ವೀರಾಜಪೇಟೆ, ಜು. ೧೨: ಇತ್ತಿಚೆಗಷ್ಟೇ ಕೊಡಗು ಲಾಕ್‌ಡೌನ್‌ನಿಂದ ವಿನಾಯಿತಿ ಪಡೆದು ಅನ್‌ಲಾಕ್‌ನತ್ತ ಮುಖಮಾಡಿದೆ. ಜಿಲ್ಲೆಯಲ್ಲಿ ಒಂದು ಹಂತಕ್ಕೆ ವ್ಯಾಪಾರ-ವಹಿವಾಟು ತೆರೆದುಕೊಂಡಿದೆ. ಪ್ರವಾಸಿಗರು ನಿಧಾನಕ್ಕೆ ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ.
ಆದರೆ ಇದೇ ಸಮಯಲ್ಲಿ ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಮೂರನೇ ಅಲೆ ಕಾಲಿಟ್ಟಿರುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಸೋಮವಾರದಂದು ಕೇರಳ ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳು ಹದಿನಾಲ್ಕು ಸಾವಿರ. ಕೇರಳ ಮತ್ತು ವೀರಾಜಪೇಟೆಯ ಸಂಪರ್ಕ ನೆರೆಮನೆ ಸಂಬAಧವಿದ್ದAತೆ. ಕೊಡಗಿನ ಗಡಿಭಾಗವಾದ್ದರಿಂದ ಇಲ್ಲಿನವರ ಸಂಬAಧಿಗಳು ಕೇರಳದಲ್ಲಿದ್ದಾರೆ, ಅಲ್ಲಿನವರ ಸಂಬAಧಿಗಳು ಇಲ್ಲಿದ್ದಾರೆ. ಅಲ್ಲದೇ ಹಬ್ಬ, ಹರಿದಿನ, ಮದುವೆ, ಹೆಣ್ಣು ನೋಡುವುದು, ಬಟ್ಟೆ ಕೊಳ್ಳುವುದು, ಆಸ್ಪತ್ರೆ ಎಲ್ಲದ್ದಕ್ಕೂ ಇಲ್ಲಿನವರು ಕೇರಳವನ್ನು ಅವಲಂಬಿತವಾಗಿದ್ದಾರೆ. ಹಾಗಾಗಿ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಪೊಲೀಸ್‌ರಿಗೆ ಇತ್ತ ಬೇಡ ಅನ್ನಲಾಗುವುದಿಲ್ಲ, ಅತ್ತ ಹೋಗಿ ಎನ್ನಲಾಗುವುದಿಲ್ಲ ಅಂಥ ಧರ್ಮ ಸಂಕಷ್ಟದ ಸ್ಥಿತಿಯಲ್ಲಿಯೇ ಕಾರ್ಯನಿರ್ವಹಣೆ ಮಾಡಬೇಕು.
ಚೆಕ್‌ಪೋಸ್ಟ್ನಲ್ಲಿ ಹೊರರಾಜ್ಯದವರ ತಪಾಸಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬದು ಹಲವರ ಅಸಮಾಧಾನ. ಮಾಕುಟ್ಟ ಚೆಕ್ ಪೋಸ್ಟ್ನಲ್ಲಿ ಸಾವಿರಾರು ವಾಹನ ತಪಾಸಣೆಗೆ ಇಬ್ಬರು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದರೆ, ತಿತಿಮತಿ ಚೆಕ್ ಪೋಸ್ಟ್ನಲ್ಲಿ ಐವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇಷ್ಟೇ ಸಿಬ್ಬಂದಿ ಅಷ್ಟೊಂದು ವಾಹನಗಳನ್ನು ತಪಾಸಣೆ ಮಾಡುವುದಾದರೂ ಹೇಗೆ?
