ಮಡಿಕೇರಿ, ಜು. ೧೦: ಅಪ್ಪಚ್ಚು ರಂಜನ್ ಅಭಿಮಾನಿ ಬಳಗದ ವತಿಯಿಂದ ಶಾಸಕ ಅಪ್ಪಚ್ಚು ರಂಜನ್ ಅವರ ಹುಟ್ಟುಹಬ್ಬವನ್ನು ನಗರದ ಬಾಲಕಿಯರ ಬಾಲಭವನದಲ್ಲಿ ಆಚರಿಸಲಾಯಿತು.

ಕೇಕ್ ಕತ್ತರಿಸಿ, ಸೇಬು ಹಣ್ಣಿನ ಹಾರ ಹಾಕಿ ಶಾಸಕರ ಹುಟ್ಟುಹಬ್ಬವನ್ನು ಬೆಂಬಲಿಗರು ಸಂಭ್ರಮಿಸಿದರು. ಇದೇ ಸಂದರ್ಭ ಮಕ್ಕಳಿಗೆ ಸಿಹಿ, ಪುಸ್ತಕ, ಲೇಖನಿಗಳನ್ನು ವಿತರಿಸಲಾಯಿತು.

ನಗರಸಭಾ ಆಯುಕ್ತ ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಕಾರ್ಯದರ್ಶಿ ಮುರುಗನ್, ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ರಮೇಶ್, ಪ್ರಮುಖ ವೇಣುಗೋಪಾಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.