ಸ್ವಾತ್ ಇದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು ೧೦೦ ಕಿ.ಮೀ. ದೂರದಲ್ಲಿರುವ ಒಂದು ಸುಂದರ ಕಣಿವೆ. ಈ ಸ್ವಾತ್ ಕಣಿವೆ ಪ್ರದೇಶದಲ್ಲಿ ಒಂದು ದೊಡ್ಡ ಹಾಗೂ ಏಕೈಕ ನಗರ ಮಿಂಗೋರಾ ಹಿಂದು ಕುಶ್ಪರ್ವತ ಶ್ರೇಣಿಯ ಮಡಿಲಲ್ಲಿ ಮಲಗಿದ ಈ ಊರಿನಲ್ಲಿ ೧೯೯೭ ರ ಜುಲೈ ೧೨ ರಂದು ಯೂಸಫೈಝಿ ದಂಪತಿಗಳ ಹಿರಿಯ ಮಗಳಾಗಿ ಮಲಾಲಾ ಜನಿಸಿದಳು. ಮಲಾಲಾ ಎಂಬ ಶಬ್ಬದ ಅರ್ಥ ದುಃಖಕ್ಕೊಳಗಾದವಳು ಎಂದು. ಮಾಲಾಲಾರವರು ಜಗತ್ತಿನ ಅತ್ಯಂತ ಧೈರ್ಯಶಾಲಿ ಬಾಲಕಿ, ಜಾಗತಿಕ ನಾಯಕಿ, ಅವರ ಹೋರಟ ಎಲ್ಲರಿಗೂ ಮಾದರಿ.

ಮಲಾಲಾ ಯೂಸಫೈಝಿ ಬದುಕೆ ಒಂದು ಅಚ್ಚರಿಯ ಸಾಹಸಮಯ ಕತೆ. ಮತಾಂದ ಮೂಲಭೂತವಾದಿ ತಾಲಿಬಾನ್ ದುಷ್ಕರ್ಮಿಗಳ ಬಂದೂಕಿನ ಸಪ್ಪಳಗಳ ನಡುವೆಯೇ ತನ್ನ ಬದುಕನ್ನು ರೂಪಿಸಿಕೊಂಡ ದಿಟ್ಟ ಬಾಲೆ ಮಲಾಲಾ. ನೋಬೆಲ್ ಶಾಂತಿ ಪ್ರಶಸ್ತಿ ಪಡೆಯುವುದಕ್ಕಿಂತ ಎರಡೇ ವರುಷ ಮೊದಲು ೨೦೧೨ ರ ಅಕ್ಟೋಬರ್ ೯ ರಂದು ಶಾಲಾ ಬಸ್‌ನಲ್ಲಿ ಮನೆಗೆ ಹೊರಟಿದ್ದ ಮಲಾಲಾ ಮೇಲೆ ತಾಲಿಬಾನ್ ಉಗ್ರರಿಬ್ಬರು ಗುಂಡು ಹಾರಿಸಿದ್ದರು. ದೇಹದ ಎರಡು ಕಡೆ ಗುಂಡು ತಗುಲಿ ಪ್ರಜ್ಞಾಹೀನಳಾದ ಮಲಾಲಾ ತಕ್ಷಣದ ಚಿಕಿತ್ಸೆಯಿಂದ ಬದುಕಿ ಉಳಿದಳು. ಅವಳ ಮೇಲಿನ ಈ ದಾಳಿಗೆ ಕಾರಣ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದನ್ನು ವಿರೋಧಿಸುವ ತಾಲಿಬಾನ್ ಉಗ್ರರು. ಮಲಾಲಾ ಹೋರಾಟವನ್ನು ಹತ್ತಿಕ್ಕಲು ಅವಳನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿದರು. ಆದರೆ ಅವರ ಆ ಪ್ರಯತ್ನ ವಿಫಲವಾಯಿತು. ಅಂದು ಆ ಉಗ್ರರ ಗುಂಡಿನಿAದ ಚೆಲ್ಲಿದ ರಕ್ತದಿಂದಲೇ ಮೇಲೆದ್ದು ಬಂದ ಮಲಾಲಾ ಹೋರಾಟ ಕೈಬಿಡುವಬದಲು ಮತ್ತಷ್ಟು ಛಲದಿಂದ ಹೋರಾಟ ಮುಂದುವರಿಸಿ ನೋಬೆಲ್ ಪ್ರಶಸ್ತಿ ಪಡೆದರು.

