ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ
ಬೆಂಗಳೂರು, ಜು. ೧೧: ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು ಗೆಹ್ಲೋಟ್ ರಾಜ್ಯದ ೧೯ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ತಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್. ಅಶೋಕ, ಸಂಸದೆ ಸುಮಲತಾ ಅಂಬರೀಶ್ ಇನ್ನೂ ಹಲವಾರು ಮಂದಿ ಭಾಗವಹಿಸಿದ್ದರು. ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾಗಿದ್ದ ಗೆಹ್ಲೋಟ್ ಈ ಹಿಂದೆ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಸಹ ಸೇವೆ ಸಲ್ಲಿಸಿದ್ದರು
ಐಎಸ್‌ಐ ಸಿದ್ಧಾಂತದ ಪ್ರಚಾರ:ಕಾಶ್ಮೀರದಲ್ಲಿ ಶೋಧ ಕಾರ್ಯ
ಕಾಶ್ಮೀರ, ಜು. ೧೧: ಕಾಶ್ಮೀರದಲ್ಲಿ ನಿಷೇಧಿತ ಐಎಸ್‌ಐ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರದ ಸಂಬAಧ ಎನ್‌ಐಎ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತು. ಶ್ರೀನಗರ, ಅನಂತ್‌ನಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆದಿದೆ. ಭಾರತದಲ್ಲಿ ಪ್ರಭಾವಶಾಲಿ ಯುವಕರನ್ನು ಐಎಸ್‌ಐ ಉಗ್ರ ಸಂಘಟನೆಗೆ ಸೇರಿಸಿಕೊಂಡು ತೀವ್ರಗಾಮಿಗಳನ್ನಾಗಿಸುವುದಕ್ಕಾಗಿ ಸಂಚು ರೂಪಿಸಿ ಇಸೀಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರವನ್ನು ಮಾಡುತ್ತಿದ್ದರ ಬಗ್ಗೆ ಜೂ. ೨೯ ರಂದು ಪ್ರಕರಣವೊಂದು ದಾಖಲಾಗಿತ್ತು. ಭಾರತದಲ್ಲಿ ಜಿಹಾದ್‌ಗೆ ಕರೆ ನೀಡುವುದು ಈ ಪ್ರಚಾರದ ಪ್ರಮುಖ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಭಾರತದಲ್ಲಿ ಯುವಕರನ್ನು ತನ್ನತ್ತ ಸೆಳೆಯುವುದಕ್ಕಾಗಿ ತಿರುಚಿದ ಅಂಶಗಳು, ಕಪೋಲಕಲ್ಪಿತ ಅನ್ಯಾಯಗಳು ಹಾಗೂ ಇನ್ನಿತರ ಭಾರತ ವಿರೋಧಿ ಅಂಶಗಳಿAದ ಕೂಡಿದ ನಿರೂಪಣೆಯೊಂದಿಗೆ ಆನ್‌ಲೈನ್ ಪ್ರಚಾರ ನಿಯತಕಾಲಿಕೆ ವಾಯ್ಸ್ ಆಫ್ ಹಿಂದ್(ವಿಒಹೆಚ್)ನ್ನು ಮಾಸಿಕವಾಗಿ ಪ್ರಕಟಿಸಲಾಗುತ್ತಿತ್ತು ಈ ಮೂಲಕ ಭಾರತದಲ್ಲಿನ ಯುವಕರಿಗೆ ಪರಕೀಯತೆಯ ಭಾವನೆ ಹಾಗೂ ಕೋಮುದ್ವೇಷವನ್ನು ಹರಡಲು ಯತ್ನಿಸಲಾಗುತ್ತಿತ್ತು ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.