ಹೀಗಾದರೆ ಕೇರಳದಿಂದ ರಾಜ್ಯಕ್ಕೆ ಬರುವ ವಾಹನಗಳ ತಪಾಸಣೆ ಆಗದೇ ಹೋದಲ್ಲಿ ಅವರು ವೀರಾಜಪೇಟೆ, ಗೋಣಿಕೊಪ್ಪ, ದಕ್ಷಿಣ ಕೊಡಗಿನ ನೆಂಟರ ಮನೆಗೆ ಬರುತ್ತಾರೆ, ಪ್ರವಾಸಿ ತಾಣಕ್ಕೆ ಹೋಗುತ್ತಾರೆ. ಕೇರಳದಲ್ಲಿ ಹದಿನಾಲ್ಕು ಸಾವಿರ ಪಾಸಿಟಿವ್ ಪ್ರಕರಣಗಳು ಇದ್ದಾಗಲೂ ನಾವು ಜಾಗರೂಕತೆ ವಹಿಸದಿದ್ದರೆ, ಮುಂದಾಗುವ ಅನಾಹುತಕ್ಕೆ ಹೊಣೆ ಯಾರು?
ಕರ್ನಾಟಕದ ವಿವಿಧ ಭಾಗಗಳಿಂದ ಕೇರಳಕ್ಕೆ ಹೋಗುವ ವಾಹನಗಳನ್ನು ನಮ್ಮ ಆನೆಚೌಕೂರು ಚೆಕ್‌ಪೋಸ್ಟ್ನಲ್ಲಿ ಅದೆಷ್ಟು ಚೆನ್ನಾಗಿ ತಪಾಸಣೆ ಮಾಡಿ ನಮ್ಮ ಜಿಲ್ಲೆಯೊಳಗೆ ಸಂಚರಿಸಲು ಬಿಡುತ್ತಿದ್ದಾರೆ ಎಂದರೆ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ವಕೀಲ ಧ್ರುವ ಕುಮಾರ್ ಹಾಗೂ ಸ್ನೇಹಿತರು ಆನೆಚೌಕೂರು ಚೆಕ್‌ಪೋಸ್ಟ್ನಲ್ಲಿ ಹಣ ಪಡೆದು ಪೊಲೀಸರು ಕೇರಳದ ವಾಹನಗಳನ್ನು ಬಿಡುವ ಮೂರರಿಂದ ನಾಲ್ಕು ವೀಡಿಯೋ ಮಾಡಿದ್ದಾರೆ. ಆ ವೀಡಿಯೋದಲ್ಲಿ ಹೇಗೆ ಅವರು ಪ್ರತಿ ಚೆಕ್ ಪೋಸ್ಟ್ನಲ್ಲಿ ಎಷ್ಟೆಷ್ಟು ಹಣ ಕೊಟ್ಟು ಮುಂದೆ ಸಾಗುತ್ತಾರೆ ಎನ್ನುವ ಮಾಹಿತಿ ನೀಡಿದ್ದಾರೆ, ಅಲ್ಲದೆ ಅಂದು ಆನೆಚೌಕೂರು ಗೇಟ್‌ನಲ್ಲಿ ತಲಾ ಮೂನ್ನೂರು ರೂಪಾಯಿ, ಹುಲ್ಲಿನ ಲಾರಿಯವನಿಗೆ ಇಪ್ಪತ್ತು ರೂಪಾಯಿ ಪಡೆದು ಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ರೀತಿಯಾದರೆ, ನೆರೆಯ ಕೇರಳ ರಾಜ್ಯದಲ್ಲಿರುವ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಕೊಡಗಿಗೆ ತಟ್ಟದು ಎನ್ನುವಂತಿಲ್ಲ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು, ಸರ್ಕಾರದ ನಿಯಮಪಾಲನೆ ಮಾಡುತ್ತಿದ್ದಾರೆ, ಆದರೆ ಸರ್ಕಾರದ ಇಲಾಖೆಗಳು ಮಾತ್ರ ಈ ರೀತಿ ಹೋದ ಪುಟ್ಟ ಬಂದ ಪುಟ್ಟ ಎಂಬAತೆ ಕರ್ತವ್ಯ ನಿರ್ವಹಣೆ ಮಾಡಿದರೆ ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿ. - ಉಷಾ ಪ್ರೀತಂ