*ಗೋಣಿಕೊಪ್ಪ, ಜು. ೧೦: ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದವರಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.

ದೇವರಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ ಆವರಣದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ನೀಡಿದರು.

ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ದೇವರಪುರ ಗ್ರಾ.ಪಂ. ಅಧ್ಯಕ್ಷೆ ಪಿ.ಜಿ. ಶಾರದ, ಉಪಾಧ್ಯಕ್ಷ ಮನೆಯಪಂಡ ಮಹೇಶ್, ಸದಸ್ಯರುಗಳಾದ ಹೆಚ್.ಯು. ಮಣಿಕಂಠ, ಕಾಣತಂಡ ದಮಯಂತಿ, ಬಸವಂತ್‌ಕುಮಾರ್, ತಿತಿಮತಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಎನ್.ಎನ್. ಅನೂಪ್‌ಕುಮಾರ್, ಸೇವಾಭಾರತಿ ಕಾರ್ಯಕರ್ತ ಅಭಿ, ಪಿ.ಡಿ.ಓ. ಹೆಚ್.ಯು. ಚಂದ್ರ, ಸಿಬ್ಬಂದಿಗಳಾದ ಯು.ಬಿ. ಪುನಿತ್, ಆರ್. ಲಲಿತಾ, ಹೆಚ್.ಸಿ. ಮಂಜುಳ ಉಪಸ್ಥಿತರಿದ್ದರು.