ಕೂಡಿಗೆ, ಜು. ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕೆರೆಯ ಸಮೀಪದ ಪೈಸಾರಿ ಜಾಗದಲ್ಲಿ ವಾಸಿಸುತ್ತಿದ್ದ ನಾಗಮ್ಮ ರಾಜಣ್ಣ ಎಂಬವರ ಮನೆಯು ಭಾರೀ ಗಾಳಿ ಮಳೆಯಿಂದಾಗಿ ಕಳೆದ ತಿಂಗಳಲ್ಲಿ ನೆಲಸಮವಾಗಿತ್ತು. ಈ ಹಿನ್ನೆಲೆ ರೋಟರಿ ಕ್ಲಬ್ ವತಿಯಿಂದ ಮನೆ ನಿರ್ಮಿಸಲು ಕ್ಲಬ್‌ನ ಅಧ್ಯಕ್ಷ ರಂಗಸ್ವಾಮಿ ನವರು ಭೇಟಿ ನೀಡಿ ಜಾಗ ಪರಿಶೀಲನೆ ನಡೆಸಿದರು.
ಈ ಬಗ್ಗೆ ಜೂನ್ ೨೬ರಂದು ‘ಶಕ್ತಿ’ ವರದಿ ಮೂಲಕ ವಾಸ್ತವ ಚಿತ್ರಣದ ಕುರಿತು ಬೆಳಕು ಚೆಲ್ಲಿತ್ತು.
ಮನೆ ಕಳೆದುಕೊಂಡ ವ್ಯಕ್ತಿ ಮತ್ತು ಸ್ಥಳೀಯ ಗ್ರಾಮಸ್ಥರು ರೋಟರಿ ಕ್ಲಬ್‌ಗೆ ಮನವಿಯನ್ನು ಸಲ್ಲಿಸಿದರು. ಅದರನ್ವಯ ಕ್ಲಬ್‌ನ ಅಧ್ಯಕ್ಷ ರಂಗಸ್ವಾಮಿ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ಫಿಲೋಮಿನಾ ಜಾರ್ಜ್, ಚಂದ್ರು ಮೂಡ್ಲಿಗೌಡ, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ. ವರದ ಬಸವನತ್ತೂರು ಗ್ರಾಮ ಪಂಚಾಯತಿ ಬೂತ್ ಅಧ್ಯಕ್ಷ ಆರ್. ಕೃಷ್ಣ, ಸ್ಥಳೀಯರಾದ ತೇಚು, ಸೀಚಿತ್, ಪ್ರವೀಣ್, ಜಯಂತ್, ಮತ್ತಿತರರು ಭೇಟಿ ನೀಡಿದರು.