ಕೂಡಿಗೆ, ಜು. ೧೧: ಕೂಡಿಗೆ ಸೈನಿಕ ಶಾಲೆಯಲ್ಲಿ ಸ್ಥಳೀಯ ಆಡಳಿತ ಮಂಡಳಿ ಸಭೆಯನ್ನು ಆಯೋಜಿಸ ಲಾಗಿತ್ತು.
ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಏರ್ ವೈಸ್ ಮಾರ್ಷಲ್ ಪಿ.ಜೆ. ವಾಲಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ. ಕಣ್ಣನ್, ಶಾಲೆಯ ತರಬೇತಿ ಹಾಗೂ ಆಡಳಿತವನ್ನು ಕುರಿತು ಮಾತನಾಡಿ, ಕಳೆದು ೯ ತಿಂಗಳಿನಲ್ಲಿ ಶಾಲೆಯು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವು ದರೊಂದಿಗೆ, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಇದೇ ಸಂದರ್ಭ ಕುವೆಂಪು ವಿವಿಧೋದ್ದೇಶ ಸಭಾಂಗಣ ಮತ್ತು ಶಾಲಾ ಮಾಹಿತಿಯ ವಿವರಣೆಗಳ ನ್ನೊಳಗೊಂಡ ಸಾರ್ವಜನಿಕ ಮಾಹಿತಿ ಪ್ರಸರಣ ಎಲ್‌ಇಡಿ ಡಿಜಿಟಲ್ ಬೋರ್ಡ್ ಉದ್ಘಾಟಿಸ ಲಾಯಿತು. ಪ್ರಸ್ತುತ ಎಲ್‌ಇಡಿ ಡಿಜಿಟಲ್ ಬೋರ್ಡ್ ಈ ಪ್ರದೇಶದಲ್ಲಿ ನೂತನ ಪ್ರಯೋಗ ವಾಗಿದ್ದು, ವಿನೂತನವಾಗಿದೆ.
ಸಭೆಗೂ ಮುನ್ನ ಮುಖ್ಯ ಅತಿಥಿಗಳು ಶಾಲಾ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಗೌರವ ಸಮರ್ಪಿಸಿದರು.
ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ಸಭೆಯಲ್ಲಿ ಶಾಲೆಯ ಮಾಜಿ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಜಿಲ್ಲಾಧಿಕಾರಿಗಳ ಪ್ರತಿನಿಧಿಗಳು, ಶಾಲಾ ಆಡಳಿತಾಧಿಕಾರಿ ಸ್ಕಾ÷್ವಡ್ರನ್ ಲೀಡರ್ ಆರ್‌ಕೆಡೇ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ವೈ. ಶ್ರೀಕಾಂತ್, ಮೈಸೂರು ವಿಶ್ವ ವಿದ್ಯಾನಿಲಯದ ಉಪ ಕುಲಸಚಿವರಾದ ಪ್ರೊ. ಶಿವಪ್ಪ, ಸಿಪಿಡಬ್ಲೂಆರ್‌ಯುಡಿ ಮೈಸೂರು ವಿಭಾಗದ ಕಾರ್ಯನಿರ್ವಹಣಾ ಅಭಿಯಂತರ ವಿಜಯಕುಮಾರ್ ಸ್ವರ್ಣಕಾರ್, ಶಿಕ್ಷಕ-ಪೋಷಕರ ಪ್ರತಿನಿಧಿಯಾದ ಪ್ರಕಾಶ್ ಕೃಷ್ಣಭಟ್ಟ ಜೋಷಿ ಹಾಜರಿದ್ದರು.