ನಾಪೆೆÇÃಕ್ಲು, ಜು. ೧೨ : ನಾಪೆÉÇÃಕ್ಲುವಿನಿಂದ ಮಡಿಕೇರಿ ನಡುವಿನ ರಸ್ತೆಯ ಮೂರ್ನಾಡು ಜಂಕ್ಷನ್ನಿAದ ಕೊಟ್ಟಮುಡಿಗಾಗಿ ಬೆಟ್ಟಗೇರಿಗೆ, ಮಡಿಕೇರಿಗೆ ಹೋಗುವ ರಸ್ತೆಯು ಮುಳ್ಳು ಕಾಡುಗಳಿಂದ ಆವೃತ್ತವಾಗಿ ರಸ್ತೆಗೆ ಬಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಕೊಟ್ಟಮುಡಿ ಸೇತುವೆ ಬಳಿಯಲ್ಲಿಯು ಕಾಡುಗಳು ರಸ್ತೆಗೆ ಬಂದಿದ್ದು ಅಪಾಯದಲ್ಲಿ ಸಂಚಾರಿಸಬೇಕಿದೆ ಎಂದು ನಾಪೆÉÇÃಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರೆಯಡ ಅಶೋಕ ದೂರಿದ್ದಾರೆ.
ರಸ್ತೆಯ ಎರಡು ಬದಿಯಲ್ಲಿ ಮುಳ್ಳುಗಳು, ಕಾಡುಗಳು ರಸ್ತೆಯನ್ನು ಆವರಿಸಿದ್ದು ವಾಹನಗಳು ಅಪಾಯದಿಂದ ಸಂಚರಿಸಬೇಕಾಗಿದೆ. ಇದರಿಂದ ರಸ್ತೆಯಲ್ಲಿ ಮುಂದೆ ಬರುವ ವಾಹನಗಳು ಕಾಣದೇ ಕಷ್ಟವಾಗಿದೆ. ಲೋಕೋಪಯೋಗಿ ಇಲಾಖೆಯವರು ಕೂಡಲೇ ಈ ರಸ್ತೆಯಲ್ಲಿನ ಎರಡು ಬದಿಯ ಕಾಡನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.