*ಸಿದ್ದಾಪುರ, ಜು. ೧೦: ಅಭ್ಯತ್‌ಮಂಗಲ ಮತ್ತು ಅರೆಕಾಡು ಗ್ರಾಮದ ಗಡಿಯಲ್ಲಿರುವ ಸುಮಾರು ೧೧.೨೮ ಏಕರೆ ಪೈಸಾರಿ ಜಾಗವನ್ನು ಸ್ಥಳೀಯ ನಿವೇಶನ ರಹಿತರಿಗೆ ಮೀಸಲಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿಗಳ ಆಶಯದಂತೆ ನಿವೇಶನ ಮತ್ತು ವಸತಿ ರಹಿತ ಗ್ರಾಮೀಣರಿಗೆ ಈ ಸೌಲಭ್ಯ ನೀಡಲೆಂದು ಸರ್ವೆ ಸಂಖ್ಯೆ ೮೭/೨ ರಲ್ಲಿರುವ ಪೈಸಾರಿ ಜಾಗದ ಸರ್ವೆ ಕಾರ್ಯ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಮಾಜಿ ಸದಸ್ಯ ಅಂಚೆಮನೆ ಸುಧಿಕುಮಾರ್ ಅವರ ಕಾಳಜಿಯಿಂದ ನಡೆದಿತ್ತು. ಅಲ್ಲದೆ ಗ್ರಾಮದಲ್ಲಿರುವ ನಿವೇಶನ ರಹಿತ ೨೯೬ ಕುಟುಂಬಗಳನ್ನು ಜಿಪಿಎಸ್ ಸರ್ವೆ ಮೂಲಕ ಪತ್ತೆ ಮಾಡಲಾಗಿತ್ತು. ಇವರುಗಳಿಗೆ ಪೈಸಾರಿ ಜಾಗವನ್ನು ಹಂಚಿಕೆ ಮಾಡಬೇಕೆನ್ನುವ ಉದ್ದೇಶವನ್ನು ಕೂಡ ಹೊಂದಲಾಗಿತ್ತು.

ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿ ನೆಲ್ಲಿಹುದಿಕೇರಿ ಭಾಗದ ನದಿದಂಡೆ ನಿವಾಸಿಗಳು ಮನೆಗಳನ್ನು ಕಳೆದುಕೊಂಡು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಅಲ್ಲದೆ ಅಪಾಯದಂಚಿನಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸುವ ಬಗ್ಗೆಯೂ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿತ್ತು. ಹೀಗೆ ಸಂತ್ರಸ್ತರಾಗುವ ಮಂದಿಗೆ ಪರ್ಯಾಯ ನಿವೇಶನ ನೀಡಬೇಕೆನ್ನುವ ಉದ್ದೇಶದಿಂದ ಅಭ್ಯತ್‌ಮಂಗಲ ಗ್ರಾಮದಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಿ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದಂತೆ ಉಪವಿಭಾಗಾಧಿಕಾರಿ ನಂಜುAಡೇಗೌಡ *ಸಿದ್ದಾಪುರ, ಜು. ೧೦: ಅಭ್ಯತ್‌ಮಂಗಲ ಮತ್ತು ಅರೆಕಾಡು ಗ್ರಾಮದ ಗಡಿಯಲ್ಲಿರುವ ಸುಮಾರು ೧೧.೨೮ ಏಕರೆ ಪೈಸಾರಿ ಜಾಗವನ್ನು ಸ್ಥಳೀಯ ನಿವೇಶನ ರಹಿತರಿಗೆ ಮೀಸಲಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿಗಳ ಆಶಯದಂತೆ ನಿವೇಶನ ಮತ್ತು ವಸತಿ ರಹಿತ ಗ್ರಾಮೀಣರಿಗೆ ಈ ಸೌಲಭ್ಯ ನೀಡಲೆಂದು ಸರ್ವೆ ಸಂಖ್ಯೆ ೮೭/೨ ರಲ್ಲಿರುವ ಪೈಸಾರಿ ಜಾಗದ ಸರ್ವೆ ಕಾರ್ಯ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಮಾಜಿ ಸದಸ್ಯ ಅಂಚೆಮನೆ ಸುಧಿಕುಮಾರ್ ಅವರ ಕಾಳಜಿಯಿಂದ ನಡೆದಿತ್ತು. ಅಲ್ಲದೆ ಗ್ರಾಮದಲ್ಲಿರುವ ನಿವೇಶನ ರಹಿತ ೨೯೬ ಕುಟುಂಬಗಳನ್ನು ಜಿಪಿಎಸ್ ಸರ್ವೆ ಮೂಲಕ ಪತ್ತೆ ಮಾಡಲಾಗಿತ್ತು. ಇವರುಗಳಿಗೆ ಪೈಸಾರಿ ಜಾಗವನ್ನು ಹಂಚಿಕೆ ಮಾಡಬೇಕೆನ್ನುವ ಉದ್ದೇಶವನ್ನು ಕೂಡ ಹೊಂದಲಾಗಿತ್ತು.

ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿ ನೆಲ್ಲಿಹುದಿಕೇರಿ ಭಾಗದ ನದಿದಂಡೆ ನಿವಾಸಿಗಳು ಮನೆಗಳನ್ನು ಕಳೆದುಕೊಂಡು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಅಲ್ಲದೆ ಅಪಾಯದಂಚಿನಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸುವ ಬಗ್ಗೆಯೂ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿತ್ತು. ಹೀಗೆ ಸಂತ್ರಸ್ತರಾಗುವ ಮಂದಿಗೆ ಪರ್ಯಾಯ ನಿವೇಶನ ನೀಡಬೇಕೆನ್ನುವ ಉದ್ದೇಶದಿಂದ ಅಭ್ಯತ್‌ಮಂಗಲ ಗ್ರಾಮದಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಿ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದಂತೆ ಉಪವಿಭಾಗಾಧಿಕಾರಿ ನಂಜುAಡೇಗೌಡ ಅವರ ನೇತೃತ್ವದಲ್ಲಿ ಇದೇ ಪೈಸಾರಿ ಜಾಗದ ಸರ್ವೆ ಕಾರ್ಯ ನಡೆಸಿ ಸುಮಾರು ೮.೨೮ ಎಕರೆ ಪ್ರದೇಶವನ್ನು ಸಂತ್ರಸ್ತರಿಗಾಗಿ ಮೀಸಲಿಡಲಾಯಿತು.

ನಂತರ ೭೦ ಸಂತ್ರಸ್ತ ಕುಟುಂಬಗಳಿಗೆ ಈ ಜಾಗಕ್ಕೆ ಸ್ಥಳಾಂತರಗೊಳ್ಳುವAತೆ ತಿಳಿಸಲಾಯಿತು. ಅಲ್ಲದೆ ಹಲವರಿಗೆ ಲಾಟರಿ ಮೂಲಕ ನಿವೇಶನಗಳನ್ನು ಗುರುತಿಸಿಕೊಡಲಾಗಿತ್ತು. ಆದರೆ ಈ ಪ್ರದೇಶಕ್ಕೆ ಬರಲು ಯಾವ ಕುಟುಂಬವೂ ಒಪ್ಪದೇ ಇದ್ದ ಕಾರಣ ಇಂದಿಗೂ ೧೧.೨೮ ಎಕರೆ ಪೈಸಾರಿ ಜಾಗ ಹಾಗೇ ಉಳಿದುಕೊಂಡಿದೆ.

ಸ್ಥಳೀಯರಿಗೆ ನೀಡಿ

ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಂತ ನಿವೇಶನವಿಲ್ಲದ ಸುಮಾರು ೩೦೦ ಕುಟುಂಬಗಳಿವೆ. ಇವರಿಗೆ ಮೊದಲ ಆದ್ಯತೆಯಾಗಿ ಅಭ್ಯತ್‌ಮಂಗಲ ಗಡಿಭಾಗದ ಪೈಸಾರಿ ಜಾಗವನ್ನು ಹಂಚಿಕೆ ಮಾಡಬೇಕು. ನಂತರ ಉಳಿದ ಜಾಗವನ್ನು ಇತರ ಪಂಚಾಯಿತಿಯ ಮಳೆಹಾನಿ ಸಂತ್ರಸ್ತರಿಗೆ ನೀಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಧ್ಯದಲ್ಲಿಯೇ ಶಾಸಕರು ಹಾಗೂ ಕಂದಾಯ ಸಚಿವರ ಬಳಿಗೆ ನಿಯೋಗ ತೆರಳಿ ನಿವೇಶನ ರಹಿತರ ಬಗ್ಗೆ ವಿವರಿಸಲಾಗುವುದು ಎಂದು ಹೇಳಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ಬಿ.ಎಸ್. ಅನಿತಾ ಮಾತನಾಡಿ, ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನೇಕರು ಮನೆ ಇಲ್ಲದೆ ಪರದಾಡುತ್ತಿದ್ದಾರೆ. ಸ್ಥಳೀಯರಿಗೆ ಮೊದಲು ನಿವೇಶನವನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.