ಕಣಿವೆ, ಜು. ೧೦: ಕುಶಾಲನಗರದ ಗುಂಡೂರಾವ್ ಬಡಾವಣೆಯ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ಪಟ್ಟಣದ ಮುಖ್ಯ ರಸ್ತೆಯಿಂದ ಬಡಾವಣೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಉದ್ದಕ್ಕೂ ಭಯಾನಕವಾದ ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಕೂಡ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಈ ರಸ್ತೆ ಕಾಣದಾಗಿದೆ. ಗ್ರಾಮವೊಂದಕ್ಕೆ ಆಧುನಿಕ ಸೌಲಭ್ಯಗಳ ಸ್ಪರ್ಶಕೊಟ್ಟು ಸುಂದರ ನಗರವಾಗಿಸಿ ಮರೆಯಾದ ಮಹಾನುಭಾವ ದಿ. ಆರ್. ಗುಂಡೂರಾವ್ ಅವರ ಸ್ಮರಣೆಯಲ್ಲಿರುವ ಈ ರಸ್ತೆಗೆ ಡಾಂಬರು ಅಥವಾ ಕಾಂಕ್ರಿಟ್ ರಸ್ತೆಯಾಗಿಸಲು ದಶಕಗಳಿಂದಲೂ ಆಡಳಿತಾರೂಢರಿಗೆ ಅಥವಾ ಶಾಸಕರಿಗೆ ಏಕೆ ಸಾಧ್ಯವಾಗಿಲ್ಲ ಎಂದು ಈ ಬಡಾವಣೆಯ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.
ಮಳೆ ಬಂದಾಗAತೂ ಈ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಕೆಸರು ನೀರು ತುಂಬಿದ ಗುಂಡಿಗಳ ಒಳಗೆ ರಸ್ತೆಯನ್ನು ಹುಡುಕಿ ತೆರಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಜೊತೆಗೆ ರಸ್ತೆಯ ಪಕ್ಕದಲ್ಲಿನ ಅಂದ ಚೆಂದದ ಮನೆಗಳ ಗೋಡೆಗಳಿಗೆ ಈ ರಸ್ತೆಯಲ್ಲಿನ ಕೆಸರು ಹಾರಿ ಗೋಡೆಗಳು ಮಲಿನವಾಗುತ್ತಿವೆ. ಅಷ್ಟೇ ಅಲ್ಲ ಈ ರಸ್ತೆಯಂಚಿನಲ್ಲಿ ಪಿ.ಯು. ಕಾಲೇಜುಗಳು ಇರುವುದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರು ಈ ಕೆಸರುಮಯ ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳೊಂದಿಗೆ ಅವರು ಧರಿಸುವ ಬಟ್ಟೆಗಳು ಕೆಸರುಮಯವಾಗುತ್ತಿವೆ. ಹದಗೆಟ್ಟ ರಸ್ತೆ ಈ ಬಡಾವಣೆಯ ಸೊಗಸಿಗೆ ಮಾರಕವಾಗಿರುವುದರಿಂದ ಕೂಡಲೇ ಈ ರಸ್ತೆಯನ್ನು ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳಾದ ಜಿ.ಎಲ್. ನಾಗರಾಜು, ಮಂಜುನಾಥ ಗುಂಡೂರಾವ್, ಶಂಭುಲಿAಗಪ್ಪ, ಕಣಿವೆ ನಾಗೇಂದ್ರ, ಮೊದಲಾದವರು ಆಗ್ರಹಿಸಿದ್ದಾರೆ.