ಸಿದ್ದಾಪುರ, ಜು. ೧೦: ಮೊಬಿಯಸ್ ಫೌಂಡೇಷನ್ ಸಂಸ್ಥೆಯ ವತಿಯಿಂದ ನೆಲ್ಲಿಹುದಿಕೇರಿ, ಮರಗೋಡು, ಅರೆಕಾಡು ವ್ಯಾಪ್ತಿಯ ಒಟ್ಟು ೬೦೦ಕ್ಕೂ ಅಧಿಕ ಕೊರೊನಾ ಪೀಡಿತ ಬಡಕುಟುಂಬಗಳಿಗೆ ಆಹಾರಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಕೊರೊನಾ ಲಾಕ್ಡೌನ್ ಸಂಧರ್ಭದಲ್ಲಿ ಕೊರೊನಾ ಪೀಡಿತರಾದ ಬಡ ಹಾಗೂ ಕೂಲಿ ಕಾರ್ಮಿಕರ ಸಂಕಷ್ಟಕ್ಕೆ ಮೊಬಿಯಸ್ ಫೌಂಡೇಷನ್ ನೆರವಾಗಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದÀರ್ಭದಲ್ಲಿ ಮೊಬಿಯಸ್ ಫೌಂಡೇಷನ್ ಸಂಸ್ಥೆಯ ಮಧು ಬೋಪಣ್ಣ, ಎಂ.ಡಿ. ಸಂತೋಷ್ ಕುಮಾರ್ ಹಾಗೂ ಪ್ರೊಜೆಕ್ಟ್ ಹೆಡ್ ಫೀಲ್ಡ್ ಆಫೀಸರ್ ಅನಿಲ್ ಹಾಜರಿದ್ದರು.