ಹದಿಹರೆಯದಲ್ಲೇ ವಿಶ್ವ ಪ್ರಖ್ಯಾತಿ ಪಡೆದ ಮಲಾಲಾ ಬದುಕು ಜಗತ್ತಿನ ಹೆಣ್ಣು ಮಕ್ಕಳಿಗೆ, ಶಿಕ್ಷಣ ಪ್ರೇಮಿಗಳಿಗೆ ಮಾದರಿ. ಹೆಣ್ಣಿನ ಸಾಹಸ, ಸ್ವಾಭಿಮಾನದ ಸಂಕೇತ. ಅತ್ಯಂತ ಹಿಂದುಳಿದ ಒಂದು ಕಣಿವೆ ಪ್ರದೇಶದಲ್ಲಿ ಜನಿಸಿ ಅನಕ್ಷರಸ್ಥ ತಾಯಿಯ ಕೈಯಲ್ಲಿ ಬೆಳೆದರೂ ತಾನು ಸ್ವತಃಅಕ್ಷರಸ್ಥಳಾಗಿದ್ದು ಸಾಲದೇ, ಈ ಜಗತ್ತಿನಲ್ಲಿ ಎಲ್ಲರೂ ತನ್ನಂತೆಯೇ ಶಾಲೆಗೆ ಹೋಗಬೇಕು, ಶಿಕ್ಷಣ ಪಡೆಯಬೇಕು ಎಂದು ಬಯಸುತ್ತ ತನ್ನ ಜೀವವನ್ನೇ ಅಪಾಯಕ್ಕೊಡ್ಡಿದ ಮಲಾಲಾ ಅನೇಕ ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ಪಡೆದರು. ೧೧೫ ವರ್ಷಗಳ ನೋಬೆಲ್ ಪ್ರಶಸ್ತಿಗಳ ಇತಿಹಾಸದಲ್ಲಿ ಅತಿ ಚಿಕ್ಕ ವಯಸ್ಸು ಅಂದರೆ ೧೭ ವರ್ಷ ವಯಸ್ಸಿನಲ್ಲಿ ನೋಬೆಲ್ ಪ್ರಶಸ್ತಿ ಪಡೆದ್ದಿದಾರೆ.

ಇಂದು ವಿಶ್ವದಾದ್ಯಂತ ಶಿಕ್ಷಣ ಪ್ರಿಯರು, ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಬಯಸುವವರು ಮಲಾಲಾಳ ಈ ಹೋರಾಟಕ್ಕೆ ಪ್ರತ್ಯಕ್ಷವಾಗಿಯು ಬೆಂಬಲಕ್ಕೆ ನಿಂತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸ್ವಾತಂತ್ರ‍್ಯದ ಸಂಕೇತವಾಗಿ ಮಲಾಲಾ ಎಲ್ಲರಿಗೂ ಮಾದರಿಯೆನಿಸಿದ್ದಾರೆ. ತನ್ನ ಬದುಕನ್ನೇ ಪೂರ್ತಿಯಾಗಿ ಅವಳು ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕ್ಕಾಗಿ ಅರ್ಪಿಸಿಕೊಂಡಿದ್ದಾರೆ. ಅವರ ಗುರಿ ನೋಬೆಲ್ ಪ್ರಶಸ್ತಿ ಪಡೆಯುವುದಾಗಿರಲಿಲ್ಲ ಬದಲಾಗಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವುದು. ಪ್ರತಿ ಮಗುವಿಗೂ ಶಿಕ್ಷಣ ದೊರಕಿಸುವುದಾಗಿತ್ತು. ಮಲಾಲಾ ಈ ಸಾಧನೆಗೆ ಸಂಯುಕ್ತ ರಾಷ್ಟç ಸಂಘ ಮಲಾಲಾ ಜನಿಸಿದ ಜುಲೈ ೧೨ನೇ ದಿನಾಂಕವನ್ನು“ಮಲಾಲಾ ಡೇ” ಎಂದು ಘೋಷಿಸಿದೆ.

- ಡಾ. ಪಿ. ದೀಪು, ಪ್ರಾಂಶುಪಾಲರು, ವಿದ್ಯಾವರ್ದಕ ಕಾನೂನು ಕಾಲೇಜು, ಮೈಸೂರು.