ಗೋಣಿಕೊಪ್ಪ ವರದಿ, ಜು. ೧೨: ಕೊರೊನಾ ಕಾಲದಲ್ಲಿ ಉತ್ತಮ ಸೇವೆ ನೀಡಿರುವುದನ್ನು ಪರಿಗಣಿಸಿ ಗೋಣಿಕೊಪ್ಪ ರೋಟರಿ ಕ್ಲಬ್ಗೆ ೨೦೨೦-೨೧ ಸಾಲಿನ ೨ ಪ್ರಶಸ್ತಿಗಳು ಲಭಿಸಿವೆ. ರೋಟರಿ ಜಿಲ್ಲೆ ೩೧೮೧ ಕ್ಕೆ ಅನ್ವಯವಾಗುವಂತೆ ‘ದ ಗೋಲ್ಡ್ ಕ್ಲಬ್’ ಮತ್ತು ‘ದ ಡಿಜಿಟಲ್ ರೋಟರಿ’ ಪ್ರಶಸ್ತಿಯನ್ನು ಶನಿವಾರ ನಡೆದ ಪ್ರಶಂಸಾ ಆನ್ಲೈನ್ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷö್ಮಣ್, ಕಾರ್ಯದರ್ಶಿ ಕೆ.ಸಿ. ಮುತ್ತಪ್ಪ ಹಾಗೂ ಆಡಳಿತ ಮಂಡಳಿ ಅವಧಿಯ ಸೇವೆಗೆ ಪ್ರಶಸ್ತಿ ನೀಡಲಾಗಿದೆ.