ಕೂಡಿಗೆ, ಜು. ೧೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪದ ಹಾರಂಗಿ ನದಿಗೆ ಸಾರ್ವಜನಿಕರು ಇಳಿಯಲು ಅನುಕೂಲವಾಗುವಂತೆ ಸೂಪಾನ ಕಟ್ಟೆಯನ್ನು ನಿರ್ಮಿಸಲಾಗಿದೆ ಆದರೆ ಹೋಗುವ ದಾರಿಯಲ್ಲಿ ಗಿಡ ಗಂಟೆಗಳು ಬೆಳೆದ ಕಾಡು ಮಾಯಾವಾಗಿದೆ ಸಂಬAಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೂಡಿಗೆ ಸರ್ಕಲ್ ಸಮೀಪದ ಹಾರಂಗಿಯ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಪಕ್ಕದಲ್ಲಿ ಮೆಟ್ಟಲುಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಎರಡೂ ಕಡೆಗಳಲ್ಲಿ ದುರಸ್ತಿ ಮಾಡಿ ಸಾರ್ವಜನಿಕರು ನದಿಗೆ ಸ್ನಾನಗೆ ತೆರಳುವ ಮತ್ತು ಮಹಿಳೆಯರು ಬಟ್ಟೆಗಳನ್ನು ತೊಳೆಯುವ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಗ್ರಾಮಸ್ಥರಾದ ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್, ಪ್ರಮುಖರಾದ ಕೃಷ್ಣ, ರಾಜ, ಮಂಜುನಾಥ, ಸುಂದರ್ ಒತ್ತಾಯ ಮಾಡಿದ್ದಾರೆ.