ಪುದುಚೇರಿಯಲ್ಲಿ ಆರಂಭಗೊಳ್ಳಲಾಗಿದೆ ಶಾಲೆ-ಕಾಲೇಜು
ಪುದುಚೇರಿ, ಜು. ೧೧: ಕೋವಿಡ್-೧೯ ಸಾಂಕ್ರಾಮಿಕದಿAದ ಪುದುಚೇರಿಯಲ್ಲಿ ಹಲವು ತಿಂಗಳಿAದ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ತಾ. ೧೬ ರಂದು ಪುನರಾರಂಭವಾಗಲಿವೆ. ತಾ. ೧೬ ರಂದು ಕಾಲೇಜುಗಳು ಪುನರಾರಂಭಗೊಳ್ಳಲಿವೆ. ಶಾಲೆಗಳು ಭಾಗಶಃ ಪುನಃ ತೆರೆಯಲ್ಪಡುತ್ತವೆ ಮತ್ತು ಒಂಬತ್ತರಿAದ ೧೨ನೇ ತರಗತಿಗಳಿಗೆ ಮಾತ್ರ ತರಗತಿಗಳು ಆ ದಿನ ಪುನರಾರಂಭಗೊಳ್ಳುತ್ತವೆ ಎಂದು ಮುಖ್ಯಮಂತ್ರಿ ಎನ್. ರಂಗಸ್ವಾಮಿ ಹೇಳಿದರು. ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಐದು ಮಂತ್ರಿ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಪಟ್ಟಿಯನ್ನು ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳುಸಾಯಿ ಸುಂದರರಾಜನ್ ಅವರಿಗೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈಗ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಕೊರೊನಾಕ್ಕೆ ಬಲಿ
ನವದೆಹಲಿ, ಜು. ೧೧: ನಾಗರಿಕ ವಿಮಾನಯಾನ ಸಚಿವಾಲಯದ ಇಬ್ಬರು ಸಲಹೆಗಾರರು ಹಾಗೂ ವಾಯುಯಾನ ನಿಯಂತ್ರಕ ಡಿಜಿಸಿಎಯ ಇಬ್ಬರು ಅಧಿಕಾರಿಗಳು ಮಹಾಮಾರಿ ಕೊರೊನಾ ಸೋಂಕಿನಿAದ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಸದ್ಯ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಲಹೆಗಾರರು ೨೦೨೦ರ ಕೋವಿಡ್-೧೯ ಮೊದಲನೇ ಅಲೆಯ ಸಂದರ್ಭದಲ್ಲಿ ಸಾವಿಗೀಡಾಗಿದ್ದರು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ)ನ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಬ್ಬರು ೨೦೨೧ರ ಕೋವಿಡ್-೧೯ ಎರಡನೇ ಅಲೆಯ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೊನಾ ವೈರಸ್ ಸೋಂಕಿನ ೨ನೇ ಅಲೆಯು ಭಾರತಕ್ಕೆ ತೀವ್ರ ಹಾನಿಯನ್ನುಂಟುಮಾಡಿದೆ. ಈ ವರ್ಷದ ಜನವರಿ ಮತ್ತು ಮೇ ತಿಂಗಳಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಒಟ್ಟು ೪೪ ಉದ್ಯೋಗಿಗಳು ಕೋವಿಡ್ ಸೋಂಕಿತರಾಗಿದ್ದರು.
ಶAಕಿತ ಉಗ್ರರ ಬಂಧನ
ಲಖನೌ, ಜು. ೧೧: ಉತ್ತರ ಪ್ರದೇಶ ರಾಜಧಾನಿ ಲಖನೌನ ಕಾಕೊರಿ ಪ್ರದೇಶದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಭಯೋತ್ಪಾದಕ ನಿಗ್ರಹ ಪೊಲೀಸರು ಭಾನುವಾರ ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಅಪರಾಧ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಭಯೋತ್ಪಾದಕ ನಿಗ್ರಹ ಪೊಲೀಸರು ಶಂಕಿತ ಉಗ್ರರಿಂದ ಮಾಹಿತಿ ಪಡೆದಿದ್ದಾರೆ. ಬಂಧಿತ ವ್ಯಕ್ತಿಗಳು ಗಡಿಯುದ್ದಕ್ಕೂ ಜನರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ಹೇಳಿವೆ. ಕಾಕೋರಿಯ ಫರೀದಿಪುರದಲ್ಲಿ ಇಬ್ಬರು ಶಂಕಿತರಿರುವ ಮಾಹಿತಿಯ ಮೇರೆಗೆ ಎಟಿಎಸ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಎಟಿಎಸ್ ಕಮಾಂಡೋಗಳು ಮತ್ತು ಬಾಂಬ್ ನಿಷ್ಕಿçÃಯ ದಳ ಅಲ್ಲಿವೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಉಗ್ರರ ಚಲನವಲನಗಳ ಬಗ್ಗೆ ಎಟಿಎಸ್‌ಗೆ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಕುಡಿಯಲು ಹಣ ನೀಡದ ಪತ್ನಿ-ಮೂಗು ಕಚ್ಚಿದ ಪತಿ
ಧಾರವಾಡ, ಜು. ೧೧: ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಜಗಳವಾಡಿ ಪತ್ನಿಯ ಮೂಗನ್ನು ಕಚ್ಚಿ ಗಾಯಗೊಳಿಸಿದ ಪತಿ ಪರಾರಿಯಾಗಿರುವ ಘಟನೆ ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಉಮೇಶ್ ಎಂಬಾತ ಪತ್ನಿ ಗೀತಾಳ ಮೂಗು ಕಚ್ಚಿ ಗಾಯಗೊಳಿಸಿದ್ದಲ್ಲದೆ ಪತ್ನಿಯ ಮೇಲೆ ಹಲ್ಲೆ ನಡೆಸುವುದನ್ನು ತಡೆಯಲು ಬಂದ ಅತ್ತೆಯ ಕತ್ತು ಹಿಸುಕಿ ಅವಳ ಮೇಲೆ ಸಹ ಹಲ್ಲೆ ಮಾಡಿದ್ದಾನೆ. ಗಾರೆ ಕೆಲಸ ಮಾಡುವ ಉಮೇಶ್ ಕಳೆದ ಐದು ವರ್ಷದ ಹಿಂದೆ ಪತ್ನಿಯನ್ನು ಬಿಟ್ಟು ಹೋದವನು ಐದು ತಿಂಗಳ ಹಿಂದೆ ವಾಪಾಸಾಗಿದ್ದ. ಆದರೆ ಹಾಗೆ ಹಿಂತಿರುಗಿದವ ಮದ್ಯ ಸೇವಿಸಲಿಕ್ಕಾಗಿ ಹಣ ನೀಡುವಂತೆ ಪ್ರತಿದಿನ ಗೀತಾಳ ಜತೆ ಜಗಳವಾಡುತ್ತಿದ್ದ. ಕಳೆದ ರಾತ್ರಿ ಸಹ ಇದೇ ವಿಷಯದಲ್ಲಿ ಜಗಳವಾದಾಗ ಉಮೇಶ್ ಆಕೆಯ ಮೂಗನ್ನು ಕಚ್ಚಿ ಕತ್ತರಿಸಿದ್ದಾನೆ.
