ಮಡಿಕೇರಿ, ಜು. ೧೦: ತೋಟದಲ್ಲಿ ಬೆಳೆದು ನಿಂತಿದ್ದ ಬೀಟೆ ಮರವನ್ನು ಕಡಿದು ಸಾಗಾಟ ಮಾಡಿದ ಆರೋಪಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಹಾಗೂ ಡಿಸಿಐಬಿ ಘಟಕ ಪೊಲೀಸರು ಯಶಸ್ವಿಯಾಗಿದ್ದಾರೆ.
ವಾಲ್ನೂರು-ತ್ಯಾಗತ್ತೂರಿನ ಇಬ್ರಾಹಿಂ (೨೭), ಎಂ.ಕೆ. ಉಮ್ಮರ್ (೩೩), ವಾಸಿಂ ಅಕ್ರಂ (೨೫) ಬಂಧಿತ ಆರೋಪಿಗಳು.
ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ. ಬೋಪಯ್ಯ ಅವರ ತೋಟದಲ್ಲಿ ಕಳೆದ ವರ್ಷ ಯಾರೋ ೮೦ ಅಡಿ ಉದ್ದದ ೫ ಅಡಿ ದಪ್ಪದ ಬೀಟೆ ಮರವನ್ನು ಕಳವು ಮಾಡಿದ್ದರು ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಸಂಬAಧ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ಕೈಗೊಂಡ ಪೊಲೀಸರು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ನಿರ್ದೇಶನ, ಪ್ರಭಾರ ಡಿವೈಎಸ್ಪಿ ಶೈಲೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ನಿರ್ದೇಶಕ ಎಸ್.ಎಸ್. ರವಿಕಿರಣ್, ಸಿಬ್ಬಂದಿಗಳಾದ ಕೆ.ಜೆ. ರವಿಕುಮಾರ್, ಎಂ.ಕೆ. ಮಹೇಶ್, ಕೆ.ಡಿ. ದಿನೇಶ್, ಡಿಸಿಐಬಿ ಘಟಕದ ಯೋಗೇಶ್, ನಿರಂಜನ್, ಅನಿಲ್ ಕುಮಾರ್, ಶರತ್ ರೈ ಇದ್ದರು.