತಂಡ ಮೊÊದು ಅವರು ಲಾಂಛನ ಅನಾವರಣಗೊಳಿಸಿದರು. ಕಾಟರಕೊಲ್ಲಿ ಮಸೀದಿಯ ಧರ್ಮಗುರು ನವಾಝ್ ಮದನಿ ಮುಖ್ಯ ಭಾಷಣ ಮಾಡಿದರು.

ಹೆಚ್.ಎಂ. ಅಬೂಬಕರ್, ಅಝೀಝ್ ಚೆರಿಯಾನ್, ಆಲೀರ ಮೂಸ, ಚಿಟ್ಟಡೆ ಝಬೈರ್ ಮುಸ್ಲಿಯಾರ್, ಸಂಸ್ಥೆಯ ಉಪಾಧ್ಯಕ್ಷ ಝಬೈರ್ ಫೈಝಿ ಕಡಂಗ, ಅಬ್ಬಾಸ್ ಝೈನಿ ದೇವಣಗೇರಿ, ಅಶ್ರಫ್ ಎಮ್ಮೆಮಾಡು, ಅಶ್ರಫ್ ಕುಂಜಿಲ ಉಪಸ್ಥಿತರಿದ್ದರು. ಗುಂಡಿಗೆರೆ ಅಲಿ ಮುಸ್ಲಿಯಾರ್ ಪ್ರಾರ್ಥನಾ ಕಾರ್ಯ ನೆರವೇರಿಸಿದರು. ಸಹಕಾರ್ಯದರ್ಶಿ ತೌಸೀಫ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಫೀಕ್ ಸ್ವಾಗತಿಸಿದರು. ಸದಸ್ಯ ಬಶೀರ್ ವಂದಿಸಿದರು.