ನಟ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ
ಮೈಸೂರು, ಜು. ೧೧: ತನ್ನ ಹೆಸರಿನಲ್ಲಿ ರೂ. ೨೫ ಕೋಟಿ ವಂಚನೆ ಯತ್ನ ಪ್ರಕರಣದ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಎಸಿಪಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್, ಈ ಪ್ರಕರಣದಲ್ಲಿ ಯಾರೆ ಆದರೂ ಅವರನ್ನು ನಾನು ಬಿಡಲ್ಲ, ರಕ್ಕೆ-ಪುಕ್ಕ ಅಲ್ಲ ತಲೆಯನ್ನೇ ತೆಗಿಯೋನು ನಾನು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡದ ದರ್ಶನ್, ಈ ಬಗ್ಗೆ ಮಾತನಾಡಲು ಸ್ವಲ್ಪ ಸಮಯ ಕೊಡಿ ಎಂದಿದ್ದಾರೆ. ನನಗೂ ಕೂಡ ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಪೊಲೀಸರ ಬಳಿ ಮಾತನಾಡಿದ್ದೇನೆ. ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಲು ಸ್ವಲ್ಪ ಸಮಯ ನೀಡಿ ಎಂದರು. ವಿಚಾರಣೆ ಬಳಿಕ ಸಂಪೂರ್ಣ ಮಾಹಿತಿ ನಾನೆ ನೀಡುತ್ತೇನೆ ಎಂದಿದ್ದಾರೆ. ಇನ್ನು ಇದೇ ಸಮಯದಲ್ಲಿ ವಂಚನೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಉಮಾಪತಿ, ಈ ಪ್ರಕರಣ ಸುಮಾರು ೨ ತಿಂಗಳಿAದ ನಡೆದಿದೆ. ಮಹಿಳೆ ಫೋನ್ ಮಾಡಿ ನೀವು ಮತ್ತು ದರ್ಶನ್ ಸರ್ ಲೋನ್ ತೆಗೆದುಕೊಳ್ಳುತ್ತಿದ್ದೀರಾ ಅಥವಾ ಶೂರಿಟಿ ಹಾಕಿದ್ದೀರಾ ಎಂದು ಕೇಳಿದರು. ಬಳಿಕ ವಿಚಾರಿಸಿದಾಗ ಯಾರು ಲೋನ್ ಪಡೆದಿಲ್ಲ ಎನ್ನುವುದು ಗೊತ್ತಾಯಿತು. ಎಲ್ಲರೂ ಮಾತನಾಡಿ ಬಳಿಕ ಜೂನ್ ೧೬ ರಂದು ಬೆಂಗಳೂರಿನ ಜಯ ನಗರದಲ್ಲಿ ದೂರು ನೀಡಿದೆವು ಎಂದಿದ್ದಾರೆ. ಬಳಿಕ ಮೈಸೂರಿನಲ್ಲಿ ದೂರು ದಾಖಲಿಸಿದೆವು. ಆ ಮಹಿಳೆಯ ಹಿಂದೆ ಯಾರು ಇದ್ದಾರೆ, ಇದರ ಉದ್ದೇಶ ಏನು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಬೆಂಗಳೂರು ಮತ್ತು ಮೈಸೂರು ಎರಡು ಕಡೆ ವಿಚಾರಣೆ ನಡೆಯುತ್ತಿದೆ ಎಂದು ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದರು.