ಗೋಣಿಕೊಪ್ಪಲು, ಜು. ೧೦: ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಿ ಕಚೇರಿಗಳಿಗೆ ನಾಗರಿಕರು ತಮ್ಮ ಕೆಲಸದ ನಿಮಿತ್ತ ಅವಶ್ಯವಿರುವ ದಾಖಲಾತಿಗಳಿಗೆ ಅಲೆದಾಡುವ ಪರಿಸ್ಥಿತಿ, ನಿನ್ನೆ, ಮೊನ್ನೆಯದ್ದಲ್ಲ. ಕೊಟ್ಟ ದಾಖಲೆಗಳು ಕೂಡ ಕೆಲವು ಸಮಯದ ನಂತರ ಕಾಣೆಯಾಗಿ, ಮತ್ತೊಂದು ಪ್ರತಿ ನೀಡಿ ಸರ್ ಎಂದು ಕೇಳುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಜಿಲ್ಲೆಯಲ್ಲಿಯೇನು ಕಡಿಮೆ ಇಲ್ಲ. ಇಂತಹ ವ್ಯವಸ್ಥೆಗೆ ನಮ್ಮ ನಾಗರಿಕ ಸಮಾಜವು ಕೂಡ ಒಗ್ಗಿಕೊಂಡಿದೆ.!

ದಾಖಲಾತಿಗಳ ಜೋಡಣೆಯಲ್ಲಿ ಭಿನ್ನವೆಂಬತೆ ಅನುಭವೀ ಸಿಬ್ಬಂದಿಗಳ ಕಾರ್ಯ ತತ್ಪರತೆಯಿಂದಾಗಿ ಕೊಡಗು ಜಿಲ್ಲೆಯಲ್ಲಿಯೇ ತೀರಾ ಹಳೆಯ ಹಾಗೂ ಹೊಸ ದಾಖಲಾತಿಗಳ ಜೋಡಣೆಯಲ್ಲಿ ವೀರಾಜಪೇಟೆ ತಾಲೂಕಿನ ತಾಲೂಕು ಕಂದಾಯ ಕಚೇರಿ ಪ್ರಥಮ ಸ್ಥಾನದಲ್ಲಿದೆ.

ಕಂದಾಯ ಇಲಾಖೆಗೆ ಸಂಬAಧಿಸಿದ ಮ್ಯೂಟೆಷನ್, ಜಮಾಬಂಧಿ, ಎಂ.ಸಿ. ಕಾಫಿಗಳು ಸೇರಿದಂತೆ ರೈತ, ಕೃಷಿಕ, ಸಾರ್ವಜನಿ ಕರಿಗೆ ಬೇಕಾದ ದಾಖಲೆಗಳು ೧೯೭೯ ರಿಂದ ಇಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ದಾಖಲೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ.

೧೯೭೯ ದಿಂದಲೂ ವೀರಾಜಪೇಟೆ ತಾಲೂಕಿಗೆ ಸಂಬAಧಿಸಿದ ಅಮ್ಮತ್ತಿ, ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ, ಹುದಿಕೇರಿ ಹಾಗೂ ವೀರಾಜಪೇಟೆ ಹೋಬಳಿಗೆ ಅಡಕವಾಗಿರುವ ನೂರಾರು ಗ್ರಾಮಗಳ ದಾಖಲೆಗಳು ಇಲ್ಲಿ ಹೋಬಳಿವಾರು ಜೋಡಿಸಿಡಲಾಗಿದೆ.

ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕ್ಷಣಾರ್ಧದಲ್ಲಿ ಇಂತಹದ್ದೇ ಕಡತಗಳು ಇಂತಹ ಜಾಗದಲ್ಲಿ ಇದೆ ಎಂದು ಗುರುತಿಸುತ್ತಾರೆ. ದಾಖಲೆ ಜೋಡಣೆಗೆ ಇಲ್ಲಿನ ಗೋಪಾಲಕೃಷ್ಣ ಹಾಗೂ ಬಿ.ಕೆ. ದಿನೇಶ್ ಎಂಬ ಡಿ ದರ್ಜೆ ನೌಕರರು ಹಾಗೂ ರವಿ ಎಂಬ ದ್ವಿತೀಯ ದರ್ಜೆ ನೌಕರರು ಕಳೆದ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸಿಸು ತ್ತಿದ್ದಾರೆ.

ಯಾವ ಹೋಬಳಿ ದಾಖಲೆ ಯಾಗಲಿ, ಎಷ್ಟೇ ಹಳೆಯದಾಗಿರಲಿ, ಇಲ್ಲಿನ ಅನುಭವಿ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಹುಡುಕಿ ನಾಗರಿಕರಿಗೆ ನಿಯಮಾನುಸಾರ ಹಿರಿಯ ಅಧಿಕಾರಿಗಳ ಆದೇಶದಂತೆ ನೀಡುತ್ತಿದ್ದಾರೆ.

ಸದಾ ಹಸನ್ಮುಖಿಯಾಗಿ, ನಾಗರಿಕರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವ ಇಲ್ಲಿನ ಇಬ್ಬರು ಡಿ ದರ್ಜೆಯ ಸಿಬ್ಬಂದಿಗಳು ಎಷ್ಟೇ ಕೆಲಸ ಒತ್ತಡವಿರಲಿ, ಅಧಿಕಾರಿಗಳು, ಸಾರ್ವಜನಿಕರು ಕೇಳುವ ಕಡತಗಳನ್ನು ನಿಗದಿತ ಸಮಯದಲ್ಲಿ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಕಪಾಟುಗಳಲ್ಲಿ ದಿನ ನಿತ್ಯ ತೆಗೆಯುವ ದಾಖಲೆಗಳನ್ನು ಅಂದೇ ಜೋಡಿಸಿಡುವುದು ಇವರ ಕಾಯಕ.

ಕಳೆದ ೨೦ ವರ್ಷಗಳಿಂದ ಇಲ್ಲಿನ ಸಿಬ್ಬಂದಿಗಳಾದ ಗೋಪಾಲಕೃಷ್ಣ ಹಾಗೂ ಹತ್ತು ವರ್ಷಗಳಿಂದ ದಿನೇಶ್ ದಾಖಲೆ ನಿರ್ವಹಣೆ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೊನ್ನಂಪೇಟೆ ಹಾಗೂ ಕುಶಾಲನಗರ ಎರಡು ನೂತನ ತಾಲೂಕುಗಳು ಸೇರಿವೆ. ಉಳಿದಂತೆ ಸೋಮವಾರಪೇಟೆ, ವೀರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ಕಚೇರಿಯಲ್ಲಿ ಕಡತಗಳ ನಿರ್ವಹಣೆ ಗಾಗಿಯೇ ಪ್ರತ್ಯೇಕ ಕೊಠಡಿಗಳಿವೆ.

ಆದರೆ ಕಡತಗಳ ಜೋಡಣೆ ಹಾಗೂ ನಿರ್ವಹಣೆಯಲ್ಲಿ ವೀರಾಜಪೇಟೆ ತಾಲೂಕು ಕೇಂದ್ರ ಪ್ರಥಮ ಸ್ಥಾನದಲ್ಲಿದೆ. ಇಲ್ಲಿನ ಸಿಬ್ಬಂದಿಗಳ ಪ್ರಾಮಾಣಿಕ, ದಕ್ಷ ಆಡಳಿತದಿಂದಾಗಿ ಇಂತಹ ಕೆಲಸ ಗಳು ನಡೆಯಲು ಅವಕಾಶವಾಗಿವೆ.

- ಹೆಚ್.ಕೆ. ಜಗದೀಶ್