ಕೂಡಿಗೆ, ಜು. ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಸವನತ್ತೂರು ಗ್ರಾಮದ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೂ. ೩ ಲಕ್ಷ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಉದ್ಯಾನವನ ನಿರ್ಮಾಣ ಹಾಗೂ ಮಳೆಕುಯ್ಲು ಅಳವಡಿಕೆ ಕಾಮಗಾರಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಇಂದಿರಾ ರಮೇಶ್, ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾ.ಪಂ. ವತಿಯಿಂದ ಸುಂದರ ಉದ್ಯಾನವನ ನಿರ್ಮಾಣದ ಮೂಲಕ ಶಾಲಾ ಕೈತೋಟ ಹಾಗೂ ಮಳೆ ನೀರು ಕುಯ್ಲು ಯೋಜನೆ ಅಳವಡಿಸಲಾಗುತ್ತಿದೆ. ಇಂತಹ ಸುಂದರ ಉದ್ಯಾನವನ ನಿರ್ಮಾಣದ ಮೂಲಕ ಸರ್ಕಾರಿ ಶಾಲೆಗಳ ಆಕರ್ಷಣೆ ಹಾಗೂ ಸಬಲೀಕರಣಕ್ಕೆ ಪ್ರಯತ್ನ ಕೈಗೊಳ್ಳಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸಂತೋಷ್, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಬಿ.ಸಿ. ರಾಜು, ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ರಂಗಸ್ವಾಮಿ, ಗ್ರಾ.ಪಂ. ಸದಸ್ಯರಾದ ಜೆ. ಫಿಲೋಮಿನಾ, ಚಂದ್ರು ಮೂಡ್ಲಿಗೌಡ, ಗೌರಮ್ಮ, ಕೂಡಿಗೆ ಪದವಿಪೂರ್ವ ಕಾಲೇಜು ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಟಿ.ಕೆ. ವನಜಾಕ್ಷಿ, ಕೂಡು ಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸಿ.ಆರ್.ಪಿ. ಮುಬೀನಾ ಕೌಸರ್, ಶಿಕ್ಷಕರಾದ ಹೆಚ್.ಟಿ. ನಾಗರಾಜ್, ಹೆಚ್.ಎಸ್. ಶೈಲಜಾ, ಎನ್.ಡಿ. ಸೋಮಶೇಖರ್ ಇತರರು ಇದ್ದರು.