ವೀರಾಜಪೇಟೆ, ಜು. ೧೦: ರಾಜ್ಯದಲ್ಲಿ ಅನ್‌ಲಾಕ್ ಆದರೂ ಕೊಡಗಿನ ಗಡಿ ಭಾಗ ಮಾಕುಟ್ಟ ಹಾಗೂ ಕುಟ್ಟದಲ್ಲಿ ಹಿಂದಿನAತೆ ಆರ್.ಟಿ.ಪಿ.ಸಿ.ಆರ್ ಹಾಗೂ ಎರಡು ಡೋಸ್ ಲಸಿಕೆ ಪಡೆದುಕೊಂಡವರಿಗೆ ಮಾತ್ರ ಜಿಲ್ಲೆಯೊಳಗೆ ಅವಕಾಶ ನೀಡಲಾಗುವುದು ಎಂದು ಶಾಸಕ ಕೆ.ಜಿ ಬೋಪಯ್ಯ ತಿಳಿಸಿದರು.

ವೀರಾಜಪೇಟೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕೇರಳ ಹಾಗೂ ಮಹಾರಾಷ್ಟçದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಕೇರಳದಲ್ಲಿ ಡೆಲ್ಟಾ ಹಾಗೂ ಕಪ್ಪಾ ವೈರಸ್ ಹಲವರಲ್ಲಿ ಕಾಣಿಸಿಕೊಂಡಿದೆ. ರಾಜ್ಯ ಅನ್‌ಲಾಕ್ ಆಗಿದೆ ಪ್ರವಾಸೋದ್ಯಮಕ್ಕೆ ಇಲ್ಲಿನ ವಾತಾವರಣ ಉತ್ತಮವಾಗಿದೆ ಎಂದು ನೇರವಾಗಿ ಜಿಲ್ಲೆ ಪ್ರವೇಶ ಅಸಾದ್ಯ. ಕೆಲವರು ೧೪ ದಿನದ ಆರ್‌ಟಿಪಿಸಿಆರ್ ವರದಿಯನ್ನು ತೋರಿಸಿದರೆ ಸಾಲದು. ೭೨ ಗಂಟೆಗಳ ವರದಿ ಹಾಗೂ ೨ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುವುದು. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದೇನೆ. ಕೇರದಿಂದ ಮಂಗಳೂರಿಗೆ ಬಂದು ಮಂಗಳೂರು ನೊಂದಣಿ ಸಂಖ್ಯೆಯ ವಾಹನದಲ್ಲಿ ಸಂಪಾಜೆ ಗೇಟ್‌ನ ಮೂಲಕ ಜಿಲ್ಲೆಯನ್ನು ಪ್ರವೇಶಿಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಸರಕು ಸಾಗಾಣಿಕ ವಾಹನ ಚಾಲಕರ ಕೋವಿಡ್ ಪರೀಕ್ಷಾ ವರದಿ ಒಂದೆರಡು ದಿನಗಳ ಅಂತರದಲ್ಲಿ ಅವಧಿ ಮೀರಿದ್ದರೆ ಉಚಿತವಾಗಿ ರ‍್ಯಾಪಿಡ್ ಪರೀಕ್ಷೆ ಚೆಕ್‌ಪೋಸ್ಟ್ನಲ್ಲಿ ನಡೆಸಲಾಗುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ದುಬಾರಿ ಹಣ ನೀಡಬೇಕಾಗಿರುವುದರಿಂದ ಕೆಲವರು ಅವಧಿ ಮೀರಿರುವ ವರದಿಯೊಂದಿಗೆ ಬಂದು ಟೆಸ್ಟ್ ನಡೆÀಸುವಂತೆ ಒತ್ತಾಯಿಸುತ್ತಿರುವ ದೂರುಗಳೂ ಕೇಳಿಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಗಳ ನಷ್ಟ ಸಂಭವಿಸುತ್ತದೆ. ಚೆಕ್‌ಪೋಸ್ಟ್ನಲ್ಲಿ ನಡೆಸುವ ರ‍್ಯಾಪಿಡ್ ಟೆಸ್ಟ್ ಕನಿಷ್ಟ ದರ ವಿಧಿಸುವಂತೆ ಜಿಲ್ಲಾಧಿಕಾರಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.