ವೀರಾಜಪೇಟೆ, ಜು. ೧೦: ಕೊರೊನಾ ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರವಾದ ವೀರಾಜಪೇಟೆಯಿಂದ ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಆಯ್ದ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಗೊAಡಿದೆ.
ವೀರಾಜಪೇಟೆಯಿAದ ಮೈಸೂರು ಬೆಂಗಳೂರು ಮಾರ್ಗದಲ್ಲಿ ಇಂದು ಬೆಳಿಗ್ಗೆಯಿಂದ ಸುಮಾರು ಎಂಟು ಬಸ್‌ಗಳು ಸಂಚರಿಸಿದ್ದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಇದರಿಂದ ಬಸ್‌ಗಳು ಖಾಲಿಯಾಗಿಯೇ ಸಂಚರಿಸು ವಂತಾಯಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಇದ್ದದ್ದು ಕಂಡು ಬಂತು. ಇದರಿಂದ ಬಸ್ ಸಂಚಾರ ಆರಂಭಗೊAಡಿದ್ದರೂ ಬಸ್ ನಿಲ್ದಾಣ ಮಾತ್ರ ಬಿಕೋ ಎನ್ನುತ್ತಿತ್ತು.
ಮೈಸೂರು ಬೆಂಗಳೂರು ಮಾತ್ರವಲ್ಲದೆ ಮಡಿಕೇರಿ, ಮಂಗಳೂರು, ಕುಶಾಲನಗರದ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ಆರಂಭಿಸಿದ್ದರೂ ಕೇವಲ ಬೆರಳೆಣಿಯಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಜೊತೆಗೆ ಹೊರಜಿಲ್ಲೆಗಳಿಂದ ಬಸ್‌ಗಳು ವೀರಾಜಪೇಟೆಯ ಸಂಚಾರ ಇಂದಿನಿAದ ಆರಂಭಿಸಿವೆ. ಆದರೆ ಕೇರಳ ಸೇರಿದಂತೆ ಇತರ ಅಂತರರಾಜ್ಯ ಬಸ್ ಸಂಚಾರದ ನಿಷೇಧ ಮುಂದುವರೆದಿದೆ ಎಂದು ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.