ಮಡಿಕೇರಿ, ಜು. ೧೦ : ಕೊಡಗು ಜಿಲ್ಲೆಯಲ್ಲಿ ಸುಮಾರು ೭೨ ದಿನಗಳಿಂದ ನಿರ್ಬಂಧಿಸಲಾಗಿದ್ದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತಾ.೮ರ ರಾಜ್ಯ ಸರಕಾರದ ಆದೇಶ ಹಾಗೂ ತಾ.೯ರ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಯಾವುದೇ ನಿರ್ಬಂಧಗಳು ಇಲ್ಲದೇ ಇದ್ದರೂ ಸಂಬAಧಿಸಿದ ಇಲಾಖೆಗಳ ಲಿಖಿತ ಆದೇಶ ಬಾರದೇ ಇರುವ ಕಾರಣ ಅರಣ್ಯ ಇಲಾಖೆಗೆ ಒಳಪಡುವ ಪ್ರಸಿದ್ಧ ಪ್ರವಾಸಿ ತಾಣಗಳಾದ ಕುಶಾಲನಗರದಲ್ಲಿನ ದುಬಾರೆ, ನಿಸರ್ಗಧಾಮ ಹಾಗೂ ಮಡಿಕೇರಿ ಗ್ರಾಮಾಂತರ ಪ್ರದೇಶದ ಮಾಂದಲಪಟ್ಟಿ ಇನ್ನೂ ಕೂಡ ತೆರೆಯಲ್ಪಟ್ಟಿಲ್ಲ. ಇದರೊಂದಿಗೆ ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಕೆ.ನಿಡುಗಣೆ ಪಂಚಾಯಿತಿಗೆ ಒಳಪಡುವ ಅಬ್ಬಿ ಜಲಪಾತ ಪ್ರವೇಶ ದ್ವಾರ ಕೂಡ ಮುಚ್ಚಲ್ಪಟ್ಟಿದೆ. ಈ ಪ್ರವಾಸಿ ತಾಣಗಳನ್ನು ತೆರೆಯಲು ಅರಣ್ಯ ಇಲಾಖೆ, ಪಂಚಾಯಿತಿಗಳಿಗೆ ಲಿಖಿತ ಆದೇಶ ತಲುಪಿಲ್ಲ ಎಂದು ಅರಣ್ಯ ಇಲಾಖಾಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು ‘ಶಕ್ತಿ’ಗೆ ತಿಳಿಸಿದ್ದಾರೆ. ಅದಾಗ್ಯೂ ಅರಣ್ಯ ಇಲಾಖೆಗೆ ಒಳಪಟ್ಟ ಇರ್ಪು ಹಾಗೂ ತೋಟಗಾರಿಕೆ ಇಲಾಖೆಗೆ ಒಳಪಡುವ ಮಡಿಕೇರಿ ನಗರದ ರಾಜಾಸೀಟು ಉದ್ಯಾನವನ ಸ್ವಚ್ಛತೆ, ನಿರ್ವಹಣೆ ಕಾರ್ಯ ಸಂಬAಧ ತಾ.೧೦ ರಂದು
(ಮೊದಲ ಪುಟದಿಂದ) ತೆರೆದಿರಲಿಲ್ಲವಾದರೂ, ನಾಳೆ ಅಥವಾ ನಾಡಿದ್ದು ತೆರೆಯುವ ಸಾಧ್ಯತೆ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾಜಾಸೀಟು ಉದ್ಯಾನವನವನ್ನು ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಇಂದು ಕಂಡು ಬಂತು. ಉದ್ಯಾನವನದ ಹೊರಗೆ ಚುರುಮುರಿ, ಮಾವಿನಕಾಯಿ ಮಾರುವ ಗಾಡಿಗಳು ಪ್ರವಾಸಿಗರ ಆಗಮನಕ್ಕೆ ತಯಾರಾಗಿದ್ದು, ಇಂದು ವಿರಳ ಸಂಖ್ಯೆಯಲ್ಲಿ ಕೆಲವೇ ಪ್ರವಾಸಿಗರು ಆಗಮಿಸಿದ್ದರು.